ಚಾಕೊಲೇಟ್ ಪ್ರಿಯೆ ವಧುವೊಬ್ಬಳು ಅರಶಿನ ಶಸ್ತ್ರಕ್ಕೆ ಚಾಕೋಲೇಟ್ ಗಳನ್ನ ಆಭರಣ ಮಾಡಿಕೊಂಡಿದ್ದು ಕೆಲವರು ಅಚ್ಚರಿಪಟ್ರೆ ಇನ್ನು ಕೆಲವರ ಬಾಯಲ್ಲಿ ನೀರೂರುವಂತೆ ಮಾಡಿದ್ದಾಳೆ.
ಭಾರತೀಯ ಮದುವೆಗಳೆಂದರೆ ಸಂಪ್ರದಾಯದ ಬದ್ದವಾಗಿ ನಡೆಯುತ್ತದೆ. ಇತ್ತೀಚಿನ ದಿನಗಳಲ್ಲಿ ಮದುವೆ ಹಲವಾರು ವಿಶೇಷತೆಗಳ ಕೇಂದ್ರಬಿಂದುವಾಗಿ ಬಿಟ್ಟಿದೆ. ಆಧುನಿಕತೆಗೆ ತಕ್ಕುದಾಗಿ ಅವರವರ ಅಭಿರುಚಿಗೆ ತಕ್ಕತೆ ಎಲ್ಲಾ ತಯಾರಿಗಳು ನಡೆಯುತ್ತದೆ. ಅಂತೆಯೇ ಇಲ್ಲೋಬ್ಬಳು ಮಧು ಅರಶಿನ ಶಾಸ್ತ್ರಕ್ಕೆ ರೆಡಿಯಾಗಿದ್ದು ತನ್ನ ಆಭರಣಗಳನ್ನ ಚಾಕೋಲೇಟ್‍ನಿಂದ ತಯಾರಿಸಿ ಅಲಂಕಾರ ಮಾಡಿಕೊಂಡಿದ್ದಾಳೆ. ಮಿಲ್ಕಿಬಾರ್, ಕ್ಯಾಡ್ಬರಿ, ಫೆರೇರೋ ರೋಚರ್, ಮ್ಯಾಂಗೋ ಬೈಟ್, ಕಿಟ್‍ಕ್ಯಾಟ್, ಫೈವ್ ಸ್ಟಾರ್ ಹೀಗೆ ಬಗೆ ಬಗೆಯ ಚಾಕೋಲೇಟ್‍ಗಳಿಂದ ಸರ, ಕಿವಿಯೋಲೆ, ನೆತ್ತಿಬೊಟ್ಟು, ಜಡೆ ಬಿಲ್ಲೆ ತಯಾರಿಸಿ, ಸಿಂಗರಿಸಿಕೊಂಡಿದ್ದಾಳೆ.
ಚೈತ್ರಾ ಫ್ಯಾಷನ್ ಸ್ಟುಡಿಯೋ ಎಂಬ ಇನ್‍ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ. ಈ ವಿಡಿಯೋಗೆ ಅನೇಕರು ಬಗೆ ಬಗೆಯ ಕಮೆಂಟ್‍ಗಳನ್ನ ಮಾಡಿದ್ದಾರೆ. ನೀವು ಮದುವೆಯಲ್ಲಿ ಮಕ್ಕಳಿಂದ ದೂರವಿರಬೇಕು ಎಂದು ಸಲಹೆ ನೀಡಿದ್ದಾರೆ. ಆಹ್ ಬಜೆಟ್ ಸ್ನೇಹಿ ಅಲಂಕಾರ ಮತ್ತು ಆಭರಣಗಳು ಎಂದು ಮತ್ತೊಬ್ಬರು ಹೇಳಿದ್ದಾರೆ. ನೀವು ಮಕ್ಕಳಿಂದ ಅಷ್ಟೇ ಅಲ್ಲ ಇರುವೆಗಳಿಂದಲೂ ದೂರ ಇರಬೇಕು. ಇಲ್ಲವಾದರೆ ನಿಮ್ಮ ಮದುವೆ ಎನ್ನುವುದು……….. ಎಂದು ಮಗದೊಬ್ಬರು ಹೇಳಿದ್ದಾರೆ.
ನಾನು ಅಲ್ಲಿದ್ದರೆ ಖಂಡಿತ ಈ ಎಲ್ಲಾ ಚಾಕೊಲೇಟ್‍ಗಳನ್ನು ತಿನ್ನುತ್ತಿದ್ದೆ ಎಂದಿದ್ದಾರೆ ಇನ್ನೂ ಒಬ್ಬರು. ಬಟ್ಟೆಗಳನ್ನೂ ಚಾಕೊಲೇಟುಗಳಿಂದ ಯಾಕೆ ಅಲಂಕರಿಸಿಕೊಂಡಿಲ್ಲ ಎಂದು ಮತ್ತೊಬ್ಬರು ಕೇಳಿದ್ದಾರೆ. ಶ್ರಮವನ್ನು ಮೆಚ್ಚುವಂಥದ್ದು, ಆದರೆ ಇದು ಅರ್ಥಹೀನ ಎಂದು ಒಬ್ಬರು ಹೇಳಿದ್ದಾರೆ. ಇವಳಿಗೆ ಹುಚ್ಚು ಹಿಡಿದಿದೆಯಾ ಎಂದು ಮತ್ತೊಬ್ಬರು ಕೇಳಿದ್ದಾರೆ. ಇಷ್ಟೆಲ್ಲಾ ಖಾಲೀ ಸಮಯ ಇದೆಯಾ ಜನರ ಬಳಿ? ಎಂದು ಒಬ್ಬರು ಕೇಳಿದ್ದಾರೆ.
ಅನೇಕರು ಅವರವರ ಶ್ರಮ, ಸೃಜನಶೀಲತೆಗೆ ಮೆಚ್ಚಿಕೊಂಡು ಭೇಪ್ ಎಂದಿದ್ದು, ಈ ಸ್ಟೈಲ್‍ಗೆ ಕಮೆಂಟ್‍ಗಳ ಸುರಿಮಳೆಯೇ ಸುರಿದಿದೆ.