ಜ. 31 ರಂದು ನಡೆಯಲಿದೆ ಪ್ರಗತಿಬಂದು ಸ್ವ -ಸಹಾಯ ಸಂಘಗಳ ಒಕ್ಕೂಟ ವಿಟ್ಲ ಇದರ ವತಿಯಿಂದ ಕೇಂದ್ರ ಒಕ್ಕೂಟ ಪದಗ್ರಹಣ ಹಾಗೂ ಸಮಾವೇಶ –ಕಹಳೆ ನ್ಯೂಸ್
ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್(ರಿ) ವಿಟ್ಲ ತಾಲೂಕು, ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆ ವಿಟ್ಲ ತಾಲೂಕು ಪ್ರಗತಿಬಂದು ಸ್ವ -ಸಹಾಯ ಸಂಘಗಳ ಒಕ್ಕೂಟ ವಿಟ್ಲ ತಾಲೂಕು ಇದರ ವತಿಯಿಂದ ಕೇಂದ್ರ ಒಕ್ಕೂಟ ಪದಗ್ರಹಣ, ನವಜೀವನ ಸದಸ್ಯರ ಸಮಾವೇಶ ಮತ್ತು ಪ್ರಗತಿಬಂದು ತಂಡಗಳಿಗೆ ಕೃಷಿ ಸಲಕರಣೆ ವಿತರಣೆ ಹಾಗೂ ಒಕ್ಕೂಟಗಳ ಸಾಧನಾ ಸಮಾವೇಶ ಅಯೋಜಿಸಲಾಗಿದೆ. ಜ. 31 ರಂದು ಮಂಗಳವಾರ ಭಾರತ್ ಆಡಿಟೋರಿಯಂ ಚಂದಳಿಕೆ ವಿಟ್ಲ ಇಲ್ಲಿ ಪ್ರಗತಿಬಂದು ಸ್ವ- ಸಹಾಯ ಸಂಘಗಳ ಕೇಂದ್ರ ಒಕ್ಕೂಟ ವಿಟ್ಲ ಇದರ ಅಧ್ಯಕ್ಷರಾದ ನವೀನ್ ಚಂದ್ರ ಇವರ ಅಧ್ಯಕ್ಷತೆಯಲ್ಲಿ ನಡೆಯಲಿದೆ.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ಮಹಾಲಕ್ಷ್ಮಿ ಕ್ಷೇತ್ರ ಶ್ರೀ ದಾಮ ಮಾಣಿಲ ಇಲ್ಲಿನ ಪೂಜ್ಯ ಶ್ರೀ ಶ್ರೀ ಪರಮಹಂಸ ಮೋಹನದಾಸ ಸ್ವಾಮೀಜಿ ನೆರೆವೇರಿಸಲಿದು, ಪುತ್ತೂರು ವಿಧಾನ ಸಭಾ ಕ್ಷೆತ್ರದ ಶಾಸಕರಾದ ಸಂಜೀವ ಮಠದೂರು ಕೃಷಿ ಸಲಕರಣೆಗಳನ್ನು ವಿತರಣೆ ಮಾಡಲಿದ್ದು, ಬಂಟ್ವಾಳ ವಿಧಾನ ಸಭಾ ಕ್ಷೆತ್ರದ ಶಾಸಕರಾದ ಶ್ರೀ ರಾಜೇಶ್ ನಾಯಕ್ ವಿವಿಧ ಅನುಧಾನಗಳ ವಿತರಣೆ ಮಾಡಲಿದ್ದು, ಮಾಜಿ ಸಚಿವರಾದ ಶ್ರೀ ರಮಾನಾಥ ರೈ ಅಯುಷ್ಮಾನು ಕಾರ್ಡ್ ವಿತರಣೆ ಮಾಡಲಿರುವರು.
ಮುಖ್ಯ ಅತಿಥಿಗಳಾಗಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಇದರ ಕರಾವಳಿ ಪ್ರಾದೇಶಿಕ ನಿರ್ದೇಶಕರಾದ ವಸಂತ ಸಾಲಿಯಾನ್, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ (ರಿ) ಧರ್ಮಸ್ಥಳ ನಿರ್ದೇಶಕರಾದ ಮನೋಜ್ ಮೆನೇಜಸ್, ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆ ಬಂಟ್ವಾಳ ತಾಲೂಕು ಅಧ್ಯಕ್ಷರಾದ ರೋನಾಲ್ಡ್ ಡಿಸೋಜ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿರುದ್ಧಿ ಯೋಜನೆ ಬಿ ಸಿ ಟ್ರಸ್ಟ್( ರಿ)ದಕ್ಷಿಣ ಕನ್ನಡ 2 ಜಿಲ್ಲಾ ನಿರ್ದೇಶಕರಾದ ಪ್ರವೀಣ್ ಕುಮಾರ್, ಜನಜಾಗ್ರತಿ ವೇದಿಕೆ ವಿಟ್ಲ ವಲಯ ಅಧ್ಯಕ್ಷರಾದ ಕೃಷ್ಣಯ್ಯ ಬಲ್ಲಾಳ್, ಇಕೋ ಗ್ಲಾಸ್ ಕಂಪನಿ ಮಾಲಕರಾದ ರಾಜಾರಾಮ್ ಸಿ ಜಿ,
ಅಖಿಲ ಕರ್ನಾಟಕ ಜನಜಾಗ್ರತಿ ವೇದಿಕೆ ಬಂಟ್ವಾಳ ತಾಲೂಕಿನ ನಿಕಟಪೂರ್ವ ಅಧ್ಯಕ್ಷರಾದ ಬಾಲಕೃಷ್ಣ ಆಳ್ವಾ ಕೊಡಾಜೆ ಮೊದಲದವರು ಭಾಗವಹಿಸಲಿದರೆ ಎಂದು ಗ್ರಾಮಭಿವೃದ್ಧಿ ಯೋಜನೆಯ ವಿಟ್ಲ ತಾಲೂಕು ಯೋಜನಾಧಿಕಾರಿ ಚೆನ್ನಪ್ಪ ಗೌಡ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.