Sunday, November 24, 2024
ಸುದ್ದಿ

ಲವೀಶ್‌ನ ಚಿಕಿತ್ಸೆಗಾಗಿ ನೆರವಾದ ಶ್ರೀ ಶಾರದಾ ಫ್ರೆಂಡ್ಸ್ ಸರ್ಕಲ್ ಸಜೀಪಮುನ್ನೂರು ಯುವಕರ ತಂಡ : ಆಪತ್ಬಾಂಧವ ಸಂತೋಷ್ ಶೆಟ್ಟಿ ದಳಂದಿಲ -ಕಹಳೆ ನ್ಯೂಸ್

ಶ್ವೇತಾ ನಿತಿನ್ ಪೂಜಾರಿ ಅವರ ಮಗು ಲವೀಶ್ ಈತನ ಚಿಕಿತ್ಸೆಗಾಗಿ ಭವತಿ ಭಿಕ್ಷಾದೇಹಿ ಮೂಲಕ ಒಟ್ಟು ಸೇರಿಸಿದ ರೂ.1,09,896 ನ್ನು ಮಗುವಿನ ಕುಟುಂಬಕ್ಕೆ ಹಸ್ತಾಂತರ ಮಾಡಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಬಂಟ್ವಾಳ ತಾಲೂಕಿನ ನೀರಾಜೆ ನಿವಾಸಿಯಾಗಿರುವ ಲವೀಶ್ ಎಂಬ ಪುಟ್ಟ ಮಗುವಿನ ಶಸ್ತ್ರ ಚಿಕಿತ್ಸೆಗಾಗಿ ಬೆಂಗಳೂರಿನ ನಾರಾಯಣ ಹೃದಾಲಯಕ್ಕೆ ದಾಖಲಿಸಬೇಕಿತ್ತು. ಈ ವೇಳೆ ಮಗುವಿನ ಚಿಕಿತ್ಸೆಗೆ ಸುಮಾರು 7 ಲಕ್ಷ ರೂ ವೆಚ್ಚ ತಗಲುತ್ತದೆ ಎಂಬ ವಿಚಾರವನ್ನು ವೈದ್ಯ ತಂಡ ಮಗುವಿನ ಪೋಷಕರಲ್ಲಿ ತಿಳಿಸಿದ್ರು.
ಕೂಲಿ ಮಾಡಿ ಜೀವನ ಸಾಗಿಸುವ ಈ ಬಡ ಕುಟುಂಬಕ್ಕೆ ಮಗುವಿನ ಶಸ್ತ್ರ ಚಿಕಿತ್ಸೆ ವೆಚ್ಚ ಬರಿಸೋದು ಕಷ್ಟಕರವಾಗಿದ್ದು, ಈ ಬಗ್ಗೆ ಚಿಂತಿಸಿ ಕಣ್ಣೀರುಹಾಕುತ್ತಿದ್ದರು.

ಈ ಸಂದರ್ಭದಲ್ಲಿ ಶ್ರೀ ಶಾರದಾ ಫ್ರೆಂಡ್ಸ್ ಸರ್ಕಲ್ ಸಜೀಪಮುನ್ನೂರಿನ ಯುವಕರ ತಂಡ ಮಗುವಿನ ಚಿಕಿತ್ಸಾ ಹೆಚ್ಚ ಭರಿಸುವ ಪಣ ತೊಟ್ಟು, ಮಗುವಿನ ಚಿಕಿತ್ಸೆಗಾಗಿ ಕಣ್ಣೀರು ಹಾಕುವ ಕುಟುಂಬಕ್ಕೆ ನೆರವಿನ ಹಸ್ತ ನೀಡಿ ಧೈರ್ಯ ತುಂಬಿದವರು.

ಈ ಹಿಂದೆಯೂ ಅನೇಕ ಅಶಕ್ತರಿಗೆ ನೆರವಾದ ಈ ಸಂಘಟನೆ, ಇದೀಗ 10 ನೇ ಮಾಸಿಕ ಯೋಜನೆಯ ಮೂಲಕ ಲವೀಶ್ ಅವರಿಗೆ ಲಕ್ಷ ಹಣವನ್ನು ನೀಡಿ ಮಾನವೀಯತೆ ಮೆರೆದಿದ್ದಾರೆ.

ಆಪತ್ಬಾಂಧವ ಸಂತೋಷ್ ಶೆಟ್ಟಿ ದಳಂದಿಲ ಭವತಿ ಬಿಕ್ಷಾದೇಹಿ ಮೂಲಕ ಜೋಡಿಸಿದ ಹಣ ಲವೀಶ್ ನ ಚಿಕಿತ್ಸೆ ಸಾಕಾಗುವುದಿಲ್ಲ ಎಂಬ ಚಿಂತೆಯಲ್ಲಿರುವ ಕುಟುಂಬಕ್ಕೆ ಮುಂಬಯಿಯ ಕಾರ್ಪೋರೆಟರ್ ಯುವ ಉದ್ಯಮಿ ಸಜೀಪ ನಿವಾಸಿ ಸಂತೋಷ್ ಶೆಟ್ಟಿ ದಳಂದಿಳ ನೆರವಾಗಿದ್ದಾರೆ.

ಶಾರದ ಫ್ರೆಂಡ್ಸ್ ಸರ್ಕಲ್‌ನ ಯುವಕರು ಮಗುವಿನ ಚಿಕಿತ್ಸೆಗಾಗಿ ಸಹಾಯದ ಬಗ್ಗೆ ಕೇಳಿದಾಗ ಅವರು ಬೆಂಗಳೂರಿನ ನಾರಾಯಣ ಹೃದಯಾಲಯದ ಖ್ಯಾತ ವೈದ್ಯ ದೇವಿಪ್ರಸಾದ್ ಅವರ ಸಂಪರ್ಕ ಮಾಡಿ ಬಡ ಕುಟುಂಬದ ಮಗುವಿನ ಶಸ್ತ್ರ ಚಿಕಿತ್ಸೆಯ ವೆಚ್ಚವನ್ನು ಕಡಿಮೆ ಮಾಡಬೇಕು ಎಂದು ವಿನಂತಿಸಿಕೊAಡ ಹಿನ್ನೆಲೆಯಲ್ಲಿ ವೈದ್ಯರು ಒಪ್ಪಿಕೊಂಡಿದ್ದು, ಕೇವಲ 1.5 ಲಕ್ಷ ದಲ್ಲಿ ಶಸ್ತ್ರ ಚಿಕಿತ್ಸೆ ಮಾಡಿದ್ದಾರೆ.