ಹಿಂದೂಗಳ ಪರಮ ಶ್ರದ್ಧಾಕೇಂದ್ರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಮುಂಭಾಗದ ಪುತ್ತೂರು ಕಂಬಳ ಕೂಟದಲ್ಲಿ ನಟಿಯೊಂದಿಗೆ ಅನುಚಿತ ವರ್ತನೆ ತೋರಿಸಿದ ಅನ್ಯಮತೀಯ ಯುವಕ..! – ಮಹಿಳೆಯರ ಅಪಮಾನ ಖಂಡಿಸಿ, ಸುರಕ್ಷತೆ ಪರ ಧ್ವನಿ ಎತ್ತಿ ಸುದ್ದಿಗೋಷ್ಠಿ ನಡೆಸುತ್ತಿದ್ದ, ಶಕುಂತಲಾ ಶೆಟ್ಟಿಯವರ ನೇತೃತ್ವದ ಕಂಬಳದಲ್ಲೇ ಹೀಗಾಗಬಾರದಿತ್ತು…! ” ನನಗೆ ಯಾರು ಹೇಳೇ ಇಲ್ಲ.. ಗೊತ್ತೇ ಇಲ್ಲ…! ” ಎಂದು ಮಾಜಿ ಶಾಸಕಿ – ಕಹಳೆ ನ್ಯೂಸ್
ಪುತ್ತೂರು : ದಿವಂಗತ ಜಯಂತ್ ರೈಯವರು ಆರಂಭಿಸಿ, ದಿವಂಗತ ಮುತ್ತಪ್ಪ ರೈಯವರ ನೇತೃತ್ವದಲ್ಲಿ ಮುನ್ನಡೆವುತ್ತಿದ್ದ, ಪುತ್ತೂರು ಕಂಬಳ 30 ವರ್ಷಗಳನ್ನು ಪೂರೈಸಿದೆ. ಪ್ರಸ್ತುತ ರಾಜಕೀಯ ನಾಯಕರೇ ಮುಂಚೂಣಿಯಲ್ಲಿ ನಿಂತು ಈ ಕಂಬವನ್ನು ಮುನ್ನಡೆಸುತ್ತಿದ್ದಾರೆ. ಅದರಲ್ಲೂ ಚಂದ್ರಹಾಸ ರೈ, ಶಕುಂತಲಾ ಶೆಟ್ಟಿಯವರಂತಹ ಮಾಹಾನಾಯಕರು ಈಗ ನೇತೃತ್ವ ನೀಡಿದ್ದಾರೆ.
ಪುತ್ತೂರು ಕಂಬಳ ಸಮಸ್ತ ಹಿಂದೂಗಳ ಪವಿತ್ರ ಕ್ಷೇತ್ರ, ಮಹಾತೋಭಾರ ಪುತ್ತೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನದ ದೇವರ ಗದ್ದೆಯಲ್ಲಿ ನಡೆಯುವ ಕಾರಣದಿಂದ ಪುತ್ತೂರಿನ ಕಂಬಳ ಉಳಿದ ಕಂಬಳ ಕೂಟದಂತೆ ಅಲ್ಲ, ಪಾವಿತ್ರ್ಯತೆ ಮತ್ತು ಶ್ರದ್ಧೆಗೆ ಹೆಚ್ಚಿನ ಮಹತ್ವ ನೀಡುಬೇಕಾಗಿದೆ.
ಏನಿದು ಅಚಾತುರ್ಯ ..!? :
30ನೇ ಕೋಟಿ ಚೆನ್ನಯ್ಯ ಜೋಡುಕರೆ ಕಂಬಳ ಕೂಟದಲ್ಲಿ ಬಿಗ್ ಬಾಸ್ ಸ್ಪರ್ಧಿ ಸಾನಿಯಾ ಅಯ್ಯರ್ ಹಾಗೂ ಆಕೆಯ ಸ್ನೇಹಿತರು ಭಾಗಿಯಾಗಿದ್ರು, ಈ ಸಂದರ್ಭದಲ್ಲಿ ಆಕೆಯನ್ನು ಹಾಗೂ ಸ್ನೇಹಿತೆಯರನ್ನು ಅನ್ಯಮತೀಯನೊಬ್ಬ ಚೂಡಾಯಿಸಿ, ಅಪಮಾನ ನಡೆಸಿದ ಪ್ರಸಂಗ ನಡೆದಿದೆ.
ಶನಿವಾರ ರಾತ್ರಿ ನಡೆದ ಕಂಬಳ ಕೂಟಕ್ಕೆ ಸಾನಿಯಾ ಅತಿಥಿಯಾಗಿ ಆಗಮಿಸಿದ್ದರು. ಪುತ್ತೂರು ಜನರನ್ನು ಪ್ರೀತಿಯಿಂದಲೇ ‘ಐ ಲವ್ ಯೂ ಪುತ್ತೂರು’ ಎಂದು ಘೋಷಣೆಯೊಂದಿಗೆ ಮಾತುಗಳನ್ನು ಆಡಿದ್ದರು. ಸಾನಿಯಾ ‘ಐ ಲವ್ ಯೂ ಪುತ್ತೂರು’ ಎಂದು ಭಾಷಣ ಮಾಡುತ್ತಿದ್ದಂತೆಯೇ ಅಲ್ಲಿಯೇ ಕೂತಿದ್ದ ಅಭಿಮಾನಿ ‘ಐ ಲವ್ ಯೂ ಸಾನಿಯಾ’ (I Love You Sanya) ಎಂದು ಪ್ರತಿಯಾಗಿ ಕೂಗಿದ್ದಾನೆ. ಐದಾರು ಬಾರಿ ಈ ರೀತಿ ಆಗಾಗ್ಗೆ ಹೇಳಿದ್ದಾನೆ. ಸಾನಿಯಾ ಭಾಷಣ ಮುಗಿದಿ ವೇದಿಕೆಯಿಂದ ಕೆಳಗಿಳಿಯುತ್ತಿದ್ದಂತೆಯೇ ಆ ಅಭಿಮಾನಿಯ ಎಂದು ಹೇಳಿಕೊಂಡು ಒಂದಿಷ್ಟು ಪುಂಡಕೂಟ ಕಟ್ಟಿಕೊಂಡು ಅನ್ಯಮತೀಯನೊಬ್ಬ ಸೆಲ್ಫಿ ನೆಪದಲ್ಲಿ ಬಂದು ಸಾನಿಯಾರ ಕೈ ಹಿಡಿದಿದ್ದಾನೆ. ಹಾಗೂ ಸ್ನೇಹಿತೆ ಒಬ್ಬಳನ್ನು ಚುಡಾಯಿಸುವ ಪ್ರಯತ್ನ ಮಾಡಿದ್ದಾನೆ. ಸಾನಿಯಾ ಕೋಪದಿಂದಲೇ ಸೆಲ್ಫಿ ಕೊಡಲು ನಿರಾಕರಿಸಿದ್ದಾರೆ. ಹಾಗೂ ಸ್ಪಲ್ಪ ಸಮಯದ ಕಾಲ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಘಟನೆಯಿಂದ ತೀವ್ರವಾಗಿ ನೊಂದಿರುವ ನಟಿ ಹಾಗೂ ಆಕೆಯ ಸ್ನೇಹಿತೆಯರು ಸ್ವಾರಿ ಕೇಳುವಂತೆ ಆಗ್ರಹಿಸಿದ್ರು, ಅಷ್ಟರಲ್ಲಿ ಹುಡುವರ ಈ ನಡೆ ಅಲ್ಲಿದ್ದವರಿಗೆ ಕೋಪ ತರಿಸಿದೆ. ಅಲ್ಲದೇ ಆ ಹುಡುಗ ನಶೆಯಲ್ಲಿ ಇದ್ದ ಎಂದು ತಿಳಿಯುತ್ತಿದ್ದಂತೆಯೇ ಅಲ್ಲಿದ್ದವರು ಅವನಿಗೆ ಧರ್ಮದೇಟು ನೀಡಿದ್ದಾರೆ. ಕಂಬಳದಿಂದಲೇ ಅವನನ್ನು ಆಚೆ ಕಳುಹಿಸಿದ್ದಾರೆ.. ಆದರೆ , ಈ ಕುರಿತು ಪೊಲೀಸರಿಗೆ ಯಾರೂ ಮಾಹಿತಿ ನೀಡಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಿಷಿಕೇಶ್ ಸೋನಾವಣೆ ತಿಳಿಸಿದ್ದಾರೆ.
ಪುತ್ತೂರು ಕಂಬಳದಲ್ಲಿ ಮಹಿಳೆಯರಿಗಾದ ಅಪಮಾನ ಖಂಡೀಯ :
ಈ ಕುರಿತು ಕಹಳೆ ನ್ಯೂಸ್ ಗೆ ಮಾಹಿತಿ ನೀಡದಿ ಪ್ರತ್ಯಕ್ಷಧರ್ಶಿ ಒಬ್ಬರು ಮಹಿಳೆಯರ ರಕ್ಷಣೆ, ಮಹಿಳೆಯ ಪರ ಧ್ವನಿ ಎತ್ತತ್ತಾ ಸುದ್ದಿಗೋಷ್ಠಿಗಳ ಮೇಲೆ ಸುದ್ದಿಗೋಷ್ಠಿ ಮಾಡುವ ಮಾಜಿ ಶಾಸಕಿ ಶಕುಂತಲಾ ಶೆಟ್ಟಿಯವರ ನೇತೃತ್ವದ ಕಂಬಳದಲ್ಲಿ ಹೀಗಾಗಬಾರದಿತ್ತು, ಎಂದು ಹೇಳಿದ್ದಾರೆ.
ನನಗೆ ಗೊತ್ತೇ ಇಲ್ಲ, ನನ್ನಲ್ಲಿ ಯಾರು ಹೇಳಿಲ್ಲ..!
ಈ ಘಟನೆಗೆ ಪ್ರತಿಕ್ರಿಯೆ ನೀಡಿದ ಮಾಜಿ ಶಾಸಕಿ ಶಕುಂತಲಾ ಟಿ. ಶೆಟ್ಟಿ ನನಗೆ ಗೊತ್ತೇ ಇಲ್ಲ, ಈ ಬಗ್ಗೆ ನನಗೆ ಯಾರು ಮಾಹಿತಿ ನೀಡಿಲ್ಲ ಹಾಗೂ ನಿನ್ನೆ ಕೊರಗಜ್ಜನ ಕಟ್ಟೆಯ ಬಳಿ, ನಟಿಯ ಸ್ನೇಹಿತರ ಸಿಕ್ಕುದ್ರು, ಅವರೂ ಏನೂ ಈ ಬಗ್ಗೆ ಹೇಳಿಲ್ಲ, ಎಂದು ಕಹಳೆ ನ್ಯೂಸ್ ಗೆ ಹೇಳಿದ್ದಾರೆ.
ಒಟ್ಟಿನಲ್ಲಿ ಮಹಾಲಿಂಗೇಶ್ವರ ದೇವರ ಮುಂಭಾಗದಲ್ಲಿ ಅದೂ ಕಂಬಳದಂತಹ ಪವಿತ್ರ ತುಳುನಾಡಿನ ಆರಾಧನಾ ಜನಪದ ಕೂಟದಲ್ಲಿ ಇಂತಹ ಘಟನೆ ನಡೆದಿರುವುದು ಅತ್ಯಂತ ನೋವಿನ ಸಂಗತಿ ಎಂದು ಕಂಬಳಾಭಿಮಾನಿಗಳು ಕಳವಳ ವ್ಯಕ್ತಪಡಿಸಿದ್ದಾರೆ.