Recent Posts

Monday, January 20, 2025
ದಕ್ಷಿಣ ಕನ್ನಡಬೆಳ್ತಂಗಡಿಸುದ್ದಿ

ಪಾಂಚಜನ್ಯ ಗೆಳೆಯರ ಬಳಗ ವಿಷ್ಣುನಗರ ಇದರ 7ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ನಡೆದ ವಿವಿಧ ಆಟೋಟ ಸ್ಪರ್ಧೆಗಳು –ಕಹಳೆ ನ್ಯೂಸ್

ಪಾಂಚಜನ್ಯ ಗೆಳೆಯರ ಬಳಗ ವಿಷ್ಣುನಗರ ಪಾಂಜಾಳ ಬಂದಾರು ಇದರ 7ನೇ ವರ್ಷದ ವಾರ್ಷಿಕೋತ್ಸವದ ಪ್ರಯುಕ್ತ ಆಟೋಟ ಸ್ಪರ್ಧೆಗಳನ್ನು ಶ್ರೀ ವಿಷ್ಣುಮೂರ್ತಿ ದೇವಸ್ಥಾನ ಪೆಲತ್ತಿಮಾರು ಬಂದಾರು ನಲ್ಲಿ ಆಯೋಜಿಸಲಾಗಿತ್ತು.ಭಜನಾ ಕಾರ್ಯಕ್ರಮವನ್ನು ಜಯಾನಂದ ಗೌಡ ಪಾದೆ ಹಾಗೂ ಸುಬ್ರಾಯ ಹೊಳ್ಳ ಉದ್ಘಾಟಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಹಿನ್ನಲೆ ಸಭಾ ಕಾರ್ಯಕ್ರಮ ನಡೆದಿದ್ದು, ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿಷ್ಣುನಗರ ಪಾಂಚಜನ್ಯ ಗೆಳೆಯರ ಬಳಗದ ಅಧ್ಯಕ್ಷರಾದ ಆಶೋಕ ಗೌಡ ವಹಿಸಿದ್ದರು. ಹಿಂದೂ ಜನಜಾಗೃತಿ ಸಮಿತಿಯ ಆನಂದ ಗೌಡ ಅವರು ಧಾರ್ಮಿಕ ಉಪನ್ಯಾಸವನ್ನು ನೀಡಿದ್ರು. ಕಾರ್ಯಕ್ರಮದ ಬಳಿಕ ಸುಮಾರು 41 ವರ್ಷದಿಂದ ಬಸ್ ಸೇವೆಯನ್ನು ನೀಡಿದ ‘ರಾಘವೇಂದ್ರ’ ಬಸ್ ಮಾಲಕರಾದ ಕೆ ಹರಿಶ್ಚಂದ್ರ ಭಟ್ ಮತ್ತು ರಾಜ್ಯಮಟ್ಟದ ಅಕ್ಷರ ಸಿರಿ ಪ್ರಶಸ್ತಿಗೆ ಆಯ್ಕೆಯಾದ ಸ.ಹಿ.ಪ್ರಾ ಬಂದಾರು ಶಾಲೆಯ ದೈಹಿಕ ಶಿಕ್ಷಣ ಶಿಕ್ಷಕರಾದ ಪ್ರಶಾಂತ್ ಹಾಗೂ ವಾಲಿಬಾಲ್ ರಾಷ್ರ್ಟ ಮಟ್ಟಕ್ಕೆ ಆಯ್ಕೆಯಾದ ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.

ಇನ್ನೂ ಈ ಕಾರ್ಯಕ್ರಮದಲ್ಲಿ ಬಂದಾರು ಗ್ರಾ.ಪಂ ಅಧ್ಯಕ್ಷರಾದ ಪರಮೇಶ್ವರಿ ಗೌಡ, ಬೆಳ್ತಂಗಡಿ ಭಾರತೀಯ ಮಜ್ದೂರ್ ಸಂಘದ ಅಧ್ಯಕ್ಷರಾದ ಉದಯ ಬಿ.ಕೆ, ಪೆಲತ್ತಿಮಾರು ವಿಷ್ಣುಮೂರ್ತಿ ದೇವಸ್ಥಾನದ ಅಧ್ಯಕ್ಷರಾದ ಸುಂದರ ಗೌಡ ನಿನ್ನಿಕಲ್ಲು, ಗ್ರಾಫಿಕ್ಸ್ ಡಿಸೈನರ್‌ರಾದ ದೀಕ್ಷಿತ್ ಗೌಡ ಎರ್ಮಳ, ಮಾಜಿ ಅಧ್ಯಕ್ಷರಾದ ಪೆಲತ್ತಿಮಾರು ದೇಜಪ್ಪ ಗೌಡ ಪೊಯ್ಲಳೇ, ದೇಜಪ್ಪ ಗೌಡ ಬೊಳ್ಜ, ಕಾರ್ಯದರ್ಶಿ ಪ್ರತೀಕ್ ಗೌಡ, ಶ್ರೀಕೃಷ್ಣ ಹಾಗೂ ಮತ್ತಿತರರು ಉಪಸ್ಥಿತರಿದ್ದರು. ಗಣೇಶ್ ಕೆ. ಪ್ರಧಾನ ವ್ಯವಸ್ಥಾಪಕರು ಕಹಳೆ ನ್ಯೂಸ್ ಕಾರ್ಯಕ್ರಮ ನಿರೂಪಿಸಿದರು.

ವಾರ್ಷಿಕೋತ್ಸವದ ಪ್ರಯುಕ್ತ ನಡೆದ ಅಟೋಟ ಸ್ಪರ್ಧೆಯಲ್ಲಿ 1 ರಿಂದ 5ನೇ ತರಗತಿ ಬಾಲಕರ ವಿಭಾಗದ 100ಮೀ ಓಟದಲ್ಲಿ ಪನ್ವಿತ್ ಪ್ರಥಮ, ಅಶ್ವಿನ್ ದ್ವಿತೀಯ, ಬಾಲಕಿಯರ ವಿಭಾಗದಲ್ಲಿ ವರ್ಷ ಪ್ರಥಮ , ರಶ್ಮಿತಾ ದ್ವಿತೀಯ,, 6ರಿಂದ 8ನೆ ತರಗತಿ ಬಾಲಕರ 200ಮೀ ಓಟದಲ್ಲಿ ಪ್ರೀತಂ ಪ್ರಥಮ ಪ್ರಜ್ವಲ್ ದ್ವಿತೀಯ, ಬಾಲಕಿಯ ವಿಭಾಗದಲ್ಲಿ ಪ್ರಣಾಮಿ ಪ್ರಥಮ , ಸಿಂಚನ ದ್ವಿತೀಯ, ಕಬಡ್ಡಿ ಪಂದ್ಯಾಟದಲಲಿ ಚೇತನ್ ತಂಡ ಪ್ರಥಮ, ಪ್ರಜ್ವಲ್ ತಂಡ ದ್ವಿತೀಯ, ಸ್ಥಾನ ಗಳಿಸಿಕೊಂಡಿದ್ದಾರೆ. ಮಹಿಳೆಯರ ವಿಭಾಗದ ಗುಂಡು ಎಸೆತ ಸ್ಫರ್ಧೆಯಲ್ಲಿ ರೋಹಿಣಿ ನರಮಜೆ ಪ್ರಥಮ, ವಿಮಲ ದ್ವಿತೀಯ, ಪುರುಷರ ವಿಭಾಗದಲ್ಲಿ ಕೀಸೋರ್ ಪ್ರಥಮ, ಯೋಗಿಶ್ ಕೊಳ್ಳಕೋಡಿ ದ್ವಿತೀಯ, ಸ್ಥಾನ ಪಡೆದಿದ್ದಾರೆ. ಮಹಿಳೆಯರ ವಿಭಾಗದ ತ್ರೋಬಾಲ್ ಆಟದಲ್ಲಿ ರೋಹಿಣಿ ತಂಡ ಪ್ರಥಮ ಸ್ಥಾನ ಪಡೆದರೆ ರೇಷ್ಮಾರವರ ತಂಡ ದ್ವಿತೀಯ, ಸ್ಥಾನ ಗಳಿಸಿದ್ದಾರೆ. ಮಹಿಳೆಯ ಸಂಗೀತಾ ಕುರ್ಚಿ ಸ್ಪರ್ಧೆಯಲ್ಲಿ ನಿಖಿತಾ ಪ್ರಥಮ, ಪ್ರಣಮಿ ದ್ವಿತೀಯ ಸ್ಥಾನ ಪಡೆದಿದ್ದಾರೆ. ಪುರುಷರ ವಿಭಾಗದ ಹಗ್ಗಜಗ್ಗಾಟ ಸ್ಪರ್ಧೆಯಲ್ಲಿ ಗುರುಪ್ರಸಾದ್ ನಿನ್ನಿಕಲ್ಲು ತಂಡ ಪ್ರಥಮ, ಸಂದೇಶ್ ಕೊಳ್ಳಕೋಡಿ ತಂಡ ದ್ವಿತೀಯ ಸ್ಥಾನ ಪಡೆದಿದ್ದಾರೆ. ಮಹಿಳೆಯ ವಿಭಾಗದಲ್ಲಿ ಪ್ರಮಿಳ ತಂಡ ಪ್ರಥಮ, ನಿರ್ಮಾಳಾ ತಂಡ ದ್ವಿತೀಯ ಸ್ಥಾನ ಇನ್ನೂ ಬಾಲಕಿಯರ ವಿಭಾಗದಲ್ಲಿ ಭಾಗ್ಯಶ್ರೀ ತಂಡ ಪ್ರಥಮ, ಯಕ್ಷಿತಾ ತಂಡ ದ್ವಿತೀಯ ಸ್ಥಾನ ಗಳಿಸಿಕೊಂಡಿದ್ದಾರೆ. ಪುರುಷರ ವಾಲಿಬಾಲ್ ಪಂದ್ಯಾಟದಲ್ಲಿ ವಿಜೇತ್ ತಂಡ ಪ್ರಥಮ, ಪ್ರಸಾದ್ ತಂಡ ದ್ವಿತೀಯ ಸ್ಥಾನ ಪಡೆದುಕೊಂಡಿದ್ದಾರೆ.