Breaking News : ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ದಕ್ಷ ಪ್ರಮಾಣಿಕ ಕಾರ್ಯನಿರ್ವಾಹಣಾಧಿಕಾರಿಯ ಎತ್ತಂಗಡಿಗೆ ವ್ಯವಸ್ಥಿತ ಸಂಚು ; ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಸದಸ್ಯನ ಮಾಸ್ಟರ್ ಪ್ಲಾನ್ ಬಹಿರಂಗ, ಭಕ್ತರಿಂದ ಭಾರಿ ವಿರೋಧ – ಕಹಳೆ ನ್ಯೂಸ್
ಸುಬ್ರಹ್ಮಣ್ಯ : ವ್ಯವಸ್ಥಾಪನಾ ಸಮಿತಿಯಿಂದ ಕಾರ್ಯನಿರ್ವಾಹಕ ಅಧಿಕಾರಿಯನ್ನು ಎತ್ತಂಗಡಿ ಮಾಡಲು ವ್ಯವಸ್ಥಿತ ಸಂಚು ಈಗ ಬಯಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನದ ಹಾಲಿ ಕಾರ್ಯನಿರ್ವಾಹಣಾಧಿಕಾರಿ ರವಿಂದ್ರ ಅವರನ್ನು ಎತ್ತಂಗಡಿ ಮಾಡಲು ಆಡಳಿತ ಮಂಡಳಿಯ ಪ್ರಮುಖ ಇಬ್ಬರು ಸದಸ್ಯರು ಮತ್ತು ಖಾಸಗಿ ಸಂಘಟನೆಯೊಂದು ನಡೆಸಿದ ವ್ಯವಸ್ಥಿತ ಸಂಚು ಈಗ ಜನರಮುಂದೆಯೇ ಬಯಲಾಗಿದೆ.
ಹಿನ್ನಲೆ ಮತ್ತು ವ್ಯವಸ್ಥಿತ ಸಂಚು ಏನು ? :
ಕುಕ್ಕೆ ಸುಬ್ರಹ್ಮಣ್ಯ ಪುರಾಣ ಪ್ರಸಿದ್ಧ ದೇವಾಲಯ ಇಲ್ಲಿ ಸರಿ ಸಮಾರು 800 ವರ್ಷಗಳಿಂದ ಸುಬ್ರಯ ದೇವಸ್ಥಾನ ಮತ್ತು ಸಂಪುಟ ನರಸಿಂಹ ಸುಬ್ರಹ್ಮಣ್ಯ ಮಠ ಜೊತೆ ಜೊತೆಗೆ ಕಾರ್ಯನಿರ್ವಹಿಸುತ್ತಾ ಭಕ್ತರ ಕ್ಷೇಮವನ್ನು ಬಯಸುತ್ತಾ ಬಂದಿದೆ, ಆದರೆ ಕ್ಷೇತ್ರವು ಅಭಿವೃದ್ಧಿ ಹೊಂದುತ್ತಾ ಹೋದಂತೆ ಕ್ಷೇತ್ರ ಮೇಲೆ ಲೂಟಿಕೋರರ ಕಣ್ಣು ಬಿದ್ದಿದೆ, ದೇವಸ್ಥಾನ ಹುಂಡಿಯ ಹಣದಿಂದ ಹಿಡಿದು, ದೇವಾಲಯ ಸೇವಾ ರಸೀಧಿವರೆಗೂ ಅವ್ಯವಹಾರ ಭ್ರಷ್ಟಾಚಾರ ತಾಂಡವವಾಡುತ್ತಿದೆ. ಕ್ಷೇತ್ರದ ಸದ್ರಿ ಆಡಳಿತ ಮಂಡಳಿಯ ಪ್ರಮುಖ ಒಬ್ಬ ಸದಸ್ಯ ಮತ್ತು ಮಾಜಿ ಸದಸ್ಯರು ಹಾಗೂ ಹಿತರಕ್ಷಣಾ ವೇದಿಕೆ ಎಂಬ ಖಾಸಗಿ ಸಂಘಟನೆಯೊಂದು ಜೊತೆಯಾಗಿ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆ ತರುವ ಕೆಲಸಕ್ಕೆ ಮುಂದಾಗಿದೆ.
ಈ ಹಿಂದೆ ದೇವಾಲಯ ವಿರುದ್ಧವಾಗಿಗೆ ಉಪವಾಸ ಸತ್ಯಾಗ್ರಹ ನಡೆಸಿದ ಈ ಸಂಘಟನೆಯ ಪ್ರಮುಖರು ಈಗ ದೇವಸ್ಥಾನದ ಆಡಳಿತದ ಚುಕ್ಕಾಣಿಯನ್ನು ತಮ್ಮ ಕೈಯಲ್ಲಿ ಹಿಡಿದುಕೊಂಡು ದೇವಸ್ಥಾನದಲ್ಲಿ ಏನೆಲ್ಲಾ ಸಧ್ಯವೋ ಅಲ್ಲೆಲ್ಲಾ ಭ್ರಷ್ಟಾಚಾರ ನಡೆಸುತ್ತಿರುವುದು ಬೆಳಕಿಗೆ ಬಂದಿದ್ದು ಈ ಕುರಿತು ಖಾಸಗಿ ಮಾಧ್ಯಮ ( ಪಬ್ಲಿಕ್ ಟೀವಿ ) ಸೇರಿದಂತೆ ಅನೇಕ ವಾಹಿನಿಗಳಲ್ಲಿ ಸಾಕ್ಷಿ ಸಮೇತ ಪ್ರಸಾರವಾಗಿದ್ದು, ಹಾಲಿ ಸಮಿತಿ ಸದಸ್ಯರಾದ ಸನ್ಮಾನ್ಯ ಶ್ರೀ ಶ್ರೀ ಕೃಷ್ಣಮೂರ್ತಿ ಎಂಬವರ ಅಸಲಿ ಮುಖವಾಡ ಬಯಲಾಗಿತ್ತು, ಆದರೆ ಈಗ ಅದರ ಬೆನ್ನಲೆ ಇದೇ ಕೃಷ್ಣಮೂರ್ತಿ & ತಂಡದ ಇನ್ನೊಂದು ಕರ್ಮಕಾಂಡ ಬಯಲಾಗಿದೆ.
ಪಬ್ಲಿಕ್ ಟಿಇಯಲ್ಲಿ ಪ್ರಸಾರವಾದ ಕಾರ್ಯಕ್ರಮ :
ದಕ್ಷ ಪ್ರಮಾಣಿಕ ಮತ್ತು ತನ್ನದಾಯಿತು ತನ್ನ ಕೆಲಸವಾಹಿತು ಎಂದು ತನ್ನ ಪಾಡಿಗೆ ಕೆಲಸ ನಿರ್ವಹಿಸುತ್ತಿರು ಹಾಲಿ ದೇವಸ್ಥಾನದ ಕಾರ್ಯನಿವಾರ್ಹಣಾಧಿಕಾರಿಯಾದ ರವೀಂದ್ರರು ತಮ್ಮ ತಾಳಕ್ಕೆ ತಕ್ಕಂತೆ ಕುಣಿಯಿತ್ತಿಲ್ಲ, ತಮ್ಮ ಭ್ರಷ್ಟಾಚಾರಗಳಿಗೆ ತಡೆಗೋಡೆಯಾಗಿದ್ದಾರೆ ಎಂಬ ಕಾರಣಕ್ಕೆ ಅವರನ್ನು ಎತ್ತಂಗಡಿ ಮಾಡಿ ಅವರ ಸ್ಥಳಕ್ಕೆ ಸದ್ಯ ಕದ್ರಿಯಲ್ಲಿ ಕಾರ್ಯನಿರ್ವಹಿಸುತ್ತಿರು ನಿಂಗಯ್ಯರನ್ನು ಕರೆತರುವ ಪ್ರಯತ್ನದಲ್ಲಿದ್ದಾರೆ ಎಂಬ ಮಾಹಿತಿ ದೇವಸ್ಥಾನದ ಸುತ್ತ ಮುತ್ತ ಹರಿದಾಡುತ್ತಿದ್ದಂತೆ ಗ್ರಾಮಸ್ಥರು, ಸ್ಥಳೀಯರು ಮತ್ತು ಭಕ್ತರು ಇದಕ್ಕೆ ಭಾರೀ ವಿರೋಧ ವ್ಯಕ್ತಪಡಿಸಿದ್ದಾರೆ.
ಕುಕ್ಕೆ ಸುಬ್ರಹ್ಮಣ್ಯ ಭಕ್ತವೃಂದದಿಂದಲೂ ಭಾರೀ ವಿರೋಧ :
ದೇವಸ್ಥಾನದಲ್ಲಿ ನಡೆಯುತ್ತಿರುವ ಅವ್ಯವಹಾರ ಮತ್ತು ಮಾಸ್ಟರ್ ಪ್ಲಾನ್ ಕಮಿಟಿಯವರು ನಡೆಸುತ್ತಿರುವ ಅಸಮದ್ದ ವ್ಯವಸ್ಥೆಗಳ ವಿರುದ್ಧ ಮತ್ತು ದೇವಾಲಯ ಮತ್ತು ಮಠದ ನಡುವೆ ಕಂದಕ ಸೃಷ್ಟಿಸಿ ಭಕ್ತರಲ್ಲಿ ಗೊಂದಲ ಸೃಷ್ಟಿಸುವವರದ ವಿರುದ್ದ ಹಾಗೂ ದೇವಸ್ಥಾನದ ಕಾರ್ಯನಿರ್ವಾಹಣಾಧಿಕಾರಿಗಳ ಎತ್ತಂಗಡಿಗೆ ನಡೆಸಿದ ಶಂಚನ್ನು ಖಂಡಿಸಿ ಕುಕ್ಕೆ ಸುಬ್ರಹ್ಮಣ್ಯ ಭಕ್ತವೃಂದದಿಂದ ಬೀದಿಗಿಳಿದು ಹೋರಟ ನಡೆಸಲು ಸಿದ್ಧತೆ ನಡೆಸುತ್ತಿದೆ ಎಂದು ಸಂಘನೆಯ ಅಧ್ಯಕ್ಷ ಶಿವ ಭಟ್ ಕಹಳೆ ನ್ಯೂಸ್ ಗೆ ತಿಳಿಸಿದ್ದಾರೆ.