ಪುತ್ತೂರು : ‘ಟೀಮ್ ಒಳಿತು ಮಾಡು ಮನುಷ’ ನೊಂದವರೊಇಗೆ ನೆರವಿನ ಹಸ್ತ (ವಿಷನ್ ಸಹಾಯನಿಧಿ ಸೇವಾ ಟ್ರಸ್ಟ್ (ರಿ.) ಪುತ್ತೂರು ಇದರ ಆಶ್ರಯದಲ್ಲಿ JCI ಪುತ್ತೂರು, ಲಯನ್ಸ್ ಕ್ಲಬ್ ಪುತ್ತುರು, ಧನ್ವಂತರಿ ಕ್ಲಿನಿಕಲ್ ಲ್ಯಾಬೊರೇಟರಿ, ಸಹಯೋಗದೊಂದಿಗೆ, ಉಚಿತ ಮಧುಮೇಹ ಹಾಗೂ ನೇತ್ರದಾನ ನೋಂದಣಿ, ಅಧಿಕ ರಕ್ತದೊತ್ತಡ ತಪಾಸಣಾ ಶಿಬಿರ ಇದೇ ಜನವರಿ 30ರಂದು ಪುತ್ತೂರಿನ ಸೈನಿಕ ಭವನ ರಸ್ತೆಯಲ್ಲಿರುವ ಲಯನ್ ಸೇವಾ ಮಂದಿರ ಪುತ್ತೂರುನಲ್ಲಿ ನಡೆಯಿತು.
ಊರ ಪರವೂರ ಸಹೃದಯಿ ದಾನಿಗಳ ಸಹಕಾರದಿಂದ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಅಶಕ್ತರಿಗೆ ನಿರಂತರವಾಗಿ ಆಹಾರ ಸಾಮಗ್ರಿಗಳ ಕಿಟ್ ನೀಡುವ 20ನೇ ಯೋಜನೆ ಯಶಸ್ವಿಯಾಗಿ ನಡೆದಿದೆ.
ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ JCI ನ ಅಧ್ಯಕ್ಷರಾದ ಸುಹಾಸ್ ಮರಿಕೆ ಮಾತನಾಡಿ, ಸೇವೆ ಜೀವನದ ಶ್ರೇಷ್ಠವಾದ ಕೆಲಸ ,ನಾವು ಸಮಾಜಕ್ಕೆ ಒತ್ತು ಕೊಟ್ಟಾಗ ಅದು ಸೇವೆ ಆಗುತ್ತದೆ. ನಾವು ನಿಸ್ವಾರ್ಥದಲ್ಲಿ ಸೇವೆ ಮಾಡಿದಾಗ ಅದು ಸಮಾಜಕ್ಕೆ ಸೇವೆಯಾಗುತ್ತದೆ. ಸೇವೆಯು ಜೀವನದ ಪರಮ ದ್ಯೇಯ ಆಗಬೇಕು ಎಂದು ಶುಭಹಾರೈಸಿದರು.
ಇನೋರ್ವ ಮುಖ್ಯ ಅತಿಥಿ ಅಧ್ಯಕ್ಷರಾದ ಕೇಶವ ನಾಯ್ಕ್ ಮಾತನಾಡಿ,ಈ ಸಂಸ್ಥೆಯು ಉತ್ತಮವಾಗಿ ಬೆಳೆಯಲಿ,ಬಹಳ ಒಳ್ಳೆಯ ಕೆಲಸವನ್ನು ಮಾಡಿತಿದ್ದೆ ಇನ್ನು ಒಳ್ಳೆಯ ಕೆಲಸ ಮಾಡಲಿ ಹಾಗೂ ಆರೋಗ್ಯ ದ ಬಗ್ಗೆ ಮಾಹಿತಿ ನೀಡಿದರು ಯಶಸ್ವಿನಿ ಯೋಜನೆಯ ಬಗ್ಗೆ ಮಾಹಿತಿಯನ್ನು ನೀಡಿದರು ಇದು ಹಲವಾರು ಜನರಿಗೆ ಪ್ರಯೋಜನವಾಗಿದೆ ಜೀವನದಲ್ಲಿ ಆರೋಗ್ಯ ಮುಖ್ಯವಾಗಿ ಇರಬೇಕು ಎಂದು ಇಂತಹ ಮೆಚ್ಚುವ ಕಾರ್ಯ ಎಂದರು.
ಕಾರ್ಯ್ರಮದಲ್ಲಿ 60,000 ಸಾವಿರ ಮೊತ್ತದ 60ಆಹಾರ ಕಿಟ್ ವಿತರಣೆ ಮಾಡಲಾಯಿತು.ಹಾಗೂ 80 ಜನರಿಗೆ ಬಿಪಿ, ಸುಗರ್ ತಪಾಸಣೆ ಮಾಡಲಾಯ್ತು.
ಈ ಸಂದರ್ಭದಲ್ಲಿ ಟ್ರಸ್ಟ್ ನ ಪದಾಧಿಕಾರಗಳದ ಕಲಾವಿದ ಕೃಷ್ಣಪ್ಪ ಶಿವಾನಗರ ಪ್ರಧಾನ ಕಾರ್ಯದರ್ಶಿ ಮೋಹನ್ ಸಿಂಹವನ,ರಿಛಿ ಚೇತನ್ ಕುಮಾರ್ ಪುತ್ತೂರು, ಶ್ರೀಮತಿ ಶೋಭಾ ಮಡಿವಾಳ, ಹಾಗೂ ಯೋಜನಾಧಿಕರಿ ಕುಮಾರಿ ಸೌಜನ್ಯ ಆರ್ಲಪದವು ಹಾಜರಿದ್ದರು.
ಪ್ರಾರ್ಥನೆಯನ್ನು ಶ್ರುತಿಕ, ಹರ್ಷಿತಾ ನೆರವೇರಿಸಿ ಕೊಟ್ಟರು, ಸ್ವಾಗತವನ್ನು ಶ್ರುತಿಕ ಧನ್ಯವಾದವನ್ನು ಹರ್ಷಿತ ಹಾಗೂ ಕುಮಾರಿ ಸೌಜನ್ಯ ಆರ್ಲಪದವು ಕಾರ್ಯಕ್ರಮವನ್ನು ನಿರೂಪಿಸಿದರು.
ಟೀಮ್ ಒಳಿತು ಮಾಡು ಮನುಷ ತಂಡದಿAದ 44,45 ನೇ ಸಹಾಯನಿಧಿ ಯೋಜನೆಯ ಚೆಕ್ ವಿತರಣೆ
ಸಾಯಿ ಮುಗ್ರು ಬಂದರು ತಂಡದ ಪ್ರತಿಭಾವಂತ ಹಗ್ಗಜಗ್ಗಾಟದ ಆಟಗಾರದ ಕರಾಯ ಗ್ರಾಮದ ಹರೀಶ್ ನಾಯ್ಕ್ ಇವರು ತೀವ್ರ ಅನಾರೋಗ್ಯದ ಕಾರಣ KMC ಆಸ್ಪತ್ರೆ ಮಂಗಳೂರುನಲ್ಲಿ ಅರ್ನಿಯ ಆಪರೇಷನ್ ಚಿಕಿತ್ಸೆ ಪಡೆಯುತಿದ್ದರೆ. ಇವರಿಗೆ ಟೀಮ್ ಒಳಿತು ಮಾಡು ಮನುಷ(ವಿಷನ್ ಸಹಾಯ ನಿಧಿ ಸೇವಾ ಟ್ರಸ್ಟ್) ಪುತ್ತೂರು ತಂಡದಿAದ, 44 ನೇ ಯೋಜನೆಯಾಗಿ ರೂ.10000/- ಮೊತ್ತದ ಚೆಕ್ನ್ನ ನೀಡಲಾಗಿದೆ.
ಕಿಡ್ನಿ ಸಮಸ್ಯೆಯಿಂದ ಬಳಲುತಿರುವ ಬಡಗನ್ನೂರಿನ ಕು.ಅನನ್ಯ ಇವರಿಗೆ ಒಂದು ತಿಂಗಳಿಗೆ ಬೇಕಾಗಿರುವ 2750/- ರೂಪಾಯಿಯ ಔಷಧಿಯನ್ನು ನೀಡಲಾಯಿತು.
ಮಂಗಳೂರಿನ ಮಮತಾ ಇವರು ಕಿಡ್ನಿ ಸಮಸ್ಯೆಯಿಂದ ತೀರಿಹೋಗಿದ್ದು. ಅವರ ಕುಟುಂಬಕ್ಕೆ 2500 ರೂ ಸಹಾಯನಿಧಿ ನೀಡಲಾಯಿತು.