ನಾವು ಸಂಪಾದಿಸಿದ ಹಣ ಸೇಫ್ ಆಗಿ ಇರಲಿ ಎಂದು ನಾವು ಹಣವನ್ನ ಬ್ಯಾಂಕ್ ಅಕೌಂಟ್‌ನಲ್ಲಿ ಹಾಕ್ತೀವಿ… ಆ ಹಣವನ್ನ ನಾವು ಅಗತ್ಯ ಬಿದ್ದಾಗ ನಮಗೆ ಬೇಕಾದ ಹಾಗೇ ಎಟಿಎಂನಿAದ ತೆಗೆದು ಖರ್ಚಿ ಮಾಡ್ತೇವೆ.. ಕೆಲವೊಮ್ಮೆ ಎಟಿಎಂಗೆ ಕನ್ನ ಹಾಕೂ ಕಳ್ಳರ ಬಗ್ಗೆ ನಾವು ಕೇಳಿದ್ದೇವೆ. ಆದ್ರೆ ಎಟಿಂಎAಗೆ ಹಾಕಿದ ಹಣವನ್ನ ಇಲಿ ತಿಂದು ತೇಗಿದ್ರೆ ಹೇಗಿರುತ್ತೆ ಹೀಗೇನಾದ್ರೂ ನೀವು ಒಮ್ಮೆಯಾದ್ರೂ ಯೋಚನೆ ಮಾಡಿದ್ದೀರಾ..?
ಹೌದು ಇಂತಹ ಘಟನೆಯೊಂದು ಅಸ್ಸಾಂ ರಾಜ್ಯದಲ್ಲಿ ನಡೆದಿದೆ. ಇಲ್ಲಿ ತುಂಬ ಹಣವು ಸಡನ್ ಆಗಿ ಖಾಲಿ ಆದಾಗ ಜನರು ಬ್ಯಾಂಕ್ ಅವರ ಮೇಲೆ ಹೌಹಾರಿದ್ದರು. ಆದರೆ ನಿಜವಾಗಿಯೂ ಏನಾಗಿದೆ ಎಂದು ಪತ್ತೆ ಹಚ್ಚಿದಾಗ ಒಂದು ಸತ್ಯ ಬಯಲಿಗೆ ಬಂದಿದೆ.
“ಬ್ಯಾAಕ್ ಅಧಿಕಾರಿಗಳು ಕಳೆದ ವಾರ ಎಟಿಎಂ ಯಂತ್ರವನ್ನು ಪರಿಶೀಲಿಸಲು ಬಂದರು ಮತ್ತು ಅದನ್ನು ತೆರೆದಾಗ ಸತ್ತ ಇಲಿ ಮತ್ತು ಚೂರುಚೂರು ನೋಟುಗಳು ಕಂಡುಬAದವು” ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮುಗ್ಧಜ್ಯೋತಿ ದೇವ್ ಮಹಂತ ತಿಳಿಸಿದ್ದಾರೆ.
ಇಲಿಗಳು ಅಂದಾಜು 1.2 ಮಿಲಿಯನ್ ರೂಪಾಯಿ ಕಚ್ಚಿ ಹಾಕಿದೆ ಎಂದು ಸ್ಥಳೀಯ ಮಾಧ್ಯಮ ವರದಿ ಮಾಡಿದೆ. ಹರಿದ ಮತ್ತು ಚೂರುಚೂರಾದ 500 ಮತ್ತು 2,000 ರೂಪಾಯಿ ನೋಟುಗಳಿಂದ ತುಂಬಿದ ಎಟಿಎಂ ಅನ್ನು ಚಿತ್ರಗಳು ತೋರಿಸಿವೆ.
ಒಟ್ಟಿನಲ್ಲಿ ಲಕ್ಷಗಟ್ಟಲೆ ಹಣವನ್ನು ಕಚ್ಚಿ ಹಾಕಿದ ಇಲಿಯು ಒಂದು ವಾರ ಆದಮೇಲೆ ವಾಸನೆ ಬರಲು ಆರಂಭವಾಗಿದೆ. ಇದೇನಿದು ಎಂದು ಮಿಷನ್ ತೆಗೆದು ನೋಡಿದಾಗ ಈ ಅನಾಹುತ ಆಗಿರುವುದು ಬೆಳಕಿಗೆ ಬಂದಿದೆ.