ದಕ್ಷಿಣ ಭಾರತದ ವಿಜ್ಞಾನ ವಸ್ತು ಪ್ರದರ್ಶನ : ರಾಜ್ಯ ವಿಭಾಗದಲ್ಲಿ ಮೂಡಬಿದಿರೆಯ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಿಗೆ ಪ್ರಥಮ ಸ್ಥಾನ – ಕಹಳೆ ನ್ಯೂಸ್
ಮೂಡಬಿದಿರೆ : ಸಾಂಸ್ಕೃತಿಕ ಸಚಿವಾಲಯ ಭಾರತ ಸರ್ಕಾರದ ಆಯೋಜನೆಯಲ್ಲಿ ಕೇರಳದ ತ್ರಿಶೂರ್ ನಗರದಲ್ಲಿ ಜ.28 ರಿಂದ 31ರತನಕ ನಡೆದ ದಕ್ಷಿಣ ಭಾರತದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಕರ್ನಾಟಕದ ಮೂಡಬಿದಿರೆಯ ಎಕ್ಸಲೆಂಟ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಆದಿತ್ಯ ಆರ್ ಪುಣಿಚಿತ್ತಾಯ ಮತ್ತು ಅಪ್ರಮೇಯ ಭಟ್ ಸಿದ್ಧಪಡಿಸಿದ “ಇಂಧನ ಕಳ್ಳತನ ಪತ್ತೆ ಮಾಡುವ ಯಂತ್ರ” ಎನ್ನುವ ವಿಜ್ಞಾನ ಮಾದರಿಗೆ ಕರ್ನಾಟಕ ರಾಜ್ಯ ವಿಭಾಗದಲ್ಲಿ ಪ್ರಥಮ ಸ್ಥಾನ ಲಭಿಸಿದೆ.
ವಿಜ್ಞಾನ ಶಿಕ್ಷಕರಾದ ನಿರಂಜನ್ ಆರ್ ಪೂಜಾರಿ ಇವರು ವಿದ್ಯಾರ್ಥಿಗಳಿಗೆಮಾರ್ಗದರ್ಶನ ನೀಡಿದ್ದರು. ಕಳೆದ ತಿಂಗಳು ಧಾರವಾಡದಲ್ಲಿ ನಡೆದ ರಾಜ್ಯಮಟ್ಟದ ವಿಜ್ಞಾನ ಮಾದರಿ ಸ್ಪರ್ಧೆಯಲ್ಲಿ ಒಟ್ಟು 15 ವಿಜ್ಞಾನ ಮಾದರಿಗಳು ದಕ್ಷಿಣ ಭಾರತದ ವಿಜ್ಞಾನ ವಸ್ತು ಪ್ರದರ್ಶನಕ್ಕೆ ಆಯ್ಕೆಗೊಂಡು ಕರ್ನಾಟಕ ರಾಜ್ಯ ವಿಭಾಗ ಮಟ್ಟದ ಸ್ಪರ್ಧೆಯಲ್ಲಿ ತಂಡ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಗಳಿಸಿದೆ.
ವಿದ್ಯಾರ್ಥಿಗಳ ಈ ಸಾಧನೆಗೆ ಸಂಸ್ಥೆಯ ಅಧ್ಯಕ್ಷರಾದ ಯುವರಾಜ್ ಜೈನ್, ಕಾರ್ಯದರ್ಶಿ ರಶ್ಮಿತಾ ಜೈನ್, ಮುಖ್ಯೋಪಾಧ್ಯಾಯ ಶಿವಪ್ರಸಾದ್ ಭಟ್ ಬೋಧಕ, ಬೋಧಕೇತರ ವರ್ಗದವರು ಅಭಿನಂದನೆ ಸಲ್ಲಿಸಿದ್ದಾರೆ.