Sunday, November 24, 2024
ಸುದ್ದಿ

ಮಂಗಳೂರು ವಿಶ್ವವಿದ್ಯಾನಿಲಯವು ವಿವೇಚನಾ ರಹಿತವಾಗಿ, ಬೇಜವಾಬ್ದಾರಿತನದಿಂದ ವರ್ತಿಸುತ್ತಿದೆ; ಎಸ್‌ಆರ್ ಹರೀಶ್ ಆಚಾರ್ಯ ಟೀಕೆ –ಕಹಳೆ ನ್ಯೂಸ್

ಮಂಗಳೂರು ವಿಶ್ವವಿದ್ಯಾನಿಲಯವು ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ನೋಂದಾಯಿತ ಅಂಚೆ ಮೂಲಕ ಕಳುಹಿಸಿ ಕೊಡುವಂತೆ ಎಲ್ಲಾ ಪದವಿ ಕಾಲೇಜುಗಳ ಪ್ರಾಂಶುಪಾಲರಿಗೆ ಸುತ್ತೋಲೆಯನ್ನು ಹೊರಡಿಸಿದೆ. ಈ ಮೂಲಕ ಮಂಗಳೂರು ವಿಶ್ವವಿದ್ಯಾನಿಲಯವು ವಿವೇಚನಾ ರಹಿತವಾಗಿ ತನ್ನ ಸಾಮಾನ್ಯ ಜ್ಞಾನವನ್ನೂ ಕಳೆದುಕೊಂಡು ಅತ್ಯಂತ ಬೇಜವಾಬ್ದಾರಿತನದಿಂದ ವರ್ತಿಸುತ್ತಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪೂರ್ವ ಸಿಂಡಿಕೇಟ್ ಸದಸ್ಯರಾದ ಎಸ್‌ಆರ್ ಹರೀಶ್ ಆಚಾರ್ಯ ಅವರು ಟೀಕಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ವಿಶ್ವವಿದ್ಯಾನಿಲಯವು ಇದುವರೆಗೆ ಪದವಿ ಪರೀಕ್ಷೆಗಳ ಉತ್ತರ ಪತ್ರಿಕೆಗಳನ್ನು ಆಯಾಯ ದಿನವೇ ಸಂಬAಧಿತ ಕಾಲೇಜುಗಳಿಂದ ತಾನೇ ಸಂಗ್ರಹಿಸಿಕೊAಡು ಬರುತ್ತಿತ್ತು. ಆದರೆ ಸದರಿ ಸುತ್ತೋಲೆಯಂತೆ ಇನ್ನು ಮುಂದೆ ಕಾಲೇಜು ಪ್ರಾಂಶುಪಾಲರು ಪ್ರತೀ ದಿನ ಉತ್ತರ ಪತ್ರಿಕೆಗಳನ್ನು ನೋಂದಾಯಿತ ಅಂಚೆ ಮೂಲಕ ವಿಶ್ವವಿದ್ಯಾನಿಲಯಕ್ಕೆ ಕಳುಹಿಸಬೇಕಾಗಿದೆ. ವಿಶ್ವವಿದ್ಯಾನಿಲಯಕ್ಕೆ ನಿಜವಾಗಿಯೂ ವಿದ್ಯಾರ್ಥಿಗಳ ಉತ್ತರ ಪತ್ರಿಕೆಗಳಿಗಿರುವ ಮಹತ್ವ ಮತ್ತು ಅದರ ಮೌಲ್ಯ ತಿಳಿದಿದೆಯಾ? ಉತ್ತರ ಪತ್ರಿಕೆಗಳನ್ನು ಈ ರೀತಿ ಕಳುಹಿಸಿದಾಗ ಸಾಗಾಟದ ನಿರ್ವಹಣೆಯಲ್ಲಿ ಯಾವುದೇ ಲೋಪವಾಗಿ ಉತ್ತರ ಪತ್ರಿಕೆಗಳು ಹಾನಿಗೊಳಗಾದರೆ ಅದಕ್ಕೆ ಹೊಣೆಗಾರರು ಯಾರು? ಉತ್ತರ ಪತ್ರಿಕೆಗಳ ಪ್ರಮಾಣಕ್ಕೆ ಅನುಗುಣವಾಗಿ ಒಂದೊAದು ಉತ್ತರ ಪತ್ರಿಕೆಗಳ ಬಂಡಲ್ ಸುಮಾರು 15-20 ಕಿಲೋದಷ್ಟು ತೂಗುತ್ತದೆ. ಇಷ್ಟೊಂದು ತೂಕದ ಬಂಡಲ್‌ಗಳನ್ನು ಅಂಚೆ ಇಲಾಖೆಯು ಸ್ವೀಕರಿಸುತ್ತದೆಯೇ? ಹಾಗೆಯೇ ಈ ಅಂಚೆ ಸಾಗಾಣಿಕೆಯ ವೆಚ್ಚವನ್ನು ಕಾಲೇಜುಗಳು ಭರಿಸುವುದಾದರೆ ಅದು ಎಷ್ಟೊಂದು ವೆಚ್ಚದಾಯಕವಾಗಿದೆ ಎಂದು ವಿಶ್ವವಿದ್ಯಾನಿಲಯಕ್ಕೆ ಅರಿವಿದೆಯೇ? ಎಂದು ಅವರು ಪ್ರಶ್ನಿಸಿದ್ದಾರೆ.

ಮಂಗಳೂರು ವಿಶ್ವವಿದ್ಯಾನಿಲಯವು ಪರೀಕ್ಷಾಂಗ ವ್ಯವಹಾರದಲ್ಲಿ ದಿನೇ ದಿನೇ ಒಂದಲ್ಲ ಒಂದು ರೀತಿಯ ಅದ್ವಾನಗಳನ್ನು ಮಾಡುತ್ತಿದೆ. ಈ ರೀತಿಯ ಸುತ್ತೋಲೆಗಳನ್ನು ಅತ್ಯಂತ ವಿವೇಚನಾ ರಹಿತವಾಗಿ ಹೊರಡಿಸಿ ತನ್ನ ಸಾಮಾನ್ಯ ಜ್ಞಾನವನ್ನು ಕಳೆದುಕೊಂಡು ಬೇಜವಾಬ್ಧಾರಿತನದಿಂದ ವರ್ತಿಸುತ್ತಿದೆ. ಆದುದರಿಂದ ತಕ್ಷಣವೇ ರಾಜ್ಯ ಸರಕಾರವು ಮಧ್ಯ ಪ್ರವೇಶಿಸಿ ಸಂಬAಧಿತ ಅಧಿಕಾರಿಗಳ ಮೇಲೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಎಸ್ ಆರ್ ಹರೀಶ್ ಆಚಾರ್ಯ ಅವರು ಒತ್ತಾಯಿಸಿದ್ದಾರೆ.