Sunday, November 24, 2024
ಸುದ್ದಿ

ಉಡುಪಿ ಕಿನ್ನಿಮೂಲ್ಕಿ ಶ್ರೀವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಹಾಲಿ, ಮಾಜಿ ಹಾಗು ಭವಿಷ್ಯದ ನೇಕಾರರ ಸಮ್ಮಿಲನ, ವಿಚಾರ ಸಂಕಿರಣ ಮತ್ತುಗೌರವಾರ್ಪಣೆ ಕಾರ್ಯಕ್ರಮ ಯಶೋಗಾಥೆಗೊಂದು ಮುನ್ನುಡಿ – 2023 – ಕಹಳೆ ನ್ಯೂಸ್

ಉಡುಪಿ: ಪದ್ಮಶಾಲಿ ನೇಕಾರ ಪ್ರತಿಷ್ಠಾನ ಉಡುಪಿ ಇದರ ಆಶ್ರಯದಲ್ಲಿ ಉಡುಪಿ ಕಿನ್ನಿಮೂಲ್ಕಿ ಶ್ರೀ ವೀರಭದ್ರ ದೇವಸ್ಥಾನದ ಸಭಾಂಗಣದಲ್ಲಿ ಹಾಲಿ, ಮಾಜಿ ಹಾಗು ಭವಿಷ್ಯದ ನೇಕಾರರ ಸಮ್ಮಿಲನ, ವಿಚಾರ ಸಂಕಿರಣ ಮತ್ತುಗೌರವಾರ್ಪಣೆ ಕಾರ್ಯಕ್ರಮ ಯಶೋಗಾಥೆಗೊಂದು ಮುನ್ನುಡಿ – 2023 ನೆರವೇರಿತು

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದರ ಉದ್ಘಾಟನೆಯನ್ನು ಬೆಳಿಗ್ಗೆ ಉಡುಪಿ ಕಿನ್ನಿಮುಲ್ಕಿ ಶ್ರೀ ವೀರಭದ್ರ ದೇವಸ್ಥಾನದ ಆಡಳಿತ ಮೊತ್ತೇಸರರಾದ ಪ್ರಭಾಶಂಕರ್ ಪದ್ಮಶಾಲಿ ಇವರು ದೀಪ ಬೆಳಗಿಸುವ ಮೂಲಕವೇರಿಸಿ ಕೊಟ್ಟರು ಪ್ರತಿಷ್ಠಾನದ ಅಧ್ಯಕ್ಷರಾದ ರತ್ನಾಕರ್ ಇಂದ್ರಾಳಿಯವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದು ಸಮಾಜದ ವಿವಿಧ ಗಣ್ಯರು ಮುಖ್ಯ ಅತಿಥಿಗಳಾಗಿ ಉಪಸ್ಥಿತರಿದ್ದರು

ಉದ್ಘಾಟನಾ ಸಮಾರಂಭದಲ್ಲಿ ಉಡುಪಿ ಪ್ರಾಥಮಿಕ ನೇಕಾರ ಸೇವಾ ಸಹಕಾರಿ ಸಂಘದ ಆಡಳಿತ ಮಂಡಳಿಯ ಸದಸ್ಯರಾಗಿ ಆಯ್ಕೆಯಾದ ಪದ್ಮಶಾಲಿ ನೇಕಾರ ಪ್ರತಿಷ್ಠಾನದ ಸದಸ್ಯರಾದ ಗೀತಾ ಕೇಶವ್ ಶೆಟ್ಟಿಗಾರ್, ದೇವರಾಯ ಶೆಟ್ಟಿಗಾರ್, ಪ್ರೇಮಾನಂದ ಶೆಟ್ಟಿಗಾರ್, ಭಾರತಿ ಶೆಟ್ಟಿಗಾರ್, ಮಂಜುನಾಥ್ ಶೆಟ್ಟಿಗಾರ್, ಯಶೋಧ ಎಲ್ ಶೆಟ್ಟಿಗಾರ್,ಪಾಂಡುರAಗ ಶೆಟ್ಟಿಗಾರ್, ಮಂಜುನಾಥ್ ಮಣಿಪಾಲ ಹಾಗು ಕೇಶವ ಶೆಟ್ಟಿಗಾರ್ ಇವರನ್ನು ಅಭಿನಂದಿಸುವ ಕಾರ್ಯಕ್ರಮ ಹಮ್ಮಿ ಕೊಳ್ಳಲಾಯಿತು

ವಿದ್ಯಾರ್ಥಿಗಳಿಗೆ ಭಾಷಣ ಸ್ಪರ್ಧೆ, ಚರಕದಲ್ಲಿ ನೂಲು ಸುತ್ತುವ

ಸ್ಪರ್ಧೆ, ವಿದ್ಯಾರ್ಥಿಗಳಿಗೆ ಪ್ರಬಂಧ ಸ್ಪರ್ಧೆಯನ್ನು ಏರ್ಪಡಿಸಲಾಯಿತು

ಮದ್ಯಾಹ್ನ ನಡದ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಹಿರಿಯ ನ್ಯಾಯವಾದಿಗಳಾದ ಕೀರ್ತಿಶೇಷ ವಿಠಲ್ ಶೆಟ್ಟಿಗಾರ್ ರವರಿಗೆ ಪದ್ಮಶಾಲಿ ಅನರ್ಥ್ಯ ರತ್ನ ಮತ್ತು ಸಾಯಿರಾಂ ಟೆಸ್ಟೋರಿಯಂ ಸ್ಥಾಪಕರಾದ ಕೀರ್ತಿಶೇಷ ಸಂಜೀವ್ ಶೆಟ್ಟಿಗಾರ್ ರವರಿಗೆ ಪದ್ಮಶಾಲಿ ನೇಕಾರ ಭೂಷಣ ಪ್ರಶಸ್ತಿಗಳನ್ನು ಮರಣೋತ್ತರವಾಗಿ ನೀಡಲಾಯಿತು

ನಂತರ ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆಗಳನ್ನು ಮಾಡಿದ ಸಮಾಜದ ಪ್ರತಿಭಾವಂತರಾದ

ಜಯರಾಮ್ ಮಂಗಳೂರು, ರಾಹುಲ್ ಶೆಟ್ಟಿಗಾರ್ ಪರ್ಕಳ, ಮಹೇಶ್ ಶೆಟ್ಟಿಗಾರ್ ಕಾರ್ಕಳ

ಇವರಗಳನ್ನು ಗೌರವಿಸಲಾಯಿತು ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸುತ್ತಿರುವ ವಕ್ವಾಡಿ ಕರುಣಾಕರ್ ಶೆಟ್ಟಿಗಾರ್ ರವರಿಗೆ ಪದ್ಮಶಾಲಿ ಶೌರ್ಯ ಕೇಸರಿ ಪ್ರಶಸ್ತಿ ಪ್ರಧಾನ ಮಾಡಲಾಗುವುದು. ಹಿರಿಯ ನೇಕಾರರಾದ ಸಂಜೀವ ಶೆಟ್ಟಿಗಾರ್, ವಾಮನ್ ಶೆಟ್ಟಿಗಾರ್, ಶ್ರೀನಿವಾಸ್ ಶೆಟ್ಟಿಗಾರ್ ಮತ್ತು ರಾಘವ ಪದ್ಮಶಾಲಿ ಇವರನ್ನು ವಿಶೇಷವಾಗಿ ಗೌರವಿಸಲಾಯಿತು

ಪ್ರತಿಷ್ಠಾನದ ಉಪಾಧ್ಯಕ್ಷರಾದ ದತ್ತರಾಜ್ ಶೆಟ್ಟಿಗಾರ್ ರವರ ಅಧ್ಯಕ್ಷತೆಯಲ್ಲಿ ಬಳಿಕ ನಡೆಯುವಸಮಾರೋಪ ಸಮಾರಂಭದಲ್ಲಿ ವಿವಿಧ ಸ್ಪರ್ಧಾವಳಿಯ ವಿಜೇತರಿಗೆ ಬಹುಮಾನಗಳನ್ನು ವಿತರಿಸಲಾಯಿತು.