Sunday, January 19, 2025
ಸುದ್ದಿ

ಕೋಡಿಂಬಾಡಿಯ ಅಶ್ವತ್ಥಕಟ್ಟೆಯಲ್ಲಿ ಫೆ.4ರಂದು ನಡೆಯಲಿದೆ ಸಾರ್ವಜನಿಕ ಶ್ರೀಅಶ್ವತ್ಥಪೂಜೆ ಹಾಗೂ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ –ಕಹಳೆ ನ್ಯೂಸ್

ಪುತ್ತೂರು: ಕೋಡಿಂಬಾಡಿಯ ಅಶ್ವತ್ಥಕಟ್ಟೆಯಲ್ಲಿ, ಫೆ.4ರಂದು 5ನೇ ವರ್ಷದ ಸಾರ್ವಜನಿಕ ಶ್ರೀಅಶ್ವತ್ಥಪೂಜೆ ಹಾಗೂ 45ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ಪೂಜೆ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಫೆ.4ರಂದು ಬೆಳಗ್ಗೆ ವಿವಿಧ ತಂಡಗಳಿAದ ಏಕಾಹ ಭಜನೆ ಆರಂಭಗೊಳ್ಳಲಿದೆ. ಮಧ್ಯಾಹ್ನ 12 ಗಂಟೆಗೆ ಅಶ್ವತ್ಥಕಟ್ಟೆಯಲ್ಲಿ ಸಾರ್ವಜನಿಕ ಶ್ರೀಅಶ್ವತ್ಥಪೂಜೆ ನಡೆದು ಬಳಿಕ ಪ್ರಸಾದ ವಿತರಣೆ, ಸಾರ್ವಜನಿಕ ಅನ್ನಸಂತರ್ಪಣೆ ನಡೆಯಲಿದೆ. ಸಂಜೆ ಅಶ್ವತ್ಥಕಟ್ಟೆಯಲ್ಲಿ ಸಾರ್ವಜನಿಕ ಶ್ರೀ ಸತ್ಯನಾರಾಯಣ ಸೇವಾ ಸಮಿತಿಯಿಂದ 45ನೇ ವರ್ಷದ ಸಾರ್ವಜನಿಕ ಶ್ರೀ ಸತ್ಯನಾರಾಯಣ ವ್ರತ ಪೂಜೆ ನಡೆಯಲಿದೆ. ವೇ.ಮೂ. ಶ್ರೀವತ್ಸ ಕೆದಿಲಾಯ ಪೂಜೆ ಕಥಾವಾಚನ ನಡೆಸಿಕೊಡಲಿದ್ದಾರೆ. ಫೆ.5ರಂದು ಬೆಳಗ್ಗೆ 6 ಗಂಟೆಗೆ ಏಕಾಹ ಭಜನೆಯ ಮಂಗಳ ನಡೆಯಲಿದೆ.

ಇನ್ನು ಜ.7ರಂದು ಧರ್ಮಶ್ರೀ ಭಜನಾ ಮಂದಿರದ ವತಿಯಿಂದ ಭಜನಾ ಮಂದಿರಲ್ಲಿ ಮಹಾಗಣಪತಿ ಹೋಮ ನಡೆದು ಸಂಜೆ ಮಂದಿರದಿAದ ಮನೆ ಮನೆ ಭಜನೆಗೆ ಹೊರಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗಿತ್ತು. ಜ.7ರಿಂದ ಧರ್ಮಶ್ರೀ ಭಜನಾ ಮಂದಿರದ 16ನೇ ವರ್ಷದ ನಗರ ಭಜನೆ ನಡೆಯುತ್ತಿದ್ದು, ಫೆ.3ರಂದು ರಾತ್ರಿ ಮನೆ ಮನೆ ಭಜನೆ ಮುಗಿಸಿ ಮಂದಿರಕ್ಕೆ ಆಗಮಿಸುವ ಕಾರ್ಯಕ್ರಮ ನಡೆಯಲಿದೆ.