Sunday, November 24, 2024
ಕಾಸರಗೋಡುಸುದ್ದಿಸುಳ್ಯ

ಫೆ.13ರಿಂದ ಫೆ.17ರದವರೆಗೆ ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಧಾನ ಶ್ರೀ ಎಡನೀರು ಮಠ ಶ್ರೀ ವಿಷ್ಣುಮಂಗಲ ದೇವಾಲಯದ ವಾರ್ಷಿಕೋತ್ಸವ – ಕಹಳೆ ನ್ಯೂಸ್

ಜಗದ್ಗುರು ಶ್ರೀ ಶಂಕರಾಚಾರ್ಯ ಸಂಸ್ಧಾನ ಶ್ರೀ ಎಡನೀರು ಮಠದಲ್ಲಿ ಶ್ರೀ ವಿಷ್ಣುಮಂಗಲ ದೇವಾಲಯದ ವಾರ್ಷಿಕೋತ್ಸವ 13-2-2023ನೇ ಸೋಮವಾರದಿಂದ 17-2-2023ನೇ ಶುಕ್ರವಾರದವರೆಗೆ ನಡೆಯಲಿದೆ.
ಶ್ರೀಮದೆಡನೀರು ಮಠಾದೀಶರಾದ ಶ್ರೀ ಶ್ರೀ ಸಚ್ಚಿದಾನಂದ ಶ್ರೀಪಾದಂಗಳವರ ನೇತೃತ್ವ ಮತ್ತು ಅನುಗ್ರಹದೊಂದಿಗೆ ಹಾಗೂ ಶ್ರೀ ಕ್ಷೇತ್ರದ ತಂತ್ರಿವರ್ಯರಾದ ಬ್ರಹ್ಮಶ್ರೀ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಯವರ ತಾಂತ್ರಿಕತ್ವ ಮತ್ತು ಮಾರ್ಗದರ್ಶನದಲ್ಲಿ 5 ದಿನಗಳ ಕಾಲ ಶ್ರೀಕ್ಷೇತ್ರದಲ್ಲಿ ವಾರ್ಷಿಕೋತ್ಸವ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಫೆಬ್ರವರಿ 13ರಂದು ಬೆಳಗ್ಗೆ ಧ್ವಜಾರೋಹಣ, ಶ್ರೀಭೂತಬಲಿ, ಹಸಿರುವಾಣಿ ಮೆರವಣಿಗೆ, ಉಗ್ರಾಣ ಮೂಹೂರ್ತ, ರಾತ್ರಿ 8ರಿಂದ ದೀಪೋತ್ಸವ ನಡೆಯಲಿದೆ.
ಇದೇ ದಿನ ಸಂಜೆ 5 :30ಕ್ಕೆ ಭೂಮಿಕಾ ಪ್ರತಿಷ್ಠಾನ ಉಡುಪುಮೂಲೆ(ರಿ) ಇವರಿಂದ ವಿದುಷಿ ಶ್ರೀಮತಿ ಅನುಪಮಾ ರಾಘವೇಂದ್ರ ನಿರ್ದೇಶನದಲ್ಲಿ ‘ನೃತ್ಯ ಸಿಂಚನ’ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಫೆಬ್ರವರಿ 14ರಂದು ಬೆಳಗ್ಗೆ ಶ್ರೀ ಭೂತಬಲಿ, ರಾತ್ರಿ ದೀಪೋತ್ಸವ ನಡೆಯಲಿದೆ. ಸಂಜೆ 6:30ರಿಂದ ರಾಗಮಾಲಿಕೆ, ನೆಲ್ಲಿಕಟ್ಟೆ ಕಾಸರಗೋಡು ಇವರಿಂದ ‘ಭಕ್ತಿಗಾನ ಸಿಂಚನ’ ನಡೆಯಲಿದೆ.

ಫೆಬ್ರವರಿ 15ರಂದು ಶ್ರೀ ಭೂತಬಲಿ, ರಾತ್ರಿ ನಡುದೀಪೋತ್ಸವ ನಡೆಯಲಿದೆ.
ಸಂಜೆ ನೃತ್ಯ ನಿರತ ಬೆಂಗಳೂರು ಇದರ ನಿರ್ದೇಶಕಿ ವಿದುಷಿ ಡಾ.ನಿಶಿತಾ ಪುತ್ತೂರು ಇವರಿಂದ ‘ಭರತನಾಟ್ಯ’ ಪ್ರದರ್ಶನಗೊಳ್ಳಿದೆ.
ಫೆಬ್ರವರಿ 16ರಂದು ಶ್ರೀ ಭೂತಬಲಿ, ರಾತ್ರಿ ಅದ್ದೂರಿಯಾಗಿ ಬೆಡಿ ಉತ್ಸವ ನಡೆಯಲಿದೆ. ಬಳಿಕ ಶ್ರೀಮಠದ ಮುಂಭಾಗದಲ್ಲಿ ಪುಷ್ಪ ರಥೋತ್ಸವ, ನೂತನ ಮಹಾಧ್ವಾರ ಸಮರ್ಪಣೆ, ನೂತನ ದೇವರಕಟ್ಟೆ ಸಮರ್ಪಣೆ, ನೂತನ ಉತ್ಸವಮೂರ್ತಿ ಸಮರ್ಪಣೆ ನಡೆಯಲಿದೆ.
ಇದೇ ದಿನ ಸಂಜೆ ಡಾ. ಎನ್ ಜೆ ನಂದಿನಿ, ತಿರುವನಂತಪುರ ಮತ್ತು ಬಳಗದವರಿಂದ ನಂದನ ಗಾನಾಮೃತ ಸಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ.
ಇನ್ನು ಫೆಬ್ರವರಿ 17ರಂದು ಬೆಳಗ್ಗೆ ಶಯನೋದ್ಘಾಟನೆ, ಮಂಗಳಾಭಿಷೇಕ, ರಾತ್ರಿ ಶ್ರೀ ಮಠದ ಮುಂಭಾಗದಲ್ಲಿ ನೃತ್ಯೋತ್ಸವ, ತೆಪ್ಪೋತ್ಸವ, ಅವಭೃತಸ್ನಾನ, ಪ್ರಸಾದ ವಿತರಣೆ, ಧ್ವಜಾರೋಹಣ ನಡೆಯಲಿದೆ.

ಇದೇ ದಿನ ಸಂಜೆ 6:30ರಿಂದ ಬೆಂಗಳೂರಿನ ವಿದ್ವಾನ್ ಶ್ರೀ ಆನೂರು ಅನಂತಕೃಷ್ಣ ಶರ್ಮ ಇವರ ಸಂಯೋಜನೆಯಲ್ಲಿ, ಶ್ರೀಮತಿ ಮಂಗಳಾರವಿ, ಶ್ರೀಮತಿ ಸುನಿತಾ ಮುರಲಿ, ಶ್ರೀ ವಿನಯ ನಾಡಿಗ್ ಮತ್ತು ಬಳಗದಿಂದ ಭಕ್ತಿಭಾವ ಸಂಗಮ ಕಾರ್ಯಕ್ರಮ ನಡೆಯಲಿದೆ.