Sunday, January 19, 2025
ಸುದ್ದಿ

ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ; ಬೆಂಕಿಗೆ ಅಹುತಿಯಾದ ಗರ್ಭಿಣಿ ಮತ್ತು ಅವರ ಪತಿ –ಕಹಳೆ ನ್ಯೂಸ್

ಚಲಿಸುತ್ತಿದ್ದ ಕಾರಿನಲ್ಲಿ ಏಕಾಏಕಿ ಬೆಂಕಿ ಹೊತ್ತಿಕೊಂಡು ಗರ್ಭಿಣಿ ಮತ್ತು ಅವರ ಪತಿ ಸಜೀವ ದಹನವಾದ ಘಟನೆ ಕಣ್ಣೂರಿನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

೩೫ ವರ್ಷದ ವ್ಯಕ್ತಿ ಮತ್ತು ಅವರ ಪತ್ನಿ, ಗರ್ಭಿಣಿಯಾಗಿದ್ದ ೨೬ ವರ್ಷದ ಮಹಿಳೆ ಮೃತಪಟ್ಟವರು. ಗರ್ಭಿಣಿಯು ತಪಾಸಣೆಗಾಗಿ ಜಿಲ್ಲಾಸ್ಪತ್ರೆಗೆ ಹೋಗಿದ್ದಾಗ ಘಟನೆ ಸಂಭವಿಸಿದ್ದು, ಕಾರಿನಲ್ಲಿ ಒಟ್ಟು ಆರು ಮಂದಿ ಪ್ರಯಾಣಿಸುತ್ತಿದ್ದರು. ಹಿಂಬದಿ ಸೀಟ್‌ನಲ್ಲಿದ್ದ ಮಗು ಸಹಿತ ನಾಲ್ವರು ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ಕಣ್ಣೂರು ನಗರ ಪೊಲೀಸ್ ಕಮಿಷನರ್ ತಿಳಿಸಿದ್ದಾರೆ.

ಚಲಿಸುತ್ತಿದ್ದ ಕಾರಿನಲ್ಲಿ ಒಮ್ಮೆಗೆ ಬೆಂಕಿ ಹೊತ್ತಿಕೊಂಡಿದೆ. ಈ ವೇಳೆ ಮುಂಭಾಗದ ಬಾಗಿಲನ್ನು ತೆರೆಯಲು ದಂಪತಿಗೆ ಸಾಧ್ಯವಾಗಿಲ್ಲ. ಬೆಂಕಿ ಹೊತ್ತಿಕೊಳ್ಳುವುದನ್ನು ನೋಡಿದ ಸ್ಥಳೀಯರು ಕೂಡಲೇ ಓಡಿಬಂದು ಕಾರಿನಲ್ಲಿದ್ದವರನ್ನು ರಕ್ಷಿಸಲು ಪ್ರಯತ್ನಿಸಿದ್ದಾರೆ. ಆದರೆ ಇಂಧನ ತೈಲದ ಟ್ಯಾಂಕ್ ಸ್ಫೋಟದ ಭಯದಿಂದ ಅವರಿಗೆ ಒಳಗಿದ್ದ ದಂಪತಿಯನ್ನು ಬದುಕಿಸಲು ಸಾಧ್ಯವಾಗಲಿಲ್ಲ ಎಂದು ಪ್ರತ್ಯಕ್ಷದರ್ಶಿಯೊಬ್ಬರು ತಿಳಿಸಿದ್ದಾರೆ.

ಘಟನೆಗೆ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.