Recent Posts

Sunday, January 19, 2025
ಸುದ್ದಿ

ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ 7 ಜನ ಆತ್ಮಹತ್ಯೆ –ಕಹಳೆ ನ್ಯೂಸ್

ಸಾಲಬಾಧೆ ತಾಳಲಾರದೆ ಒಂದೇ ಕುಟುಂಬದ ೭ ಜನ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿರುವ ಘಟನೆ ರಾಮನಗರ ತಾಲೂಕಿನ ದೊಡ್ಡ ಮಣ್ಣಗುಡ್ಡೆ ಗ್ರಾಮದಲ್ಲಿ ನಡೆದಿದೆ. ವಿಷ ಸೇವಿಸಿದ ೭ ಜನರ ಪೈಕಿ ಮಂಗಳಮ್ಮ (೨೮) ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಸಾಲಭಾದೆ ತಾಳಲಾರದೆ. ೦೨ ರಂದು ಮಧ್ಯಾಹ್ನ ಜಮೀನಿನಲ್ಲಿ ಇಲಿ ಪಾಷಾಣ ಸೇವಿಸಿದ್ದಾರೆ. ವಿಷಯ ತಿಳಿದ ಸ್ಥಳೀಯರು ಸಂಜೆ ವೇಳೆ ರಾಮನಗರ ಜಿಲ್ಲಾಸ್ಪತ್ರೆಗೆ ದಾಖಲು ಮಾಡಿದ್ದಾರೆ. ರಾಮನಗರದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಮಂಡ್ಯ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳಮ್ಮ (೨೮), ಮಂಗಳಮ್ಮನ ಪತಿ ರಾಜು(೩೧), ಮಂಗಳಮ್ಮನ ತಾಯಿ ಸೊಮ್ಮಪುರದಮ್ಮ(೪೮), ಮಕ್ಕಳಾದ ಆಕಾಶ್(೯), ಕೃಷ್ಣ(೧೩), ಮಂಗಳಮ್ಮ ತಂಗಿ ಸವಿತಾ(೨೪) ಮತ್ತು ಸವಿತಾ ಮಗಳು ದರ್ಶಿನಿ (೪) ವಿಷಸೇವಿಸಿದ್ದಾರೆ. ಮಂಗಳಮ್ಮನ ಪತಿ ರಾಜು ಸುಮಾರು ೧೦ ಲಕ್ಷ ಸಾಲ ಮಾಡಿದ್ದನು.

ರಾಜು ಮೂಲತಃ ಬೆಂಗಳೂರು ದಕ್ಷಿಣ ತಾಲೂಕಿನ ಸುಬ್ಬರಾಯನಪಾಳ್ಯ ಗ್ರಾಮದವನಾಗಿದ್ದು, ಸಾಲಗಾರರ ಕಾಟದಿಂದಾಗಿ ಪತ್ನಿ ಊರು ಸೇರಿದ್ದನು. ಇಲ್ಲಿಯೂ ಸಾಲಗಾರರ ಕಾಟ ಮುಂದುವರಿದ ಹಿನ್ನೆಲೆ ಆತ್ಮಹತ್ಯೆಗೆ ಯತ್ನಿಸಿದ್ದಾರೆ.