Recent Posts

Monday, January 20, 2025
ಸುದ್ದಿ

ಇಂದಿನಿಂದ ಕಶೆಕೋಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ –ಕಹಳೆ ನ್ಯೂಸ್

ಕಶೆಕೋಡಿ ಶ್ರೀ ಲಕ್ಷ್ಮೀ ವೆಂಕಟರಮಣ ದೇವಸ್ಥಾನದಲ್ಲಿ ಇಂದಿನಿಂದ ಫೆ.5ರವರೆಗೆ ಶ್ರೀ ಲಕ್ಷ್ಮೀ ವೆಂಕಟರಮಣ ದೇವರಿಗೆ ಜಾತ್ರಾ ಮಹೋತ್ಸವ ನಡೆಯಲಿದೆ. ಜಾತ್ರಾ ಮಹೋತ್ಸವವು ಬ್ರಹ್ಮಶ್ರೀ ನೀಲೇಶ್ವರ ಉಚ್ಚಿಲತ್ತಾಯ ಪದ್ಮನಾಭ ತಂತ್ರಿಗಳ ನೇತೃತ್ವದಲ್ಲಿ ಸಂಪನ್ನಗೊಳ್ಳಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇಂದು ಗಣಪತಿ ಹೋಮ, ಧ್ವಜಶುದ್ಧಿ, ಪಂಚಗವ್ಯ ನವಕ ಕಲಶಪೂಜೆ, ಧ್ವಜಾರೋಹಣ, ನವಕ ಕಲಶಾಭಿಷೇಕ, ಮಹಾಪೂಜೆ, ಮಧ್ಯಾಹ್ನ ಬಲಿ, ಅನ್ನಸಂರ್ಪಣೆ ಹಾಗೂ ರಾತ್ರಿ 6ರಿಂದ ಬಲಿ ಉತ್ಸವ, ಪಲ್ಲಕ್ಕಿ ಉತ್ಸವ, ಕಟ್ಟೆಪೂಜೆ, ಅನ್ನಸಂತರ್ಪಣೆ ನಡೆಯಲಿದೆ. ನಾಳೆ ಬೆಳಗ್ಗೆ ಪೂಜೆ ಬಲಿ ಉತ್ಸವ, ನವಕ ಕಲಶ, ಮಹಾಪೂಜೆ, ದೇವರ ಬಲಿ, ಅನ್ನಸಂತರ್ಪಣೆ, ರಾತ್ರಿ ಪೂಜೆ, ಶ್ರೀಭೂತ ಬಲಿ, ನೃತ್ಯ ಬಲಿ, ಶಯನ, ಕವಾಟ ಬಂಧನ, ಅನ್ನಸಂತರ್ಪಣೆ ನಡೆಯಲಿದೆ.

ಇನ್ನು ಫೆ.5ರಂದು ಕವಾಟ ಉದ್ಘಾಟನೆ, ಅರಾಟ ಬಲಿ, ಓಕುಳಿ, ಅವಭೃತ ಸ್ನಾನ, ದರ್ಶನ ಬಲಿ, ರಾಜಾಂಗಣ ಪ್ರಸಾದ, ಧ್ವಜ ಅವರೋಹಣ, ಸಂಪ್ರೋಕ್ಷಣೆ, ಮಹಾಪೂಜೆ, ಪ್ರಸಾದ ವಿತರಣೆ, ಮಂತ್ರಾಕ್ಷತೆ, ಅನ್ನ ಸಂತರ್ಪಣೆ ಹಾಗೂ ಸಂಜೆ 7ರಿಂದ ಶ್ರೀ ಕ್ಷೇತ್ರದ ಕಲ್ಲುರ್ಟಿ, ಪಂಜುರ್ಲಿ, ಗುಳಿಗ, ಕೊರತಿ ದೈವಗಳಿಗೆ ಕೋಲ ಹಾಗೂ ಅನ್ನಸಂತರ್ಪಣೆ ನಡೆಯಲಿದೆ. ಜಾತ್ರಾ ಮಹೋತ್ಸವದಲ್ಲಿ ಜರುಗುವ ವೈದಿಕ ಕಾರ್ಯಕ್ರಮದಲ್ಲಿ ಕುಟುಂಬ ಸಮೇತರಾಗಿ ಭಾಗವಹಿಸಿ, ಶ್ರೀ ದೇವರ ಗಂಧ ಪ್ರಸಾದವನ್ನು ಸ್ವೀಕರಿಸಿ ಶ್ರೀ ಲಕ್ಷ್ಮೀ ವೆಂಕಟರಮಣ, ಶ್ರೀ ಮಹಾಗಣಪತಿ ದೇವರು, ಪರಿವಾರ ದೇವರ ಕೃಪಾಕಟಾಕ್ಷಕ್ಕೆ ಪಾತ್ರರಾಗಬೇಕಾಗಿ ದೇವಸ್ಥಾನದ ಆಡಳಿತ ಮಂಡಳಿ, ಜೀಣೋದ್ಧಾರ ಸಮಿತಿ ಮತ್ತು ಉತ್ಸವ ಸಮಿತಿ, ಅರ್ಚಕರು ಮತ್ತು ಭಕ್ತವೃಂದರು ಪ್ರಕಟಣೆ ನೀಡಿದ್ದಾರೆ.