ಭಾರತದ ಅತಿದೊಡ್ಡ ಹಾಲು ಮಾರಾಟ ಸಂಸ್ಥೆ ಎನಿಸಿರುವ ಅಮುಲ್ ಇಂದು (ಶುಕ್ರವಾರ) ತನ್ನ ಹಾಲಿನ ದರಗಳನ್ನು ಹೆಚ್ಚಿಸಿದೆ. ಈ ಬಗ್ಗೆ ಅಮುಲ್ ಬ್ರಾಂಡ್‍ಗೆ ಹೆಸರುವಾಸಿಯಾದ ಗುಜರಾತ್ ಸಹಕಾರಿ ಹಾಲು ಮಾರಾಟ ಒಕ್ಕೂಟ ಮಾಹಿತಿ ನೀಡಿದೆ.
ಫೆಬ್ರವರಿ 3, 2023ರ ಬೆಳಗಿನಿಂದ ಜಾರಿಗೆ ಬರುವಂತೆ ಅಮುಲ್ ಹಾಲಿನ ಪ್ಯಾಕ್‍ಗಳ ಎಲ್ಲಾ ವಿಧಗಳಲ್ಲಿಯೂ ಬೆಲೆಯನ್ನು ಲೀಟರ್ ಗೆ 3 ರೂಪಾಯಿ ಹೆಚ್ಚಿಸಲಾಗಿದೆ ಎಂದು ಕಂಪನಿಯು ತಿಳಿಸಿದೆ.
ಅಮೂಲ್ ತಾಜಾ ಒಂದು ಲೀಟರ್ : 54ರೂ
ಅಮೂಲ್ ಗೋಲ್ಡ್ ಒಂದು ಲೀಟರ್ : 66ರೂ
ಅಮೂಲ್ ಹಸು ಹಾಲು ಒಂದು ಲೀಟರ್ : 56ರೂ
ಅಮೂಲ್ ಎ2 ಎಮ್ಮೆ ಹಾಲು : 70ರೂ
ಅಮೂಲ್‍ನ ವಿವಿಧ ಹಾಲು ಉತ್ಪನ್ನಗಳ ಬೆಲೆ ಮೂರು ರೂಪಾಯಿಯಷ್ಟರವರೆಗೂ ಬೆಲೆ ಹೆಚ್ಚಳವಾಗಿದೆ. ಕಳೆದ 10 ತಿಂಗಳಲ್ಲಿ ಹಾಲಿನ ದರ 12 ರೂಪಾಯಿಯಷ್ಟು ಏರಿಕೆಯಾಗಿದೆ. ಅದಕ್ಕೂ ಮುನ್ನ ಸುಮಾರು ಏಳು ವರ್ಷಗಳ ಕಾಲ ಹಾಲಿನ ದರ ಏರಿಕೆಯಾಗಿರಲಿಲ್ಲ. ಏಪ್ರಿಲ್ 2013 ಮತ್ತು ಮೇ 2014 ರ ನಡುವೆ ಹಾಲಿನ ಬೆಲೆ ಲೀಟರ್‍ಗೆ 8 ರೂಪಾಯಿಗೆ ಏರಿಕೆಯಾಗಿತ್ತು. ಇದೀಗ ಲೀಟರ್‍ಗೆ 3 ರೂಪಾಯಿ ಹೆಚ್ಚಿಸಲಾಗಿದೆ.