Monday, January 20, 2025
ಸುದ್ದಿ

ಬಂದಾರಿನಲ್ಲಿ ಫೆ. 08 ಹಾಗೂ 09 ರಂದು ನಡೆಯಲಿದೆ ಶ್ರೀ ಶಿರಾಡಿ ಸಪರಿವಾರ ದೈವಗಳ ವರ್ಷದ ಕಾಲಾವಧಿ ನೇಮೋತ್ಸವ –ಕಹಳೆ ನ್ಯೂಸ್

ಬೆಳ್ತಂಗಡಿ ಪಾಣೆಕಲ್ಲು , ಬಂದಾರಿನ ಶ್ರೀ ಶಿರಾಡಿ ಸಪರಿವಾರ ದೈವಗಳ ಸನ್ನಿಧಿಯಲ್ಲಿ ವರ್ಷದ ಕಾಲಾವಧಿ ನೇಮೋತ್ಸವ ಫೆ. 08, 09 ರಂದು ನಡೆಯಲಿದೆ. ನೇಮೋತ್ಸವದ ಪ್ರಯುಕ್ತ ಜ.01 ರಂದು ಗೊನೆ ಮುಹೂರ್ತ ನೆರವೇರಿದೆ.
ಫೆ.08 ರಂದು ವೇದಮೂರ್ತಿ ಅನಂತಕೃಷ್ಣ ಉಡುಪ ಮುದ್ಯರವರ ನೇತೃತ್ವದಲ್ಲಿ ಸ್ಥಳ ಶುದ್ದಿ ನವಕ ಕಲಶ, ಗಣಹವನ, ದೈವಗಳಿಗೆ ಪರ್ವ ನಡೆಯಲಿದ್ದು, ರಾತ್ರಿ ಸುಮಾರು 10 ಗಂಟೆಗೆ ಬಂದಾರು ಕೆಲೆಂಜಿಮಾರುವಿನಿAದ ದೈವಗಳ ಭಂಡಾರ ದೈವಸ್ಥಾನಕ್ಕೆ ಬರಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಫೆ.09 ರ ಪ್ರಾತಃಕಾಲ 4 ರಿಂದ ಶಿರಾಡಿ ದೈವ, ಕಲ್ಕುಡ ದೈವ ಹಾಗೂ ಪಿಲಿಚಾಮುಂಡಿ ದೈವಕ್ಕೆ ನೇಮೋತ್ಸವ ಆರಂಭವಾಗಲಿದೆ. ಮಧ್ಯಾಹ್ನ ಸಾರ್ವಜನಿಕ ಅನ್ನಸಂತರ್ಪಣೆ ನಡೆದು, ಸಾಯಂಕಾಲ 6 ರಿಂದ ಬಸ್ತಿನಾಯಕ ನೇಮೋತ್ಸವ ನೆರವೇರಲಿದೆ