Sunday, January 19, 2025
ಸುದ್ದಿ

Breaking News : ಮನೆ – ಮಠ ಕಳೆದುಕೊಂಡು ಪುತ್ತೂರಿಗೆ ಬಂದ ಕೊಡಗಿನ ಸಂತ್ರಸ್ತರಿಗೆ ಧನ ಸಹಾಯ ಹಾಗೂ ಅಗತ್ಯ ಸಾಮಗ್ರಿಗಳನ್ನು ಪೂರೈಸಿದ ವಿಶ್ವ ಹಿಂದೂ ಪರಿಷತ್ ಬಜರಂಗದಳ – ಕಹಳೆ ನ್ಯೂಸ್

ಪುತ್ತೂರು : ಕೊಡಗಿನ ಮಳೆಗೆ ತತ್ತರಿಸಿ ಮನೆ ಮಠ ಗಳನ್ನು ಕಳೆದುಕೊಂಡು ಪುತ್ತೂರು ಆಸುಪಾಸಿನ ತಮ್ಮ ಸಂಬಂಧಿಕರ ಮನೆಯಲ್ಲಿ ನೆಲೆ ಪಡೆಯಲು ಆಗಮಿಸಿದ 30 ರಷ್ಟು ಜನರಿಗೆ ವಿಶ್ವ ಹಿಂದೂ ಪರಿಷತ್ ಬಜರಂಗದಳದ ಪುತ್ತೂರು ಕಾರ್ಯಲಯದಲ್ಲಿ ಧನಸಹಾಯ, ಆಹಾರ ವಸ್ತು ಹಾಗೂ ಅಗತ್ಯ ದಿನ ಬಳಕೆಯ ವಸ್ತುಗಳನ್ನು ನೀಡಲಾಯಿತು.

ಈ ಸಂದರ್ಭದಲ್ಲಿ ಬಜರಂಗದಳದ ಜಿಲ್ಲಾ ಸುರಕ್ಷಾ ಪ್ರಮುಖ್ ಧನ್ಯ ಕುಮಾರ್ ಬೆಳಂದೂರು,ಜಿಲ್ಲಾ ಸಾಪ್ತಾಹಿಕ ಮಿಲನ್ ಪ್ರಮುಖ್ ಜೀತೆಶ್ ಬಲ್ನಾಡ್, ವಿಶ್ವ ಹಿಂದೂ ಪರಿಷತ್ ಪುತ್ತೂರು ಪ್ರಖಂಡ ಅಧ್ಯಕ್ಷರಾದ ಜನಾರ್ಧನ ಬೆಟ್ಟ, ಸುರಕ್ಷಾ ಪ್ರಮುಖ್ ಜಯಂತ ಕುಂಜೂರು ಪಂಜ,ಪ್ರಮುಖರಾದ ರಾಮ್ ಪ್ರಸಾದ್ ಮಯ್ಯ,ಚರಣ್ ಕಲ್ಲೇಗ,ಸಚಿನ್ ಅಮ್ಮುಂಜೆ ಉಪಸ್ಥಿತರಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು