Monday, January 27, 2025
ಸುದ್ದಿ

ನಡುರಾತ್ರಿ ಬೆತ್ತಲೆಯಾಗಿ ಅಲೆಯುತ್ತಾ ಮನೆಬಾಗಿಲು ಬಡಿದ ಯುವತಿ : ಅಸಲಿ ಕಥೆ ಏನು..? –ಕಹಳೆ ನ್ಯೂಸ್

ರಾತ್ರಿಯಾಯಿತೆಂದರೆ ಸಾಕು ಯುವತಿಯೊಬ್ಬಳು ಮಧ್ಯರಾತ್ರಿಯಲ್ಲಿ ನಗ್ನವಾಗಿ ಬೀದಿ ಬೀದಿಗಳಲ್ಲಿ ಓಡಾಡುತ್ತಾ ಸಿಕ್ಕ ಸಿಕ್ಕ ಮನೆಯ ಬಾಗಿಲುಗಳನ್ನು ಬಡಿಯುವುದು. ಕಾಲಿಂಗ್ ಬೆಲ್ ಬಾರಿಸುತ್ತಾ ಭಯದ ವಾತಾವರಣ ಉಂಟುಮಾಡುತ್ತಿದ್ದಾಳೆ. ಈ ಘಟನೆ ಉತ್ತರ ಪ್ರದೇಶದ ರಾಂಪುರದ ಮಿಲಾಕ್ ಗ್ರಾಮದಲ್ಲಿ ನಡೆದಿದೆ. ಯುವತಿ ಬೆತ್ತಲಾಗಿ ರಸ್ತೆಯಲ್ಲಿ ಓಡಾಡುತ್ತಿರುವ ದೃಶ್ಯಗಳು ಸಿಸಿಟಿವಿ ಕ್ಯಾಮೆರಾದಲ್ಲಿ ದಾಖಲಾಗಿದ್ದು, ಇದೀಗ ವಿಡಿಯೋ ವೈರಲ್ ಆಗಿದೆ. ಯುವತಿಯ ಈ ಕೃತ್ಯಕ್ಕೆ ಸ್ಥಳೀಯರು ಭಯಭೀತರಾಗಿದ್ದಾರೆ. ವಿಡಿಯೋದಲ್ಲಿ ದಾಖಲಾಗಿರುವ ಬೆಚ್ಚಿಬೀಳಿಸುವ ದೃಶ್ಯಗಳನ್ನು ಕಂಡು ಸ್ಥಳೀಯರು ಇದು ದೆವ್ವ ಎಂದು ಹೇಳುತ್ತಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನು ಯುವತಿ ಯಾರು? ಯಾಕೆ ಆ ರೀತಿ ಮಾಡುತ್ತಿದ್ದಾರೆ? ಎಂಬುದು ನಿಗೂಢವಾಗಿ ಪರಿಣಮಿಸಿದೆ. ವಿಡಿಯೋದಲ್ಲಿರುವ ದಿನಾಂಕದ ಪ್ರಕಾರ ಘಟನೆ ಜನವರಿ 30ರಂದು ನಡೆದಿರುವಂತೆ ತೋರುತ್ತದೆ. ಸ್ಥಳೀಯ ಮಹಿಳೆಯೊಬ್ಬರು ಪೊಲೀಸರನ್ನು ಸಂಪರ್ಕಿಸಿದ್ದಾರೆ. ಅಪರಿಚಿತ ಯುವತಿಯ ವಿರುದ್ಧ ಪೊಲೀಸ್ ದೂರು ದಾಖಲಾಗಿದೆ. ಆಕೆ ಸುಮಾರು 25 ವರ್ಷ ವಯಸ್ಸಿನವಳಾಗಿದ್ದು, ಬೆತ್ತಲೆಯಾಗಿದ್ದಳು ಎಂದು ಪೊಲೀಸರಿಗೆ ತಿಳಿಸಿದ್ದಾಳೆ. ಮನೆ ಮುಂದೆ ಬಂದು ಬೆಲ್ ಹೊಡೆದು 5 ನಿಮಿಷ ಮನೆ ಮುಂದೆ ನಿಂತಳು ಎಂದು ತಿಳಿಸಿದ್ದಾರೆ. ಆ ಬಳಿಕ ಅಲ್ಲಿಂದ ಹೊರಟು ಹೋದಳು ಅದೇ ವೇಳೆಗೆ ಇಬ್ಬರು ಬೈಕ್ ಸವಾರರು ಆಕೆಯನ್ನು ಹಿಂಬಾಲಿಸಿದರು. ಪೊಲೀಸ್ ಗಸ್ತು ವಾಹನವು ಅವರನ್ನು ಹಿಂಬಾಲಿಸಿತು ಎಂದು ಮಹಿಳೆ ಪೊಲೀಸರಿಗೆ ತಿಳಿಸಿದ್ದಾರೆ.

ಸ್ಥಳೀಯರು ಆತಂಕಗೊAಡಿದ್ದರಿAದ ಪೊಲೀಸರು ಮಧ್ಯ ಪ್ರವೇಶಿಸಿದರು. ಯಾರೂ ಭಯಪಡುವ ಅಗತ್ಯವಿಲ್ಲ ತನಿಖೆ ಕೈಗೆತ್ತಿಕೊಂಡಿದ್ದೇವೆ. ರಸ್ತೆಯಲ್ಲಿ ಬೆತ್ತಲೆಯಾಗಿ ನಡೆದುಕೊಂಡು ಮನೆ ಬಾಗಿಲು ಬಡಿಯುವುದರ ಹಿಂದೆ ಆಕೆಯ ಉದ್ದೇಶ ಏನೆಂಬುದು ಅರ್ಥವಾಗುತ್ತಿಲ್ಲ ಎಂದರು. ಆಕೆಯ ಸಂಪೂರ್ಣ ವಿವರಗಳನ್ನು ತಿಳಿಯಲು ಎಲ್ಲಾ ಸಿಸಿಟಿವಿ ಕ್ಯಾಮೆರಾಗಳ ದೃಶ್ಯಾವಳಿಗಳು ಅದನ್ನು ಪರಿಶೀಲಿಸುತ್ತಿದ್ದೇವೆ ಎಂದಿದ್ದಾರೆ.