Sunday, January 26, 2025
ಸುದ್ದಿ

ಕಣಿಯೂರಿನಲ್ಲಿ ಪ್ರಪ್ರಥಮ ಬಾರಿಗೆ ಆಕರ್ಷಕ 6 ಅಡಿ ಎತ್ತರದ ಸ್ವಾತಂತ್ರ್ಯ ಹೋರಾಟಗಾರ ಸಮರವೀರ ಕೆದಂಬಾಡಿ ರಾಮಯ್ಯ ಗೌಡ ಟ್ರೋಫಿ 2023

ಯುವಕೇಸರಿ ಕಣಿಯೂರು ಆಶ್ರಯದಲ್ಲಿ ಪ್ರಪ್ರಥಮ ಬಾರಿಗೆ ಆಕರ್ಷಕ 6 ಅಡಿ ಎತ್ತರದ ಸ್ವಾತಂತ್ರ್ಯ ಹೋರಾಟಗಾರ ಸಮರವೀರ ಕೆದಂಬಾಡಿ ರಾಮಯ್ಯ ಗೌಡ ಟ್ರೋಫಿ 2023 ಮ್ಯಾಟ್ ಅಂಕಣದ ಪೆÇ್ರ ಮಾದರಿಯ ಹೊನಲು ಬೆಳಕಿನ ಪುರುಷರ ಮುಕ್ತ ಕಬಡ್ಡಿ ಪಂದ್ಯಾಟ ನಾಳೆ ಕಣಿಯೂರು ಕ್ರೀಡಾಂಗಣದಲ್ಲಿ ನಡೆಯಲಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಕಾರ್ಯಕ್ರಮದ ಉದ್ಘಾಟನೆಯನ್ನು ರೈತಬಂಧು ಆಹಾರೋಧ್ಯಮ ಪ್ರೈ.ಲಿ ಮಾಲಕರಾದ ಶಿವಶಂಕರ್ ನಾಯಕ್ ನೆರವೇರಿಸಲಿದ್ದಾರೆ. ಸುದರ್ಶನ ಹೆಗ್ಡೆ ಕ್ರೀಡಾಂಗಣದ ಉದ್ಘಾಟನೆಯನ್ನು ಮಾಡಲಿದ್ದಾರೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಣಿಯೂರು ಗ್ರಾ.ಪಂ ಅಧ್ಯಕ್ಷೆ ಗಾಯತ್ರಿ ಗೋಪಾಲ ಗೌಡ ವಹಿಸಲಿದ್ದು, ಮುಖ್ಯ ಅತಿಥಿಗಳಾಗಿ ಸಿಎ ಬ್ಯಾಂಕ್ ಉಪಾಧ್ಯಕ್ಷ ಅಶೋಕ್ ಗೌಡ ಪಾಂಜಾಳ, ಪುತ್ತು ನಾಯ್ಕ ಕುಡುವಂತಿ, ಬೆಳ್ತಂಗಡಿ ಜನಜಾಗೃತಿ ವೇದಿಕೆಯ ಅಧ್ಯಕ್ಷ ಶಾರದಾ ಆರ್ ರೈ ಮುಗೆರೋಡಿ, ಮಾಜಿ ತಾಲೂಕು ಪಂಚಾಯತ್ ಸದಸ್ಯೆ ಅಮಿತಾ ಕುಶಾಲಪ್ಪ ಗೌಡ, ಕಣಿಯೂರು ಗ್ರಾ.ಪಂ ಉಪಾಧ್ಯಕ್ಷೆ ಜಲಜಾಕ್ಷಿ, ಲ್ಯಾಂಪ್ಸ್ ಸೊಸೈಟಿ ಅಧ್ಯಕ್ಷ ಲಿಂಗಪ್ಪ ನಾಯ್ಕ್, ಸಿಎ ಬ್ಯಾಂಕ್ ನಿರ್ದೇಶಕ ನಾರಾಯಣ ಗೌಡ ಮುಚ್ಚೂರು ಭಾಗವಹಿಸಲಿದ್ದಾರೆ.

ರಾತ್ರಿ 8ರಿಂದ ಸಭಾ ಕಾರ್ಯಕ್ರಮ ನಡೆಯಲಿದ್ದು, ಹರೀಶ್ ಪೂಂಜಾ ಆಗಮಿಸಲಿದ್ದಾರೆ. ಬಳಿಕ ಸಮಾರೋಪ ಸಮಾರಂಭ ಕಾರ್ಯಕ್ರಮ ನಡೆಯಲಿದೆ. ಇನ್ನು ಈ ಪಂದ್ಯಾಟದ ವಿಜೇತರಿಗೆ ಪ್ರಥಮ ಬಹುಮಾನ 50000 ಸಾವಿರ ರೂ ಹಾಗೂ ಟ್ರೋಫಿ, ದ್ವಿತೀಯ 30000 ರೂ. ಹಾಗೂ ಟ್ರೋಫಿ ಮತ್ತು ತೃತೀಯ ಬಹುಮಾನವಾಗಿ 20000 ರೂ. ಹಾಗೂ ಟ್ರೋಫಿ ಸಿಗಲಿದೆ. ಉತ್ತಮ ದಾಳಿಗಾರ, ಹಿಡಿತಗಾರ, ಹಾಗೂ ಸವ್ಯಸಾಟಿ ವ್ಯಯಕ್ತಿಕ ಬಹುಮಾನಗಳು ಕೂಡಾ ಸಿಗಲಿದೆ.