Saturday, January 25, 2025
ಸುದ್ದಿ

ಬೈಕ್‌ನ ಮೇಲೆ ಬೆಕ್ಕಿನ ಸವಾರಿ ಹೊರಟ ಕೆಲವೇ ದಿನಗಳಲ್ಲಿ ‘ಕಾರಿನ ಮೇಲೆ ನಾಯಿಯ ಸವಾರಿ…’ ಸಾಮಾಜಿಕ ಜಾಲತಾಣದಲ್ಲಿ ವಿಡಿಯೋ ವೈರಲ್ –ಕಹಳೆ ನ್ಯೂಸ್

ಕಳೆದ ತಿಂಗಳು ಒಬ್ಬಾತ ಬೆಂಗಳೂರು ಹೊರವಲಯದ ಹೆದ್ದಾರಿಯಲ್ಲಿ ಬೈಕ್ ಮೇಲೆ ತನ್ನೆರಡೂ ಬೆಕ್ಕುಗಳನ್ನು ರಾತ್ರಿ ಹೊತ್ತು ಕರೆದೊಯ್ದ ವಿಡಿಯೋ ವೈರಲ್ ಆಗಿತ್ತು. ಬೆಕ್ಕುಗಳ ಪ್ರಾಣಕ್ಕೆ ಅಪಾಯ ಒಡ್ಡುವ ಇಂಥ ಸಾಹಸ ಬೇಡ ಎಂದು ನೆಟ್ಟಿಗರು ಬುದ್ಧಿ ಹೇಳಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೀಗ ಬೆಂಗಳೂರಿನಲ್ಲಿಯೇ ಇಂಥದೇ ಮತ್ತೊಂದು ಪ್ರಕರಣ ಮರುಕಳಿಸಿದೆ. ಆದರೆ ಬೈಕ್ ಬದಲಾಗಿ ಇಲ್ಲಿ ಕಾರ್, ಬೆಕ್ಕಿನ ಬದಲಾಗಿ ಇಲ್ಲಿ ನಾಯಿಯನ್ನು ಕಾರಿನ ಮೇಲೆ ಕರೆದುಕೊಂಡು ಹೋಗಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದ್ದು, 1.26 ಲಕ್ಷ ಜನ ಈ ವಿಡಿಯೋ ನೋಡಿದ್ದಾರೆ.

ವಿಡಿಯೋ ನೋಡಿದ ನೂರಾರು ಜನರು ಆಕ್ರೋಶಗೊಂಡಿದ್ದಾರೆ. ಇನ್ನೂ ಕೆಲವರು ಮೋಜೆನ್ನಿಸುತ್ತಿದೆ ಎಂದಿದ್ದಾರೆ. ಇದು ಹೇಗೆ ಮೋಜು ಎಂದು ಕೆಲವರು ಕುಪಿತಗೊಂಡಿದ್ದಾರೆ . ಬೆಂಗಳೂರಿನ ವಿಜಯನಗರಕ್ಕೆ ಬನ್ನಿ, ಕಾರಿನ ಮೇಲೆ ನಾಯಿಗಳು ಮಲಗಿರುತ್ತವೆ ಎಂದು ಮತ್ತೊಬ್ಬರು ಹೇಳಿದ್ದಾರೆ. ನಾಯಿಗಳಿಗೆ ಮಾತನಾಡಲು ಬರುವುದಿಲ್ಲವೆಂದು ಮನಬಂದAತೆ ಅವುಗಳನ್ನು ನಡೆಸಿಕೊಳ್ಳಬೇಡಿ, ಇದು ಕ್ರೌರ್ಯ ಎಂದಿದ್ದಾರೆ ಅನೇಕರು. ಜನ ಯಾಕೆ ಹೀಗೆ ತಿಳಿವಳಿಕೆ ಇಲ್ಲದೆ ವರ್ತಿಸುತ್ತಾರೋ ಏನೊ. ನಿಜಕ್ಕೂ ಇದು ಬಹಳ ಬೇಸರ ತರಿಸುವಂಥ ವಿಡಿಯೋ . ಅಂತ ಇನ್ನೂ ಹಲವರು ಅಭಿಪ್ರಾಯ ಪಟ್ಟಿದ್ದಾರೆ. ಒಟ್ಟಿನಲ್ಲಿ ನಾಯಿಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಸಕ್ಕತ್ ವೈರಲ್ ಆಗ್ತಾ ಇದೆ.