Friday, January 24, 2025
ಸುದ್ದಿ

‘ಶೆಫ್ ಟ್ರೇನಿಂಗ್’ ಪಡೆಯುತ್ತಿರುವ ‘ಗಂಡಾಲ್ಫ್’…ಬೆಕ್ಕು ; ಇನ್ನು ನಂಬರ್ ಒನ್ ಶೆಫ್ ಮಿಯಾಂವ್.. –ಕಹಳೆ ನ್ಯೂಸ್

ಇತ್ತೀಚಿನ ದಿನಗಳಲ್ಲಿ ಮನುಷ್ಯ-ಮನುಷ್ಯರ ನಡುವಿನ ನಂಬಿಕೆಯ ಸೇತುವೆ ಮುರಿದು ಬೀಳುತ್ತ ಹೋದಷ್ಟೂ ಹೆಚ್ಚೆಚ್ಚು ಪ್ರಾಣಿ-ಪಕ್ಷಿಗಳೊಂದಿಗೆ ಮನುಷ್ಯ ಜೀವಿಸಲು ಬಯಸುತ್ತಿದ್ದಾನೆ. ಈಗೀಗಲಂತೂ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ವಿಡಿಯೋ ನೋಡಿದರೆ, ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಮುದ್ದಿಸುವ, ಪ್ರೀತಿಸುವ, ಕಾಳಜಿ ತೆಗೆದುಕೊಳ್ಳುವ ಪೆಟ್ ಪೇರೆಂಟ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಇದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿದೇಶಗಳಲ್ಲಿ ಅಷ್ಟೇ ಯಾಕೆ ನಮ್ಮ ದೇಶದಲ್ಲಿಯೂ ಕೆಲ ಕಾರ್ಪೊರೇಟ್ ಕಂಪೆನಿಗಳು ತಮ್ಮ ಆಫೀಸುಗಳಿಗೆ ಬೆಕ್ಕು-ನಾಯಿಗಳನ್ನು ಕರೆದೊಯ್ಯಲು ಅವಕಾಶ ಕಲ್ಪಿಸಿದೆ. ಏಕೆಂದರೆ ಅವೂ ಮಕ್ಕಳಂತೆಯೇ ತುಂಟಾಟಗಳನ್ನು ಮಾಡುತ್ತಾ ಇರುತ್ತದೆ.

ಪ್ರಾಣಿಗಳನ್ನು ಕೆಲವೊಬ್ಬರು ಎಷ್ಟು ಪ್ರೀತಿಸುತ್ತಾರೇ ಎಂಬುದಕ್ಕೆ ಸಾಕ್ಷಿ ಈ ವಿಡಿಯೋ. ಇಲ್ಲಿ ‘ಗಂಡಾಲ್ಫ್’ಎAಬ ಬೆಕ್ಕಿಗೆ ಅಡುಗೆ ಮಾಡುವುದನ್ನು ತೋರಿಸುತ್ತಿದ್ದಾರೆ. ಆ ಬೆಕ್ಕು ಅಷ್ಟೇ ಚಿತ್ತಕೊಟ್ಟು ಎಲ್ಲವನ್ನೂ ನೋಡುತ್ತಿದೆ. ಶೆಫ್ ಇನ್ ಟ್ರೇನಿಂಗ್ ಎಂಬ ಶೀರ್ಷಿಕೆಯಡಿ, ಇನ್‌ಡೋರ್ ಔಟ್‌ಡೋರ್ ಕ್ಯಾಟ್ ಎಂಬ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದೆ.