Friday, January 24, 2025
ಸುದ್ದಿ

ಮಗುವಿಗೆ ಟಿಕೆಟ್ ಇಲ್ಲದ ಕಾರಣ, ಮಗುವನ್ನು ವಿಮಾನ ನಿಲ್ದಾಣದಲ್ಲಿ ಬಿಟ್ಟು ಹೋಗಲು ಯತ್ನಿಸಿದ ದಂಪತಿ –ಕಹಳೆ ನ್ಯೂಸ್

ಮಗುವಿಗೆ ಟಿಕೆಟ್ ಇಲ್ಲದ ಕಾರಣ ಆ ಮಗುವಿನ ಅಪ್ಪ-ಅಮ್ಮ ತಮ್ಮ ಶಿಶುವನ್ನು ಅಲ್ಲೇ ಬಿಟ್ಟು ಹೋಗಿರುವ ವಿಚಿತ್ರ ಘಟನೆ ಇಸ್ರೇಲ್‌ನ ಟೆಲ್ ಅವೀವ್‌ನ ವಿಮಾನ ನಿಲ್ದಾಣದ ಚೆಕ್-ಇನ್ ಕೌಂಟರ್‌ನಲ್ಲಿ ನಡೆದಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿಮಾನ ಪ್ರಯಾಣ ಮಾಡುವಾಗ ಸಾಮಾನ್ಯವಾಗಿ ಬಹುತೇಕರು ಮುಂಚಿತವಾಗಿಯೇ ಟಿಕೆಟ್ ಬುಕ್ ಮಾಡಿಸಿಕೊಂಡಿರುತ್ತಾರೆ. ಹೀಗಿರುವಾಗ ಮಗುವಿಗೂ ಟಿಕೆಟ್ ತೆಗೆದುಕೊಳ್ಳಬೇಕೆಂದು ತಗಾದೆ ತೆಗೆದರೆ ಪೋಷಕರು ಏನು ಮಾಡುತ್ತಾರೆ? ಇಸ್ರೇಲ್‌ನ ವಿಮಾನ ನಿಲ್ದಾಣದಲ್ಲೂ ಇದೇ ರೀತಿಯ ಪರಿಸ್ಥಿತಿ ಎದುರಾಗಿತ್ತು. ಚಿಕ್ಕ ಮಗುವಿಗೂ ಟಿಕೆಟ್ ಖರೀದಿಸಬೇಕೆಂದು ಟಿಕೆಟ್ ಕೌಂಟರ್‌ನವರು ಹೇಳಿದ್ದರಿಂದ ದಂಪತಿಗಳು ಟಿಕೆಟ್ ಖರೀದಿಸುವ ಬದಲು ತಮ್ಮ ಮಗುವನ್ನೇ ಆ ಕೌಂಟರ್‌ನಲ್ಲಿ ಬಿಟ್ಟು ಹೋಗಿದ್ದಾರೆ.

ಈ ವಿಷಯ ಗೊತ್ತಾಗುತ್ತಿದ್ದಂತೆ ಚೆಕ್-ಇನ್ ಕೌಂಟರ್‌ನಲ್ಲಿದ್ದ ಅಧಿಕಾರಿ ವಿಮಾನ ನಿಲ್ದಾಣದ ಭದ್ರತೆಯನ್ನು ಎಚ್ಚರಿಸಿದ್ದಾರೆ. ಅವರು ಆ ಪೋಷಕರನ್ನು ಹಿಡಿದು ವಿಮಾನ ಹತ್ತದಂತೆ ತಡೆದಿದ್ದಾರೆ. ದಂಪತಿಗಳು ಮಗುವನ್ನು ಬಿಟ್ಟು ವಿಮಾನಕ್ಕೆ ಬೋರ್ಡಿಂಗ್ ಗೇಟ್ ತಲುಪುವ ಪ್ರಯತ್ನದಲ್ಲಿ ಭದ್ರತಾ ತಪಾಸಣೆಯ ಕಡೆಗೆ ಓಡಿದರು. ಕೊನೆಗೆ ಈ ಸಮಸ್ಯೆಯನ್ನು ಇಸ್ರೇಲ್ ಪೊಲೀಸರು ಪರಿಹರಿಸಿದ್ದಾರೆ. ಹಾಗೇ, ಮಗುವನ್ನು ಪೋಷಕರ ಕೈಗೆ ಒಪ್ಪಿಸಿದ್ದಾರೆ.