Friday, January 24, 2025
ಸುದ್ದಿ

ಗಂಡನನ್ನು ಬಿಟ್ಟು ಬಂದು ಪ್ರಿಯಕರನ ಜೊತೆ ದುರಂತ ಅಂತ್ಯ ಕಂಡ ಮಹಿಳೆ ; ಅನಾಥರಾದ ಇಬ್ಬರು ಮಕ್ಕಳು –ಕಹಳೆ ನ್ಯೂಸ್

ನಾಲ್ಕು ತಿಂಗಳ ಹಿಂದೆ ಗಂಡನನ್ನು ಬಿಟ್ಟು ಪ್ರಿಯಕರನೊಂದಿಗೆ ಓಡಿ ಹೋಗಿದ್ದ ಮಹಿಳೆ ದುರಂತ ಅಂತ್ಯ ಕಂಡಿದ್ದಾಳೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಗಂಡನನ್ನು ತೊರೆದು ಪ್ರಿಯಕರನ ಜೊತೆ ಓಡಿ ಹೋಗಿದ್ದ ಮಹಿಳೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂದು ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲೂಕಿನ ಕೊರಳೂರು ಗ್ರಾಮದಲ್ಲಿ ನಡೆದಿದೆ.

ಸುರಯಾ ರಾಜು(28) ಮತ್ತು ಆಕೆಯ ಪ್ರಿಯಕರ ಮೆಹಬೂಬ್(35) ಆತ್ಮಹತ್ಯೆಗೆ ಶರಣಾದ ಜೋಡಿಗಳಾಗಿದ್ದು, ಜೀವನದಲ್ಲಿ ಜಿಗುಪ್ಸೆಗೊಂಡು ಆತ್ಮಹತ್ಯೆಗೆ ಶರಣಾಗಿದ್ದಾರೆ ಎನ್ನಲಾಗಿದೆ. ಮೂಲತಃ ಧಾರವಾಡ ಮೂಲದವರಾದ ಇವರು ಗಾರೆ ಕೆಲಸ ಮಾಡಿಕೊಂಡು ಇಬ್ಬರು ಮಕ್ಕಳ ಜೊತೆ ಕೊರಳೂರಿನಲ್ಲಿ ವಾಸವಾಗಿದ್ದರು. ಆದ್ರೆ, ಇವರಿಗೆ ಆರ್ಥಿಕ ಸಂಕಷ್ಟ ಎದುರಾಗಿದೆ. ಇದರಿಂದ ಜಿಗುಪ್ಸೆಗೊಂಡು ಮಕ್ಕಳನ್ನ ಹೊರಗಡೆ ಕಳಿಸಿ ಸೀರೆಯಿಂದ ಇಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇವರಿಬ್ಬರ ಮಧ್ಯೆ ಪ್ರೇಮಾ ಹುಟ್ಟಿ ಬಳಿಕ ಸುರಯಾ 4 ತಿಂಗಳ ಹಿಂದೆ ಮನೆ ಬಿಟ್ಟು ಮೆಹಬೂಬ್ ಜತೆ ಓಡಿ ಬಂದಿದ್ದಳು. ವಿಷಯ ತಿಳಿದು ಸ್ಥಳಕ್ಕೆ ತಿರುಮಲ ಶೆಟ್ಟಿಹಳ್ಳಿ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಇನ್ನು ಅತ್ತ ಅಪ್ಪ ಇಲ್ಲದೇ, ಇತ್ತ ತಾಯಿಯೂ ಇಲ್ಲದೇ ಮಕ್ಕಳು ಅನಾಥರಾಗಿದ್ದಾರೆ.