ಒಂದು ಪ್ಲೇಟ್ ಚಿಕನ್ ಬಿರಿಯಾನಿ ಬೆಲೆ ಕೇವಲ 30 ರೂ..! 90 ರ ದಶಕದ ದಿನಗಳನ್ನು ನೆನಪಿಸಿದ ಹೋಟೆಲ್ ಮೆನು –ಕಹಳೆ ನ್ಯೂಸ್
ಹೊಸ ವರ್ಷದ ಆರಂಭವಾಗುತ್ತಿದ್ದAತೆ ಅದೇನೋ ಗೊತ್ತಿಲ್ಲ, ಹಳೆಯ ಕಾಲದ ಬಿಲ್‌ಗಳು ಒಂದೊAದಾಗಿ ಪ್ರತ್ಯಕ್ಷವಾಗಿ ಜನರೆಲ್ಲರನ್ನೂ ಆಶ್ಚರ್ಯ ಚಕಿತರನ್ನಾಗಿಸುತ್ತಿವೆ. ಇದೀಗ ಆಹಾರ ಖಾದ್ಯ, ಹೋಟೆಲ್ ಮೆನು ಹಾಗೂ ಬಿಲ್‌ಗಳ ಸರದಿ ಶುರುವಾಗಿದೆ. ಹೌದು ಸುಮಾರು 20 ವರುಷಗಳ ಹಳೆಯ ಹೋಟೆಲ್ ಮೆನುವೊಂದು ಸೋಷಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದ್ದು, 90ರ ದಶಕದ ದಿನಗಳನ್ನು ನೆನಪಿಸುತ್ತಿದೆ.
ರೆಸ್ಟೋರೆಂಟ್ ಅಂದಮೇಲೆ ಕೇಳಬೇಕಾ ಸಾಮಾನ್ಯ ಹೋಟೆಲ್‌ಗಿಂತ ರೆಸ್ಟೋರೆಂಟ್ ತುಂಬಾ ದುಬಾರಿಯಾಗಿರುತ್ತವೆ. ಅಲ್ಲಿಗೆ ಜನ ಸಾಮಾನ್ಯರಂತೂ ಹೋಗುವುದಿಲ್ಲ. ರೆಸ್ಟೋರೆಂಟ್‌ಗಳಿಗೆ ಹೋಗುವವರು ಬಹುತೇಕ ಹಣಕಾಸು ಸ್ಥಿತಿ ಉತ್ತಮವಾಗಿರುವವರು. ಆದರೆ
ವೈರಲ್ ಆಗುತ್ತಿರುವ ಈ ರೆಸ್ಟೋರೆಂಟ್ ಮೆನುವಿನಲ್ಲಿ ಅಚ್ಚರಿಯೇನೆಂದರೆ ಅಂದು ರೆಸ್ಟೋರೆಂಟ್‌ನಲ್ಲಿ ಒಂದು ಪ್ಲೇಟ್ ಚಿಕನ್ ಬಿರಿಯಾನಿ ಬೆಲೆ ಕೇವಲ 30 ಇತ್ತು. ಇನ್ನೂ ಆಶ್ಚರ್ಯವೆಂದರೆ ಇಂದು ಮುಟ್ಟಿದರೆ ಕೈ ಸುಡುವ ಮಟನ್ ಬಿರಿಯಾನಿಗೆ, ಅಂದು ಕೇವಲ 32 ರೂ. ಇತ್ತು. 2001ರಲ್ಲಿ ದುಬಾರಿ ರೆಸ್ಟೋರೆಂಟ್‌ನಲ್ಲಿ ಕೇವಲ 30 ರೂ. ಗೆ ಬಿರಿಯಾನಿ ಸಿಗುತ್ತಿತ್ತು.
ಒಂದು ಪ್ಲೇಟ್ ಚಿಕನ್ ಬಿರಿಯಾನಿ ಬೆಲೆ ಕನಿಷ್ಟ ಅಂದರೂ 150 ರಿಂದ 200 ರೂ. ಇರುತ್ತದೆ. ಇನ್ನು ಮಟನ್ ಬಿರಿಯಾನಿ ಬೆಲೆಯಂತೂ ಕೇಳುವುದೇ ಬೇಡ ಬಿಡಿ. ಕನಿಷ್ಠ ಅಂದರೂ 300 ರಿಂದ 350 ರೂ. ಇರುತ್ತದೆ. ಆದರೆ, 2001ರಲ್ಲಿ ಕೇವಲ 30 ಮತ್ತು 32 ರೂ. ಬಿಕನ್ ಮತ್ತು ಮಟನ್ ಬಿರಿಯಾನಿ ಸಿಗುತ್ತಿತ್ತು ಅಂದ್ರೆ ನಂಬೋದೇ ಅಸಾಧ್ಯ.
ಇನ್ನು ಇತರ ಖಾದ್ಯಗಳ ಬೆಲೆಯೂ ಅದರಲ್ಲಿದ್ದು ಎಗ್ ರೋಲಿಗೆ 7ರೂ, ಚಿಕನ್ ರೋಲಿಗೆ 10ರೂ, ಎಗ್ ಚಿಕನ್ ರೋಲ್ ಬೆಲೆ 15 ಹಾಗೂ ವಿಶೇಷ ಚಿಕನ್ ರೋಲ್ ಬೆಲೆ 24 ರೂ. ಇತ್ತೆಂದು ಮೆನು ಹೇಳುತ್ತಿದೆ
ಮೆನುವನ್ನು ಜಾಲತಾಣದಲ್ಲಿ ಪೋಸ್ಟ್ ಮಾಡಿದಾಗಿನಿಂದ ಸಾವಿರಾರು ಮಂದಿ ಫೋಟೋಗೆ ಲೈಕ್ ಮಾಡಿದ್ದಾರೆ. ಇವತ್ತೇನಿದ್ರೂ ಒಂದು ಮೆನು, ಒಂದೇ ಐಟಂ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ. ಒಂದು ಎಗ್ ರೋಲ್ ಇವತ್ತು 70 ರೂ. ಆಗಿದೆ. ಆ ದಿನಗಳೇ ಸರಿಯಾಗಿದ್ದವು ಎಂದೆಲ್ಲ ಕಮೆಂಟಿಸುತ್ತಿದ್ದಾರೆ. ಒಟ್ಟಿನಲ್ಲಿ ಒಂದೊAದಾಗಿ ಹಳೆಯ ಬಿಲ್ ಗಳು ಪ್ರತ್ಯಕ್ಷವಾಗಿ ಎಲ್ಲರೂ ಒಮ್ಮೆ ಹಳೆಯ ದಿನಗಳನ್ನು ನೆನಪಿಸಿಕೊಳ್ಳುವಂತೆ ಮಾಡುತ್ತಿವೆ.