Friday, January 24, 2025
ಸುದ್ದಿ

ಅಳಿಯನಿಗೆ ಅತ್ತೆ ಮಾವನಿಂದ ಇದೆಂಥ ಆತಿಥ್ಯ ಮರ‍್ರೆ..! – ಕಹಳೆ ನ್ಯೂಸ್

ಮದುವೆ ಬಳಿಕ ಫಸ್ಟ್ ಟೈಮ್ ತಮ್ಮ ಮನೆಗೆ ಬಂದ ಮಗಳು-ಅಳಿಯನಿಗೆ 108 ಬಗೆಯ ತಿನಿಸುಗಳನ್ನ ತಯಾರಿಸಿ ಅತ್ತೆ-ಮಾವ ಉಣ ಬಡಿಸಿ ಅಪರೂಪದ ಆತಿಥ್ಯ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನೆಲ್ಲೂರು ಜಿಲ್ಲೆಯ ಉಚಪಲ್ಲಿ ಗ್ರಾಮದ ನಿವಾಸಿ ಶಿವಕುಮಾರ್, ದೇವಮ್ಮ ದಂಪತಿ ತಮ್ಮ ಮಗಳು ಶ್ರೀವಾಣಿಯನ್ನ ಶಿವಕುಮಾರ್ ಎನ್ನುವ ಯುವಕನ ಜೊತೆ ಮದುವೆ ಮಾಡಿದ್ದರು. ವಿವಾಹದ ನಂತರ ಮಗಳು, ಗಂಡನ ಮನೆಯಲ್ಲಿದ್ದಳು. ಇದೇ ಮೊದಲ ಬಾರಿಗೆ ತವರು ಮನೆಗೆ ಮಗಳು ಪತಿಯ ಜೊತೆ ಬಂದಿದ್ದಾಳೆ. ಹೀಗಾಗಿ ಅವರ ಬಂದ ಸಡಗರಲ್ಲಿ ಅತ್ತೆಯು ತನ್ನ ಅಳಿಯನಿಗೆ ೧೦೮ ಬಗೆಯ ಭಕ್ಷ್ಯ ಭೋಜನಗಳನ್ನ ರೆಡಿ ಮಾಡಿ ಉಣ ಬಡಿಸಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಫುಲ್ ವೈರಲ್ ಆಗಿದೆ.

ಆಹಾರ ಖಾದ್ಯದಲ್ಲಿ ವೆಜ್ ಮತ್ತು ನಾನ್ ವೆಜ್ ಎರಡು ಇವೆ. ಕ್ಯಾರೆಟ್ ಹಲ್ವಾ, ಬುರ್ಲಿ, ಹೋಳಿಗೆ, ಉಪ್ಮಾ, ಆವಕಾಯಿ ಪಚಡಿ, ಕಡುಬು, ಪಾಯಸ, ಕೇಸರಿ ಬಾತ್, ಸ್ವೀಟ್ಸ್, ಪಲಾವ್, ಪನ್ನಿರ್ ಕರಿ ಸೇರಿ ಬಗೆ ಬಗೆಯ ಕರಿಸ್, ಚಿಕನ್, ಮಟನ್, ಕಬಾಬ್, ಸಾಂಬಾರ್, ರಸಂ, ಲೆಗ್‌ಪೀಸ್ ಸೇರಿದಂತೆ ಇನ್ನು ಹಲವಾರು ತಿನಿಸುಗಳು ನೋಡಿದವರಿಗೆ ಬಯಲ್ಲಿ ನೀರುರಿಸುವಂತೆ ಇವೆ.