Thursday, January 23, 2025
ಸುದ್ದಿ

20 ಲಕ್ಷ ರೂಪಾಯಿ ವೆಚ್ಚದಲ್ಲಿ ಬಬ್ಬರ್ಯ ಗುಂಡಕ್ಕೆ ನಡೆಯುತ್ತಿರುವ ಮೇಲ್ಛಾವಣಿ ಅಳವಡಿಕೆ ಕಾಮಗಾರಿಗೆ ಗುದ್ದಲಿಪೂಜೆ ನೆರವೇರಿಸಿದ ಶಾಸಕ ಭರತ್ ಶೆಟ್ಟಿ –ಕಹಳೆ ನ್ಯೂಸ್

ಮಂಗಳೂರು : 20 ಲಕ್ಷ ರೂಪಾಯಿ ಅನುದಾನದಲ್ಲಿ ಬೈಕಂಪಾಡಿ ಮೊಗವೀರ ಮಹಾಸಭಾ (ರಿ) ಬೈಕಂಪಾಡಿ ಇದರ ಆಡಳಿತಕ್ಕೆ ಒಳಪಟ್ಟ ಬಬ್ಬರ್ಯ ಗುಂಡಕ್ಕೆ ಮೇಲ್ಛಾವಣಿ ಅಳವಡಿಕೆ ಕಾಮಗಾರಿಗೆ ಶಾಸಕರಾದ ಡಾ. ವೈ ಭರತ್ ಶೆಟ್ಟಿಯವರು ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇದೇ ಸಂದರ್ಭದಲ್ಲಿ ಬ್ರಹ್ಮಕಲಶೋತ್ಸವದ ಅಂಗವಾಗಿ ಜೀರ್ಣೋದ್ಧಾರಗೊಳ್ಳುತ್ತಿರುವ ಚಿತ್ರಾಪುರ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನ ಕಾಮಗಾರಿಗಳನ್ನು ಶಾಸಕರು ವೀಕ್ಷಿಸಿ ಪ್ರಮುಖರೊಂದಿಗೆ ಸಮಾಲೋಚಿಸಿದರು.

ದೇವಳದಲ್ಲಿ ಚಿತ್ರಾಪುರ ಮಠಾಧೀಶರಾದ ಪರಮಪೂಜ್ಯ ಶ್ರೀ ಶ್ರೀ ವಿದ್ಯೇಂದ್ರ ತೀರ್ಥ ಸ್ವಾಮೀಜಿ, ಸ್ಥಳೀಯ ಕಾರ್ಪೊರೇಟರ್ ಸುಮಿತ್ರಾ, ಸುನಿತಾ, ನಾಮ ನಿರ್ದೇಶಿತ ಸದಸ್ಯರಾದ ರಾಜೇಶ್ ಬೈಕಂಪಾಡಿ, ಮಾಜಿ ಮೇಯರ್ ಗಣೇಶ್ ಹೊಸಬೆಟ್ಟು, ಮುಖಂಡರಾದ ಅರವಿಂದ್ ಬೆಂಗ್ರೆ, ಬೂತ್ ಅಧ್ಯಕ್ಷರಾದ ಸುನಿತ್ ಚಿತ್ರಾಪುರ, ಶಕ್ತಿಕೇಂದ್ರ ಪ್ರಮುಖರಾದ ಗಿರೀಶ್ ಬೈಕಂಪಾಡಿ, ಬೈಕಂಪಾಡಿ ಮೋಗವೀರ ಮಹಾಸಭಾ ಅಧ್ಯಕ್ಷರಾದ ವಸಂತ ಬೈಕಂಪಾಡಿ, ಗುರಿಕಾರರು, ಪೂಜಾರಿಗಳು, ಆಡಳಿತ ಸಮಿತಿ ಸದಸ್ಯರು, ಅಂಗಸಂಸ್ಥೆಗಳು, ಪಕ್ಷದ ಮುಖಂಡರು, ಗಣ್ಯರು, ಕಾರ್ಯಕರ್ತರು ಉಪಸ್ಥಿತರಿದ್ದರು.