Thursday, January 23, 2025
ಸುದ್ದಿ

ಸಿನಿಮಾ ರೀತಿಯಲ್ಲಿ ಪತ್ತೆಯಾದ ತಲೆ ಬುರುಡೆ..!! –ಕಹಳೆ ನ್ಯೂಸ್

ಬೆಂಗಳೂರಿನ ಅಕ್ಷಯನಗರದ ಹುಳಿಮಾವು ಮರವೊಂದರ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಅವಶೇಷಗಳು ಪತ್ತೆಯಾಗಿವೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಸಿನಿಮಾದಲ್ಲಿ ತೋರಿಸುವಂತಹ ರೀಲ್ ಕಥೆ ಇಲ್ಲಿ ರಿಯಲ್ ಆಗಿದೆ. ಹೌದು ರಾಜಧಾನಿಯ ಅಕ್ಷಯನಗರದ ಹುಳಿಮಾವು ಮರವೊಂದರ ಬಳಿ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆಯ ಅವಶೇಷಗಳು ಪತ್ತೆಯಾಗಿವೆ. ಹಲವು ತಿಂಗಳಿAದ ಮರದ ಕೊಂಬೆಯಲ್ಲಿ ನೇತಾಡುತಿದ್ದ ತಲೆ ಬುರುಡೆ ಪತ್ತೆಯಾಗಿದೆ. ಶವ 6 ತಿಂಗಳಿAದ ಕೊಳೆಯುತ್ತಿತ್ತು. ಆ ಜಾಗಕ್ಕೆ ಪೊಲೀಸರು ಮೂತ್ರ ವಿಸರ್ಜನೆಗೆ ಹೋದಾಗ ಘಟನೆ ಬೆಳಕಿಗೆ ಬಂದಿದೆ.
ಸದ್ಯ ಪೊಲೀಸರು ತನಿಖೆ ಆರಂಭಿಸಿದ್ದು, ಮಹಿಳೆಯ ಶವ ಎಂಬ ಶಂಕೆ ವ್ಯಕ್ತವಾಗಿದೆ. ಹುಳಿಮಾವು ಠಾಣೆ ಪೊಲೀಸರಿಂದ ಪ್ರಕರಣದ ತನಿಖೆ ನಡೆಯುತ್ತಿದೆ. 7 ತಿಂಗಳ ಹಿಂದೆ ಹುಳಿಮಾವು ಠಾಣೆಯಲ್ಲಿ ನೇಪಾಳಿ ಮಹಿಳೆಯೊಬ್ಬಳು ನಾಪತ್ತೆ ಪ್ರಕರಣ ತನಿಖೆಯಲ್ಲಿದೆ. ಹೀಗಾಗಿ ಅದೇ ಮಹಿಳೆಯ ಶವ ಇದು ಎನ್ನುವ ಅನುಮಾನ ವ್ಯಕ್ತವಾಗಿದೆ.