Wednesday, January 22, 2025
ಕ್ರೈಮ್ಸುದ್ದಿ

ಏಳು ಮಂದಿಯನ್ನು ಮದ್ವೆಯಾಗಿ ಸಿಕ್ಕಿಬಿದ್ದ ; ಹಿಂದೂ ಹೆಸರಿನಿಂದ ಸುಳ್ಳು ಹೇಳಿ ವಿವಾಹವಾಗಿ ವಂಚಿಸುತ್ತಿದ್ದ ಇಸ್ಲಾಮಿಕ್ ಜಿಹಾದಿ ಅಸ್ಲಾಂ ಖಾನ್ ಬಂಧನ – ಕಹಳೆ ನ್ಯೂಸ್

ರಾಂಚಿ: ಮದುವೆ ಎಂದರೆ ಸಪ್ತಪದಿ, ಆದರೆ ಇಲ್ಲೊಬ್ಬ ಏಳು ಹೆಜ್ಜೆಗೆ ಸುಮ್ಮನಾಗದೆ ಏಳು ಮದುವೆಯನ್ನೇ ಆಗಿಬಿಟ್ಟಿದ್ದಾನೆ. ಹೀಗೆ ಒಂದರ ಹಿಂದೊಂದರಂತೆ ಮದುವೆಯಾಗಿ ವಂಚಿಸಿದ್ದವನನ್ನು ಪೊಲೀಸರು ಬಂಧಿಸಿದ್ದಾರೆ. ಇಂಥ ಒಬ್ಬ ನಯವಂಚಕನನ್ನು ಜಾರ್ಖಂಡ್ ಪೊಲೀಸರು ಬಂಧಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅಸ್ಲಾಂ ಖಾನ್​ (50) ಬಂಧಿತ ವಂಚಕ. ಈತನನ್ನು ಜಾರ್ಖಂಡ್​ನ ರಾಂಚಿ ಪೊಲೀಸರು ಬುಧವಾರ ಬಂಧಿಸಿದ್ದಾರೆ. ಈತ ಒಬ್ಬ ಅಪ್ರಾಪ್ತ ವಯಸ್ಸಿನವಳೂ ಸೇರಿದಂತೆ ಒಟ್ಟು ಏಳು ಮಂದಿಯನ್ನು ವಿವಾಹವಾಗಿದ್ದ. ಹೀಗೆ ವಂಚಿಸುತ್ತಿದ್ದ ಈತ ಕೊನೆಗೂ ಸಿಕ್ಕಿಬಿದ್ದಿದ್ದಾನೆ.

ತನ್ನನ್ನು ಸಂಜಯ್​ ಕಸೇರ ಎಂದು ಸಾಮಾನ್ಯವಾಗಿ ಪರಿಚಯಿಸಿಕೊಳ್ಳುತ್ತಿದ್ದ ಅಸ್ಲಾಂ ಖಾನ್​, ನಯವಾದ ಮಾತುಗಳನ್ನಾಡಿ ಬಲೆಗೆ ಬೀಳಿಸಿಕೊಂಡು ಮದುವೆಯಾಗುತ್ತಿದ್ದ. ತನ್ನ ನಿಜವಾದ ಹೆಸರು, ಧರ್ಮ ಎರಡನ್ನೂ ಮರೆಮಾಚಿ ಮದುವೆಯಾಗುತ್ತಿದ್ದ ಈತ ಸಾಮಾನ್ಯವಾಗಿ ಬುಡಕಟ್ಟು ಜನಾಂಗದವರನ್ನೇ ಗುರಿಯಾಗಿಸಿ ಮದುವೆಯಾಗುತ್ತಿದ್ದ.

ನಕಲಿ ಪೊಲೀಸ್: ಸಮವಸ್ತ್ರ ತೊಟ್ಟು ತನ್ನನ್ನು ಪೊಲೀಸ್ ಅಧಿಕಾರಿ ಎಂದು ಬಿಂಬಿಸಿಕೊಂಡಿದ್ದ ಈತ 2022ರ ಡಿ. 8ರಂದು ಅಪ್ರಾಪ್ತ ವಯಸ್ಸಿನ ಹಿಂದು ಹುಡುಗಿಯನ್ನು ಮದುವೆಯಾಗಿದ್ದ. ಆಗ ಈ ಬಗ್ಗೆ ಪೊಲೀಸರಿಗೆ ಮಾಹಿತಿ ಹೋಗಿ ಅವರು ಸ್ಥಳಕ್ಕೆ ಧಾವಿಸಿದಾಗ ಈತ ಪರಾರಿಯಾಗಿದ್ದ. ಈ ಮೇರೆಗೆ ಪ್ರಕರಣ ದಾಖಲಿಸಿಕೊಂಡು ಪತ್ತೆ ಹಚ್ಚಿ ಬಂಧಿಸಿದಾಗ ಈತ ಇದಕ್ಕೂ ಮೊದಲು ಆರು ಮದುವೆಯಾಗಿರುವುದು ಬೆಳಕಿಗೆ ಬಂದಿತ್ತು. ತಲೆಮರೆಸಿಕೊಂಡು ಸದ್ದಾಂ ಎಂಬ ಹೆಸರು ಹೇಳಿಕೊಂಡು ರಾಂಚಿಯಲ್ಲಿದ್ದ ಈತನನ್ನು ಪೊಲೀಸರು ಪತ್ತೆ ಹಚ್ಚಿ ಬಂಧಿಸಿದ್ದಾರೆ.