ಜಕಾರ್ತ: ಇಂಡೋನೇಷ್ಯಾದಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾ ಕೂಟದಲ್ಲಿ ಭಾರತ ಮತ್ತೊಂದು ಚಿನ್ನದ ಪದಕವನ್ನು ಮುಡಿಗೇರಿಸಿಕೊಂಡಿದ್ದು, ಮಹಿಳೆಯರ ಕುಸ್ತಿ ವಿಭಾಗದಲ್ಲಿ ವಿನಿಶ್ ಪೋಗಟ್‍ರವರು ಚಿನ್ನದ ಪದಕಕ್ಕೆ ಭಾಜನರಾಗಿದ್ದಾರೆ.
ಏಷ್ಯನ್ ಗೇಮ್ಸ್ 2018ರ ಎರಡನೇ ದಿನವಾದ ಇಂದು ಸಹ ಭಾರತೀಯ ಸ್ಪರ್ಧಿಗಳು ಚಿನ್ನದ ಬೇಟೆ ಮುಂದುವರಿಸಿದ್ದು, 50 ಕೆಜಿ ಮಹಿಳೆಯರ ಫ್ರೀಸ್ಟೈಲ್ ಕುಸ್ತಿ ವಿಭಾಗದಲ್ಲಿ ವಿನೀಶ್ ಪೋಗಟ್‍ರವರು ಚಿನ್ನ ಗೆದ್ದಿದ್ದಾರೆ.
ಮಂಗಳವಾರ ನಡೆದ 50 ಕೆಜಿ ಮಹಿಳೆಯರ ಫ್ರೀಸ್ಟೈಲ್ ಕುಸ್ತಿಯ ಅಂತಿಮ ಪಂದ್ಯದಲ್ಲಿ ವಿನೀಶ್ ಪೋಗಟ್‍ರವರು ಜಪಾನಿನ ಯೂಕಿ ಇರ್ಕಿ ಅವರನ್ನು 6-2 ಅಂತರಗಳಿಂದ ಸೋಲಿಸಿ ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ.
ದೇಶಕ್ಕೆ ಎರಡನೇ ಚಿನ್ನ ತಂದು ಕೊಟ್ಟ ಹಾಗೂ ಏಷ್ಯನ್ ಗೇಮ್ಸ್ ನ ಕುಸ್ತಿ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಮೊದಲ ಮಹಿಳೆ ಎಂಬ ಪಾತ್ರಕ್ಕೆ ವಿನೀಶ್ ಪೋಗಟ್ ಪಾತ್ರರಾಗಿದ್ದಾರೆ. ಇದರೊಂದಿಗೆ ಭಾರತ ಕುಸ್ತಿ ವಿಭಾಗದಿಂದ 2 ಚಿನ್ನ, ಶೂಟಿಂಗ್ ವಿಭಾಗದಿಂದ 2 ಬೆಳ್ಳಿ ಹಾಗೂ 1 ಕಂಚಿನ ಪದಕದೊಂದಿಗೆ ಒಟ್ಟು 5 ಪದಕಗಳನ್ನು ಪಡೆದಿದೆ.