Thursday, January 23, 2025
ಸುದ್ದಿ

25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ನೂತನ ಕಟ್ಟಡಗಳನ್ನು ಶಾಸಕರಾದ ಡಾ. ಭರತ್ ಶೆಟ್ಟಿ ಉದ್ಘಾಟನೆ –ಕಹಳೆ ನ್ಯೂಸ್

ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಗುರುಪುರ ಗ್ರಾಮ ಪಂಚಾಯತ್‌ನ ಜಿಮ್ ಕಟ್ಟಡ ಹಾಗೂ ನೂತನ ಸಭಾಭವನವನ್ನು ಶಾಸಕರಾದ ಡಾ. ಭರತ್ ಶೆಟ್ಟಿ ವೈಯವರು ಉದ್ಘಾಟಿಸಿದರು. ಉದ್ಘಾಟನೆಗೊಂಡ ನೂತನ ಕಟ್ಟಡಗಳು 25 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಇನ್ನೂ ಇದೇ ವೇಳೆ ಅಮೃತ ಸರೋವರ ಯೋಜನೆಯ ಶಂಕುಸ್ಥಾಪನೆಯನ್ನು ಕೂಡ ಶಾಸಕರು ನೆರವೇರಿಸಿದ್ದಾರೆ.
ಈ ಕಾರ್ಯಕ್ರಮದಲ್ಲಿ ಗುರುಪುರ ಗ್ರಾಮ ಪಂಚಾಯತ್ ಅಧ್ಯಕ್ಷ ಯಶವಂತ್ ಕುಮಾರ್ ಶೆಟ್ಟಿ, ಉಪಾಧ್ಯಕ್ಷ ದಿಲ್ಶಾದ್, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪಂಕಜ, ಕಾರ್ಯದರ್ಶಿ ಅಶೋಕ್ ಚುನಾಯಿತ ಜನಪ್ರತಿನಿಧಿಗಳು, ಅಧಿಕಾರಿಗಳು, ಗಣ್ಯರು ಹಾಗೂ ಮತ್ತಿತರರು ಉಪಸ್ಥಿತರಿದ್ದರು.