Thursday, January 23, 2025
ಸುದ್ದಿ

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ವತಿಯಿಂದ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ನಡೆದ ಸರಸ್ವತಿ ಪೂಜೆ – ಕಹಳೆ ನ್ಯೂಸ್

ಕಲ್ಲಡ್ಕ : ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕದ ವತಿಯಿಂದ ಕಲ್ಲಡ್ಕ ಶ್ರೀರಾಮ ಮಂದಿರದಲ್ಲಿ ಸರಸ್ವತಿ ಪೂಜೆ ನಡೆಯಿತು. ಶ್ರೀ ಕ್ಷೇತ್ರ ಕಣಿಯೂರಿನ ಶ್ರೀ ಶ್ರೀ ಶ್ರೀ ಮಹಾಬಲೇಶ್ವರ ಸ್ವಾಮೀಜಿಯವರು ತಮ್ಮ ನುಡಿಗಳಲ್ಲಿ ಈ ಶಾಲೆಯಲ್ಲಿ ಪ್ರತಿನಿತ್ಯವೂ ಸರಸ್ವತಿ ಪೂಜೆ ಮಾಡುತ್ತಿರುವುದು ವಿಶೇಷ, ಹಾಗಾಗಿಯೇ ಈ ಶಾಲೆ ಬೇರೆ ಶಾಲೆಗಳಿಗಿಂತ ಭಿನ್ನವಾಗಿದೆ. ವಿದ್ಯಾರ್ಥಿಗಳು ಸಂಸ್ಕಾರವನ್ನು ಪ್ರತಿಯೊಂದು ಹಂತದಲ್ಲಿ ಕಲಿತು ಬೆಳೆಯುತ್ತಿದ್ದಾರೆ ಎನ್ನುತ್ತಾ ಆ ದೇವರು ಎಲ್ಲರಿಗೂ ದೈಹಿಕವಾಗಿ, ಮಾನಸಿಕವಾಗಿ, ಶಾರೀರಿಕವಾಗಿ ಮಾಡುವ ಎಲ್ಲಾ ಚಟುವಟಿಕೆಗಳಿಗೆ ಚೈತನ್ಯವನ್ನು ತುಂಬಲಿ ಎಂದು ಆಶೀರ್ವದಿಸಿದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವಿದ್ಯಾಕೇಂದ್ರದ ಶಿಶುಮಂದಿರ, ಪ್ರಾಥಮಿಕ ಶಾಲೆ, ಪ್ರೌಢಶಾಲೆ, ಸೆಕೆಂಡರಿ ಸ್ಕೂಲ್, ಪದವಿ ಪೂರ್ವ ವಿದ್ಯಾಲಯ, ಪದವಿ ವಿದ್ಯಾಲಯದ ಎಲ್ಲಾ ವಿದ್ಯಾರ್ಥಿಗಳು, ಬೋಧಕರು, ಬೋಧಕೇತರು ಭಗವದ್ಗೀತೆ ಪುಸ್ತಕದೊಂದಿಗೆ ಪೂಜೆಯಲ್ಲಿ ಭಾಗವಹಿಸಿ ಸರಸ್ವತಿ ಮಂತ್ರವನ್ನು ಪಠಿಸಿದರು. ಹಾಗೂ ವಿದ್ಯಾರ್ಥಿಗಳಿಂದ ಭಜನಾ ಕರ‍್ಯಕ್ರಮವು ನೆರವೇರಿತು. ಸರಸ್ವತಿ ಪೂಜೆಯ ವಿಧಿ-ವಿಧಾನಗಳನ್ನು ಕಶೆಕೋಡಿ ಸೂರ್ಯನಾರಾಯಣ ಭಟ್ ಇವರು ನಡೆಸಿಕೊಟ್ಟರು.

ಕರ‍್ಯಕ್ರಮದಲ್ಲಿ ಡಾ. ಪ್ರಭಾಕರ್ ಭಟ್ ಕಲ್ಲಡ್ಕ – ಅಧ್ಯಕ್ಷರು ವಿವೇಕಾನಂದ ವಿದ್ಯಾವರ್ಧಕ ಸಂಘ ಪುತ್ತೂರು, ವಿದ್ಯಾಕೇಂದ್ರದ ಅಧ್ಯಕ್ಷರಾದ ನಾರಾಯಣ ಸೋಮಯಾಜಿ, ಸಂಚಾಲಕರಾದ ವಸಂತ ಮಾಧವ, ಸಹಸಂಚಾಲಕರಾದ ರಮೇಶ್ ಎನ್, ಆಡಳಿತ ಮಂಡಳಿ ಸದಸ್ಯರು, ಅಭಿವೃದ್ದಿ ಸಮಿತಿ ಸದಸ್ಯರುಗಳು, ಪೋಷಕರು ಉಪಸ್ಥಿತರಿದ್ದರು.