Friday, January 24, 2025
ಸುದ್ದಿ

ಭೂಪಾಲ್‌ನಲ್ಲಿ ನಡೆಯಲಿರುವ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ ಭಾಗವಹಿಸಲಿರುವ ಬೆಳ್ತಂಗಡಿ ಪೋಲೀಸ್ ಸಬ್ ಇನ್ಸ್ಪೆಕ್ಟರ್, ‘ಗೋಲ್ಡ್ ಮೆಡಲ್’ ಅಧಿಕಾರಿ ಹರೀಶ್ –ಕಹಳೆ ನ್ಯೂಸ್

ಅಖಿಲ ಭಾರತ ಕರ್ತವ್ಯ ಕೂಟದಲ್ಲಿ ದ.ಕ.ಜಿಲ್ಲೆಯ ಬೆಳ್ತಂಗಡಿ ಪೋಲೀಸ್ ಸಬ್ ಇನ್ಸ್ಪೆಕ್ಟರ್ ಹರೀಶ್ ಎಂ. ಆರ್. ಅವರು ಕರ್ನಾಟಕವನ್ನು ಪ್ರತಿನಿಧಿಸಲಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಫೆ. 13. ರಿಂದ 17 ರ ವರೆಗೆ ಭೂಪಾಲ್‌ನಲ್ಲಿ ನಡೆಯಲಿರುವ ಅಖಿಲ ಭಾರತ ಪೊಲೀಸ್ ಕರ್ತವ್ಯ ಕೂಟದಲ್ಲಿ “Scientific Aids to Investigation ವಿಭಾಗದ ಸ್ಪರ್ಧೆಯಲ್ಲಿ ದಕ್ಷಿಣ ಕನ್ನಡ ಜಿಲ್ಲಾ ಪೊಲೀಸ್ ಘಟಕದಿಂದ ಬೆಳ್ತಂಗಡಿ ಪೊಲೀಸ್ ಠಾಣೆ ಉಪನಿರೀಕ್ಷಕ ಹರೀಶ್, ಎಂ. ಆರ್. ಇವರನ್ನು ಆಯ್ಕೆ ಮಾಡಿದ್ದಾರೆ.
ಕರ್ನಾಟಕದ ಗೋಲ್ಡ್ ಮೆಡಲ್ ಪೊಲೀಸ್ ಅಧಿಕಾರಿ ಹರೀಶ್ ಎಂ.ಆರ್. ಅವರನ್ನು ಕಳೆದ ಎರಡು ದಿನಗಳ ಹಿಂದೆಯಷ್ಟೇ ಬಂಟ್ವಾಳ ಗ್ರಾಮಾಂತರ ಪೊಲೀಸ್ ಠಾಣೆಯಿಂದ ಚುನಾವಣಾ ಹಿನ್ನೆಲೆಯಲ್ಲಿ ಇವರನ್ನು ಬೆಳ್ತಂಗಡಿ ಠಾಣೆಗೆ ಸರಕಾರ ವರ್ಗಾಯಿಸಿತ್ತು.

ಇವರು ಜಿಲ್ಲಾ ಮಟ್ಟದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಿ ಗೆದ್ದ ಇವರನ್ನು ರಾಜ್ಯದಲ್ಲಿ ನಡೆದ ಸ್ಪರ್ಧೆಯಲ್ಲಿ ಭಾಗವಹಿಸಲು ಸೂಚಿಸಿದ್ದರು. ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಿ ಗೋಲ್ಡ್ ಹಾಗೂ ಸಿಲ್ವರ್ ಮೆಡಲ್ ಪಡೆದಿದ್ದಾರೆ.
ಇದೀಗ ದ.ಕ.ಜಿಲ್ಲೆಯಿಂದ ರಾಷ್ಟ್ರ ಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸಲು ತೆರಳುತ್ತಿದ್ದಾರೆ.

ಫೆ. 5 ರಂದು ಬೆಂಗಳೂರಿನಲ್ಲಿ ರಿಪೋರ್ಟ್ ಮಾಡಲು ಇಲಾಖೆ ಸೂಚಿಸಿದ್ದು, ಮೂರು ದಿನಗಳ ಕಾಲ ಅಲ್ಲಿ ತರಬೇತಿಯನ್ನು ಪಡೆದು, ಅಲ್ಲಿಂದ ಫೆ.10ರಂದು ಬೋಪಾಲ್‌ಗೆ ಆಗಮಿಸಲಿದ್ದಾರೆ.

ರಾಜ್ಯದಿಂದ ದ.ಕ.ಜಿಲ್ಲೆಯ ಪೊಲೀಸ್ ಆಫೀಸರ್ ಓರ್ವ ರಾಷ್ಟ್ರ. ಮಟ್ಟದ ಪೋಲೀಸ್ ಇಲಾಖೆಯ ಬಹುಮುಖ್ಯವಾದ ವಿಷಯದಲ್ಲಿ ಪರೀಕ್ಷೆ ಬರೆಯಲು ಹೊರಟಿರುವ ಇವರ ಭವಿಷ್ಯ ಉಜ್ವಲವಾಗಲಿ ಎಂಬುದೇ ನಮ್ಮೆಲ್ಲರ ಆಶಯ.