ಪ್ರತಿ ನಿತ್ಯ ಕೊಡಗಿನಲ್ಲಿ ಸಂತ್ರಸ್ತರ ಸೇವೆ ಮಾಡುತ್ತಿರುವ ಎಸ್.ಡಿ.ಎಂ. ಕಾಲೇಜಿನಲ್ಲಿ ಡಾಕ್ಟರ್ ಕಲಿಯುತ್ತಿರುವ ರುಬಿನಾ ಮತ್ತು ಚೈತ್ರಾ ; ಯುವ ಡಾಕ್ಟರ್ ಗಳ ಸೇವಾ ಕಾರ್ಯಕ್ಕೆ ವ್ಯಾಪಕ ಶ್ಲಾಘನೆ – ಕಹಳೆ ನ್ಯೂಸ್
ಕೊಡಗು: ಕೊಡಗು ಜಿಲ್ಲೆಯಾದ್ಯಂತ ಭಾರೀ ಮಳೆ, ಗುಡ್ಡ, ಘಟ್ಟ ಪ್ರದೇಶಗಳು, ಮನೆಗಳು ಕುಸಿದ ಪರಿಣಾಮವಾಗಿ ಅಪಾರ ಜೀವಹಾನಿ ಮತ್ತು ನಾಶ ನಷ್ಟ ಸಂಭವಿಸಿದ್ದು, ಸರ್ಕಾರ ಎನ್ಜಿಒಗಳು, ಸಂಘ ಸಂಸ್ಥೆಗಳು ಎಲ್ಲರೂ ಸಂತ್ರಸ್ತರ ಪರಿಹಾರ ಕೇಂದ್ರಗಳಲ್ಲಿ ತಮ್ಮ ತಮ್ಮ ಅತ್ಯುತ್ತಮ ಕೊಡುಗೆ ನೀಡುತ್ತಿದ್ದಾರೆ.
ಈ ಮಧ್ಯೆ ಧಾರವಾಡ ಜಿಲ್ಲೆಯ ಎಸ್ ಡಿಎಮ್ ಮೆಡಿಕಲ್ ಕಾಲೇಜಿನಲ್ಲಿ ಎಂಡಿ ಕಲಿಯುತ್ತಿರುವ ಡಾಕ್ಟರ್ ರೂಹಿನಾ ಬಾನು ಮತ್ತು ಡಾಕ್ಟರ್ ಚೈತ್ರಾ ಈ ಇಬ್ಬರು ವಿದ್ಯಾರ್ಥಿನಿಯರು ಕೊಡಗಿಗೆ ಸ್ವಯಂ ಪ್ರೇರಿತರಾಗಿ ಹೋಗಿದ್ದು, ರಿಲೀಫ್ ಕ್ಯಾಂಪ್ ಗಳಲ್ಲಿ ರಾತ್ರಿ ಹಗಲೆನ್ನದೆ ಸೇವೆ ಸಲ್ಲಿಸಿದರು.
ಜಮಾಅತೇ ಇಸ್ಲಾಮಿ ಹಿಂದ್ ಇದರ ಅಂಗ ಸಂಸ್ಥೆಯಾದ ಹೆಚ್ ಆರ್ ಎಸ್ (Humanitarian relief society) ಯನ್ನು ಸ್ವತಃ ಸಂಪರ್ಕಿಸಿ ಬೆಂಗಳೂರು ಮಾರ್ಗವಾಗಿ ಕೊಡಗಿಗೆ ತಲಪಿದ ಇವರು ಅಲ್ಲಿ ಸೇವಾ ಕಾರ್ಯದಲ್ಲಿ ತೊಡಗಿಕೊಂಡರು.ಅಲ್ಲಿನ ವಿವಿಧ ರಿಲೀಫ್ ಕ್ಯಾಂಪ್ ಗಳಿಗೆ ಭೇಟಿಕೊಟ್ಟು ವೈದ್ಯಕೀಯ ಚಿಕಿತ್ಸೆ ನೀಡಿದ್ದು, ಮಾತ್ರವಲ್ಲದೆ ನಿರಂತರ ಮೂರು ದಿನಗಳ ಕಾಲ ವಿವಿಧ ದೂರದ ಮನೆಗಳಿಗೂ ಭೇಟಿ ನೀಡಿ ಶುಶ್ರೂಷೆ ನೀಡಿದ್ದಾರೆ.
ವಿದ್ಯಾರ್ಥಿ ರುಬೀನಾ ಬಾನು ರವರಿಗೆ ಬರುವಾರ ಮದುವೆ ನಿಶ್ಚಯವಾಗಿದ್ದು, ಮದುವೆಯ ತಯಾರಿಯನ್ನು ಲೆಕ್ಕಿಸದೆ, ಸಂತ್ರಸ್ತರ ನೆರವಿಗೆ ಧಾವಿಸಿದ್ದು ನಿಜಕ್ಕೂ ಶ್ಲಾಘನೀಯವಾಗಿದೆ.