ಮಂಗಳೂರು : . ಉಳ್ಳಾಲಕ್ಕೆ ಭೇಟಿ ನೀಡುವವರಲ್ಲಿ ಅಬ್ಬಕ್ಕನ ಬಗ್ಗೆ ಜಾಗೃತಿ ಮೂಡಿಸಲು ಥೀಮ್ ಪಾರ್ಕ್ ನ ಅವಶ್ಯಕತೆಯಿದೆ ಹಾಗಾಗಿ ಥೀಮ್ ಪಾರ್ಕ್ ಸ್ಥಾಪನೆ ಮಾಡಲಾಗುವುದು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ಉಳ್ಳಾಲ ವೀರರಾಣಿ ಅಬ್ಬಕ್ಕ ಉತ್ಸವ ಸಮಿತಿ ಉಳ್ಳಾಲದ ಮಹಾತ್ಮ ಗಾಂಧಿ ರಂಗಮಂದಿರದಲ್ಲಿ ಶನಿವಾರ ಆಯೋಜಿಸಿದ್ದ ವೀರ ರಾಣಿ ಅಬ್ಬಕ್ಕ ಉತ್ಸವದಲ್ಲಿ ಮಾತನಾಡಿದ ಅವರು, ಅಬ್ಬಕ್ಕ ಭವನ ನಿರ್ಮಾಣಕ್ಕೆ ಜಿಲ್ಲಾಡಳಿತ 10 ಎಕರೆ ಜಾಗವನ್ನು ಮೀಸಲಿಟ್ಟಿದೆ. ಅಬ್ಬಕ್ಕ ಭವನವೊಂದೇ ಸಾಕಾಗುವುದಿಲ್ಲ. ಉಳ್ಳಾಲಕ್ಕೆ ಭೇಟಿ ನೀಡುವವರು ಅಬ್ಬಕ್ಕನ ಬಗ್ಗೆ ಸ್ಪೂರ್ತಿದಾಯಕ ಕಥೆಯೊಂದಿಗೆ ತಮ್ಮ ಮನೆಗೆ ಮರಳಬೇಕು. ಈ ಬಗ್ಗೆ ಸರ್ಕಾರಕ್ಕೂ ಪತ್ರ ಬರೆಯುತ್ತೇನೆ’ ಎಂದಿದ್ದಾರೆ.
ರಾಣಿ ಅಬ್ಬಕ್ಕ ಉತ್ಸವವನ್ನು ರಾಜ್ಯಮಟ್ಟದ ಉತ್ಸವವನ್ನಾಗಿ ಮಾಡಲು ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಪತ್ರ ಬರೆಯುತ್ತೇನೆ. ಎಂದರು. ಅಲ್ಲದೇ ಮಂಗಳೂರು ವಿಮಾನ ನಿಲ್ದಾಣಕ್ಕೆ ವೀರ ರಾಣಿ ಅಬ್ಬಕ್ಕ ಅವರ ಹೆಸರಿಡುವಂತೆ ಪ್ರಧಾನಿ ನರೇಂದ್ರ ಮೋದಿ, ನಾಗರಿಕ ವಿಮಾನಯಾನ ಸಚಿವರು, ಡಿಜಿಸಿಎಗೆ ಪತ್ರ ಬರೆಯುವುದಾಗಿ ಕರಂದ್ಲಾಜೆ ತಿಳಿಸಿದ್ದಾರೆ.