Sunday, January 26, 2025
ಸುದ್ದಿ

ಟ್ರಾಫಿಕ್ ದಂಡಕ್ಕೆ ಶೇ.50 ಡಿಸ್ಕೌಂಟ್ : ಮಂಗಳೂರಿನಲ್ಲಿ ಸಂಗ್ರಹವಾದ ಹಣ ಎಷ್ಟು ಗೊತ್ತಾ..? – ಕಹಳೆ ನ್ಯೂಸ್

ಮಂಗಳೂರು: ವಾಹನ ಸಂಚಾರ ನಿಯಮ ಉಲ್ಲಂಘನೆಗೆ ಸಂಬಂಧಿಸಿದಂತೆ ಸರ್ಕಾರ ಶೇ.50 ರಿಯಾಯಿತಿಯ ದಂಡ ವಸೂಲಿ ಪ್ರಕಟಿಸಿದೆ. ಟ್ರಾಫಿಕ್ ನಿಯಮ ಉಲ್ಲಂಘನೆ ಪ್ರಕರಣಗಳಲ್ಲಿ ಮಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯಲ್ಲಿ ಶನಿವಾರ 1,929 ಪ್ರಕರಣಗಳಲ್ಲಿ 4.69 ಲಕ್ಷ ರೂ. ದಂಡ ವಸೂಲಿ ಮಾಡಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ಸಂಚಾರ ಪೂರ್ವ ಠಾಣಾ ವ್ಯಾಪ್ತಿಯಲ್ಲಿ 319 ಕೇಸು- 88,100 ರೂ, ಸಂಚಾರ ಪಶ್ಚಿಮದಲ್ಲಿ 375 ಕೇಸು- 92,950 ರೂ., ಸಂಚಾರ ಉತ್ತರದಲ್ಲಿ 384 ಕೇಸು- 79,750 ರೂ., ಸಂಚಾರ ದಕ್ಷಿಣದಲ್ಲಿ 654 ಕೇಸು -1,58,300 ರೂ., ಮಂಗಳೂರು ವನ್‌ನಲ್ಲಿ 161 ಕೇಸು -41,500 ರೂ. ಸಂಚಾರ ಎಸಿಪಿ 36 ಕೇಸು- ದಾಖಲಿಸಿದ್ದು 8,450 ರೂ. ದಂಡ ವಸೂಲಿ ಮಾಡಲಾಗಿದೆ ಎಂದು ಪೊಲೀಸ್ ಕಮಿಷನರ್ ಪ್ರಕಟನೆ ತಿಳಿಸಿದೆ.

ಇನ್ನು ಕರ್ನಾಟಕ ರಾಜ್ಯಲ್ಲಿ ಭಾರಿ ಪ್ರತಿಕ್ರೀಯೆ ವ್ಯಕ್ತವಾಗಿದ್ದು ಸಾರ್ವಜನಿಕರು ನಗರದ ಸಂಚಾರ ಪೊಲೀಸ್ ಠಾಣೆಗಳಿಗೆ ತೆರಳಿ ಬಾಕಿ ದಂಡದ ಮೊತ್ತ ಪಾವತಿಸಿದ್ದು ಮೊದಲ ದಿನ ಶುಕ್ರವಾರ 5.6 ಕೋಟಿ ಸಂಗ್ರಹವಾಗಿದ್ದರೆ ಎರಡನೇ ದಿನವಾದ ಶನಿವಾರ ಬರೋಬ್ಬರಿ 6,80,72,500 ರೂಪಾಯಿ ದಂಡ ಸಂಗ್ರಹವಾಗಿದೆ.

ಕಳೆದ 2 ದಿನಗಳಿಂದ 13,81,13,621 ರೂ ಸಂಚಾರ ನಿಯಮ ಉಲ್ಲಂಘನೆ ದಂಡದ ಮೊತ್ತ ಪಾವತಿಯಾಗಿದೆ. ಬಾಕಿ ಉಳಿಸಿಕೊಂಡಿರುವ ಸಂಚಾರ ದಂಡವನ್ನು ಫೆ.11ರ ಒಳಗೆ ಪಾವತಿಸಿದರೇ ಶೇ.50 ವಿನಾಯಿತಿ ಸಿಗಲಿದೆ.
ನಿಗದಿತ ದಿನಾಂಕದAದು ಬಾಕಿ ಪ್ರಕರಣಗಳನ್ನು ಇತ್ಯಾರ್ಥ ಮಾಡಿಕೊಳ್ಳುವರಿಗೆ ಮಾತ್ರ ಇದು ಅನ್ವಯ ಆಗಲಿದೆ. ಆನಂತರ ಬಂದವರಿಗೆ ವಿನಾಯಿತಿ ಸಿಗುವುದಿಲ್ಲ ಎಂದು ಸಾರಿಗೆ ಇಲಾಖೆ ಸ್ಪಷ್ಟಪಡಿಸಿದೆ.