Recent Posts

Monday, January 27, 2025
ಸುದ್ದಿ

ಎಂಥ ಮರ‍್ರೇ ಇದು..? : ಸಮಸ್ಯೆ ಹೇಳಿಕೊಂಡು ಬಂದ ವಿವಾಹಿತ ಮಹಿಳೆಯ ಮೇಲೆಯೇ ಕಣ್ಣು ಹಾಕಿದ ದೈವ ನರ್ತಕ..! –ಕಹಳೆ ನ್ಯೂಸ್

ದೈವ ನರ್ತಕ ಬಳಿ ಸಮಸ್ಯೆ ಹೇಳಿಕೊಂಡ ಬಂದ ವಿವಾಹಿತ ಮಹಿಳೆಯನ್ನ ತಾನೇ ವರಿಸುವುದಾಗಿ ದೈವ ನರ್ತಕ ಹೇಳಿರುವ ವಿಡಿಯೋ ಇದೋಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗ್ತಾ ಇದ್ದು ಅನುಮಾನಕ್ಕೆ ಕಾರಣವಾಗಿದೆ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ಅಂಬಾರಕೊಡ್ಲ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ದೈವ ನರ್ತಕ ಚಂದ್ರಹಾಸ್ ಅಂಬಾರಕೊಡ್ಲದಲ್ಲಿ ದೇವಸ್ಥಾನ ನಿರ್ಮಿಸಿದ್ದಾನೆ. ಕಾಳಿ, ದುರ್ಗೆ, ಅರ್ಧನಾರೀಶ್ವರ ದೈವ ತನ್ನ ಮೈಮೇಲೆ ಬರುತ್ತದೆ ಎಂದು ಜನರನ್ನು ನಂಬಿಸಿದ್ದ. ಇದನ್ನು ನಂಬಿದ್ದ ಜನರು ಇಲ್ಲಿಗೆ ಬಂದು ಸಮಸ್ಯೆ ಹೇಳಿಕೊಳ್ಳುತ್ತಿದ್ದರು ಎನ್ನಲಾಗಿದೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಅದರಂತೆ ಬೆಳಗಾವಿ ಮೂಲದ ಮಹಿಳೆಯೋರ್ವರು ತನ್ನ ಕಷ್ಟ ಪರಿಹಾರಕ್ಕಾಗಿ ದೈವ ನರ್ತಕ ಬಳಿ ಬಂದಿದ್ದರು.
ಸಮಸ್ಯೆ ಹೇಳಿಕೊಂಡ ಮಹಿಳೆಯನ್ನ ತಾನೇ ವರಿಸುವುದಾಗಿ ಈ ದೈವ ನರ್ತಕ ಪಾತ್ರಿ ಚಂದ್ರಹಾಸ್ ಬಹಿರಂಗವಾಗಿಯೇ ವಾಗ್ದಾನ ಮಾಡಿದ್ದಾನೆ. ಮಾತ್ರವಲ್ಲ, ಇತ್ತೀಚೆಗೆ ಭಾರೀ ಸದ್ದು ಮಾಡಿದ ‘ಕಾಂತಾರ’ ಚಿತ್ರದ ಸ್ಟೈಲ್‌ನಲ್ಲಿ ‘ಈ ಬಾಲಕಿಯನ್ನ ಈ ಬಾಲಕ ಮದುವೆ ಆಗ್ತಾನೆ’, ಈವತ್ತಿನಿಂದ ಈ ಬಾಲಕಿ ನನ್ನ ಅರ್ಧಾಂಗಿಯಾಗಿ, ಅರ್ಧನಾರೇಶ್ವರಿಯಾಗಿ ನನ್ನ ಹೃದಯದಲ್ಲಿ ನೆಲೆಸುತ್ತಾಳೆ.

ಇಂದು ಅಥವಾ ನಾಳೆ ಧರ್ಮಸ್ಥಳ, ಮಂತ್ರಾಲಯ, ಇದೇ ಸ್ಥಳದಲ್ಲಿ ಈ ಬಾಲಕಿ ಕೊರಳಿಗೆ ಈ ಬಾಲಕನ ಕೈಯಿಂದ ತಾಳಿ ಬೀಳುತ್ತೆ. ಇದು ಸತ್ಯ, ಸತ್ಯ ಎಂದ ದೈವ ನರ್ತಕ ಹೇಳಿದ್ದಾನೆ. ದೇವತಾ ಕಾರ್ಯದಲ್ಲಿ ಪಂಜೆಯನ್ನುಟ್ಟು ಮೈಮೇಲೆ ಅರಿಶಿನ ಚೆಲ್ಲಿಕೊಳ್ಳುತ್ತ, ಜೋರಾಗಿ ಕೂಗಿದ್ದಾನೆ ನರ್ತಕ. ಇದೀಗ ದೈವ ನರ್ತಕನ ಈ ವಿಡಿಯೋ ಹಲವು ಅನಮಾನಗಳನ್ನು ಹುಟ್ಟುಹಾಕಿದ್ದು, ಸಮಸ್ಯೆ ಹೇಳಿಕೊಂಡು ಬಂದ ಮಹಿಳೆಯನ್ನೇ ಯಾಮರಿಸಲು ನೋಡಿದ್ದಾನೆ ಅನ್ನೋ ಮಾತುಗಳು ಕೇಳಿ ರ‍್ತಾ ಇದೆ.