Monday, November 25, 2024
ಸುದ್ದಿ

ಮಂಗಳೂರು ನಗರಕ್ಕೆ ಗ್ರಾಮಾಂತರ ಆಟೋಗಳ ಪ್ರವೇಶ ನಿಷೇಧ : ಜಿಲ್ಲಾಧಿಕಾರಿ ಆದೇಶ – ಕಹಳೆ ನ್ಯೂಸ್

ಮಂಗಳೂರು : ಗ್ರಾಮಾಂತರ ಪ್ರದೇಶದಲ್ಲಿ ಪರವಾನಗಿ ಹೊಂದಿರುವ ಆಟೊರಿಕ್ಷಾಗಳು ಯಾವುದೇ ಕಾರಣಕ್ಕೂ ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿ ಪ್ರವೇಶ ಹಾಗೂ ಸಂಚಾರ ಮಾಡುವಂತಿಲ್ಲ ಎಂಬ ಕಟ್ಟುನಿಟ್ಟಿನ ಆದೇಶವನ್ನು ಜಿಲ್ಲಾಧಿಕಾರಿ ರವಿಕುಮಾರ್ ಹೊರಡಿಸಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ಪಾಲಿಕೆ ವ್ಯಾಪ್ತಿಯನ್ನು ಬಿಟ್ಟು ಗ್ರಾಮಾಂತರ ಪ್ರದೇಶದಲ್ಲಿ ಹೊಸ ಆಟೊ ರಿಕ್ಷಾಗಳಿಗೆ ಪರವಾನಗಿ ಮಂಜೂರು ಮಾಡಲು ಯಾವುದೇ ನಿರ್ಬಂಧ ಇಲ್ಲ. ಮಂಗಳೂರು ತಾಲ್ಲೂಕಿನ ಗ್ರಾಮಾಂತರ ಪ್ರದೇಶಗಳಲ್ಲಿ ಸಂಚರಿಸಲು ಹೊಸ ಆಟೊ ರಿಕ್ಷಾಗಳಿಗೆ ಪರವಾನಗಿ ನೀಡಲಾಗುತ್ತದೆ ಎಂದು ತಿಳಿಸಿದ್ದಾರೆ.

ಪಾಲಿಕೆ ವ್ಯಾಪ್ತಿಯಲ್ಲಿ ಸಂಚರಿಸಲು ಹೊಸ ಆಟೊ ರಿಕ್ಷಾ ಪರವಾನಗಿ ಮಂಜೂರು ಮಾಡುವುದನ್ನು ಹಾಗೂ ಹೊಸದಾಗಿ ಪರವಾನಗಿ ಹೊಂದಿ ಅಥವಾ ಇತರೆ ಕಡೆಗಳಿಂದ ವರ್ಗಾವಣೆ ಹೊಂದಿ ಬರುವ ಆಟೊರಿಕ್ಷಾಗಳ ಸಂಚಾರವನ್ನು ನಿಷೇಧಸಲಾಗಿದ್ದು, ಇ-ಆಟೊ ರಿಕ್ಷಾಗಳು, ಆಟೊ ರಿಕ್ಷಾಗಳು ಸಂಚಾರ ನಿಯಮ ಪಾಲನೆ ಕಡ್ಡಾಯ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.