ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ : ದ.ಕ., ಉಡುಪಿ, ಕಾಸರಗೋಡು ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆಗೆ ಚಾಲನೆ – ಕಹಳೆ ನ್ಯೂಸ್
ಬಂಟ್ವಾಳ: ಪುಂಜಾಲಕಟ್ಟೆ ಶ್ರೀ ಮುರುಘೇಂದ್ರ ಮಿತ್ರ ಮಂಡಳಿ ಹಾಗೂ ಶ್ರೀ ಮುರುಘೇಂದ್ರ ವನಿತಾ ಸಮಾಜ ಇದರ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಮಂಗಳೂರು ಇದರ ಸಹಕಾರದಲ್ಲಿ ರಂಗಭೂಮಿ ಕಲಾವಿದರಾಗಿದ್ದ ದಿ.ಲಕ್ಷ್ಮಣ ಶೆಟ್ಟಿಗಾರ್,ದಿ.ಶ್ರೀಧರ್ ಕೆ.ವಿ., ದಿ.ರಘುರಾಮ ಶೆಟ್ಟಿ ಅವರ ಸ್ಮರಣಾರ್ಥ ಫೆ.4ರಿಂದ ಫೆ.11ರವರೆಗೆ ಪುಂಜಾಲಕಟ್ಟೆ ಬಂಗ್ಲೆ ಮೈದಾನದಲ್ಲಿ ನಡೆಯುವ ದ.ಕ.,ಉಡುಪಿ ಹಾಗೂ ಕಾಸರಗೋಡು ಜಿಲ್ಲಾ ಮಟ್ಟದ ತುಳು ನಾಟಕ ಸ್ಪರ್ಧೆಗೆ ಶನಿವಾರ ರಾತ್ರಿ ಚಾಲನೆ ನೀಡಲಾಯಿತು.
ಪ್ರಗತಿಪರ ಕೃಷಿಕ ಉದಯಕುಮಾರ್ ಜೈನ್ ಕಟ್ಟೆಮನೆ ಅವರು ನಾಟಕ ಸ್ಪರ್ಧೆಯನ್ನು ಉದ್ಘಾಟಿಸಿ ಶುಭಹಾರೈಸಿದರು. ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಸಮಾಜಮುಖಿ ಕಾರ್ಯಗಳೊಂದಿಗೆ ನಾಟಕ ಸ್ಪರ್ಧೆಯನ್ನು ಆಯೋಜಿಸಿದ ಮಿತ್ರ ಮಂಡಳಿ ಕಾರ್ಯ ಅಭಿನಂದನೀಯ ಎಂದರು. ಮಾಜಿ ಸಚಿವ ಬಿ.ರಮಾನಾಥ ರೈ ಅವರು ದಿ. ಕೆ.ವಿ.ಶ್ರೀಧರ್ ರಂಗವೇದಿಕೆಯನ್ನು ಉದ್ಘಾಟಿಸಿ ಮಾತನಾಡಿ,ಮನುಷ್ಯ ಕ್ರಿಯಾಶೀಲನಾಗಿದ್ದುಕೊಂಡು ಕಾರ್ಯನಿರ್ವಹಿಸಬೇಕು. ಈ ನಿಟ್ಟಿನಲ್ಲಿ ಮಿತ್ರಮಂಡಳಿ ಹಾಗೂ ವನಿತಾ ಸಮಾಜ ಸಾಮಾಜಿಕ ಹಾಗೂ ಜನಪರವಾಗಿ ಉತ್ತಮವಾಗಿ ಕೆಲಸ ಮಾಡುತ್ತಿದೆ ಎಂದು ಶ್ಲಾಘಿಸಿದರು.
ಪಿಲಾತಬೆಟ್ಟು ಗ್ರಾ.ಪಂ.ಅಧ್ಯಕ್ಷೆ ಹರ್ಷಿಣಿ ಪುಷ್ಪಾನಂದ,ಮಡಂತ್ಯಾರು ಗ್ರಾ.ಪಂ.ಅಧ್ಯಕ್ಷೆ ಶಶಿಪ್ರಭಾ, ಬಂಟವಾಳ ಬಂಟರ ಸಂಘದ ಅಧ್ಯಕ್ಷ ಚಂದ್ರಹಾಸ ಶೆಟ್ಟಿ ರಂಗೋಲಿ,ಜಿ.ಪಂ.ನ ಮಾಜಿ ಸದಸ್ಯರಾದ ಎಂ. ತುಂಗಪ್ಪ ಬಂಗೇರ,ಬಿ.ಪದ್ಮಶೇಖರ ಜೈನ್,ನಿವೃತ್ತ ಬ್ಯಾಂಕ್ ಅಧಿಕಾರಿ ಬೇಬಿ ಕುಂದರ್, ಧರ್ಮಗುರು ರೆ. ಫಾ. ಜೋಸೆಫ್ ಡಿಸೋಜ, ತಾ.ಪಂ.ಮಾಜಿ ಸದಸ್ಯ ರಮೇಶ್ ಕುಡ್ಮೇರು, ಉದ್ಯಮಿ ಗಳಾದ ವಿಟ್ಠಲಶೆಟ್ಟಿ ಮೈಸೂರು, ಪುರುಷೋತ್ತಮ ಶೆಟ್ಟಿ ವಾಮದಪದವು, ಓಂಪ್ರಸಾದ್,ಬಂಟ್ವಾಳ ತಾ.ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಪ್ರಶಾಂತ್ ಪುಂಜಾಲಕಟ್ಟೆ ಅವರು ಅತಿಥಿಗಳಾಗಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಸರಪಾಡಿ ಅಶೋಕ ಶೆಟ್ಟಿ,ಸಾಮಾಜಿಕ ಕಾರ್ಯಕರ್ತ ಸಿಲ್ವೆಸ್ಟರ್ ಪಿಂಟೋ, ಕಾಮಿಡಿ ಕಿಲಾಡಿ ಖ್ಯಾತಿಯ ಪಿಂಕಿರಾಣಿ ಅವರನ್ನು ಸನ್ಮಾನಿಸಲಾಯಿತು. ದಿ.ಲಕ್ಷ್ಮಣ ಶೆಟ್ಟಿಗಾರ್,ದಿ.ಶ್ರೀಧರ್ ಕೆ.ವಿ., ದಿ.ರಘುರಾಮ ಶೆಟ್ಟಿ ಅವರ ಮನೆಯರಿಗೆ ಗೌರವಾರ್ಪಣೆ ನಡೆಸಲಾಯಿತು.
ಮಿತ್ರ ಮಂಡಳಿಯ ಅಧ್ಯಕ್ಷ ಪ್ರವೀಣ ಶೆಟ್ಟಿ, ಪದಾಧಿಕಾರಿಗಳಾದ ಮಂಜಪ್ಪ ಮೂಲ್ಯ ಅತ್ತಾಜೆ,ಗಿರೀಶ್ ಮೂಲ್ಯ, ದಿನಕರ ಶೆಟ್ಟಿ ಅಂಕದಳ, ಚಂದ್ರಶೇಖರ ಶೆಟ್ಟಿಗಾರ್, ವನಿತಾ ಸಮಾಜದ ಅಧ್ಯಕ್ಷೆ ಪುಷ್ಪಲತಾ ಮೋಹನ್, ಪದಾಧಿಕಾರಿಗಳಾದ ಆಶಾ ದಿನಕರ ಶೆಟ್ಟಿ, ಸುನಿತಾ ಹೆಗ್ಡೆ, ಶಶಿಕಲಾ ಗೋಪಾಲ್, ಉಮಾ ಡಿ.ಗೌಡ, ಬಬಿತಾ ದಿನೇಶ್ ಮತ್ತಿತರರು ಉಪಸ್ಥಿತರಿದ್ದರು.
ಗೌರವಾಧ್ಯಕ್ಷ ಉದಯಕುಮಾರ್ ಶೆಟ್ಟಿ ಮೇಲ್ಮನೆ ಸ್ವಾಗತಿಸಿದರು. ಸದಸ್ಯ ರತ್ನದೇವ್ ಪುಂಜಾಲಕಟ್ಟೆ ಪ್ರಸ್ತಾವಿಸಿದರು.ಪ್ರಜ್ವಲ್ ಸಿದ್ದಕಟ್ಟೆ ಕಾರ್ಯಕ್ರಮ ನಿರೂಪಿಸಿದರು. ಬಳಿಕ ಪಲ್ಲವಿ ಕಲಾವಿದರು ಕಾರ್ಕಳ ಇವರಿಂದ ದಿಬ್ಬಣ ಸ್ಪರ್ಧಾ ನಾಟಕ ಪ್ರದರ್ಶನಗೊಂಡಿತು.