ಮಂಗಳೂರಿನಲ್ಲಿ ವಿಜಯ ಸಂಕಲ್ಪ ಅಭಿಯಾನಕ್ಕೆ ತೇಜಸ್ವಿ ಸೂರ್ಯ ಸಾಥ್ : ಮನೆ ಮನೆಗೆ ಭೇಟಿ ನೀಡಿ ಗೋಡೆ ಬರಹ ಸ್ಟಿಕರ್ ಅಂಟಿಸಿದ ಸಂಸದರು –ಕಹಳೆ ನ್ಯೂಸ್
ಮಂಗಳೂರು ನಗರದ ಗುರುನಗರದಲ್ಲಿ ಬಿಜೆಪಿ ವಿಜಯ ಸಂಕಲ್ಪ ಅಭಿಯಾನಕ್ಕೆ ಸಂಸದ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾದ ಅಧ್ಯಕ್ಷ ತೇಜಸ್ವಿ ಸೂರ್ಯ ಚಾಲನೆಯನ್ನ ನಿಡಿದ್ದಾರೆ. ಈ ವೇಳೆ ಮಂಗಳೂರು ಮಹಾನಗರ ಪಾಲಿಕೆಯ ಮಹಾಪೌರರಾದ ಜಯನಂದ ಅಂಚನ್ ತೇಜಸ್ವಿ ಸೂರ್ಯ ಅವರಿಗೆ ಶಾಲು ಹೊದಿಸಿ ಸ್ಮರಣಿಕೆ ನೀಡಿ ಸ್ವಾಗತಿಸಿದರು.
ಕಾರ್ಯಕರ್ತನನ್ನು ಉದ್ದೇಶಿಸಿ ರಾಷ್ಟ್ರೀಯ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷರಾದ ತೇಜಸ್ವ ಸೂರ್ಯ ಮಾತನಾಡಿ, ಕಾರ್ಯಕರ್ತರನ್ನು ಭೇಟಿ ಮಾಡುವುದು ಒಂದು ಪರಿವಾರವನ್ನು ಭೇಟಿ ಮಾಡಿದಂತೆ. ವಿಜಯ ಸಂಕಲ್ಪ ಯಾತ್ರೆಯಲ್ಲಿ ಮಂಗಳೂರಿನ ಕಾರ್ಯಕರ್ತರೊಂದಿಗೆ ಬೆರೆಯುವುದೇ ಒಂದು ಸಂತೋಷ ಎಂದ್ರು. ಬಳಿಕ ಕಾರ್ಯಕರ್ತರು ನಮಗೆ ಪಕ್ಷ ಏನು ನೀಡಿದ್ದೆ ಎಂಬುದಕ್ಕಿAತ ನಾವು ಪಕ್ಷಕ್ಕೆ ಕೊಡುಗೆ ನೀಡಬೇಕೆನ್ನುವುದರ ಬಗ್ಗೆ ಕಾರ್ಯಕರ್ತರಲ್ಲಿ ಸಮಾಲೋಚನೆ ನಡೆಸಿದರು.
ನಂತರ ಮನೆ ಮನೆಗೆ ತೆರಳಿ ಗೋಡಿಬರಹ ಸ್ಟಿಕರ್ ಆಂಟಿಸುವುದರ ಮೂಲಕ ಬಿಜೆಪಿ ಕಾರ್ಯಕರ್ತರೊಂದಿಗೆ ಹೆಜ್ಜೆ ಹಾಕಿದ್ರು.
ಈ ಸಂದರ್ಭದಲ್ಲಿ ವಿಧಾನಸಭಾ ಕ್ಷೇತ್ರದ ಶಾಸಕ ವೈ ಭರತ್ ಶೆಟ್ಟಿ, ಮಂಗಳೂರು ಮಹಾನಗರ ಪಾಲಿಕೆಯ ಮೇಯರ್ ಜಯಾನಂದ, ಸುರತ್ಕಲ್ ಬಿಜೆಪಿ ಯುವ ಮೋರ್ಚಾದ ಅಧ್ಯಕ್ಷ ಭರತ್ ಕುಮಾರ್, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ವರುಣ್ ಚೌಟ ಉಪಸ್ಧಿತರಿದ್ರು.