Friday, January 24, 2025
ಸುದ್ದಿ

ಮಾರಮ್ಮನ ಡಿಸ್ಕೋ ಹಾಡು ಹಾಡ್ತಾ ಆಯತಪ್ಪಿ ಬಿದ್ದ ರ‍್ಯಾಪರ್ ಸಿಂಗರ್ ಅಲೋಕ್ – ಕಹಳೆ ನ್ಯೂಸ್

ಕಾರವಾರ: ಕಾರವಾರದ ಮಯೂರವರ್ಮ ವೇದಿಕೆಯಲ್ಲಿ ಕರುನಾಡು ಕರಾವಳಿ ಉತ್ಸವ ನಡೆಯುತ್ತಿತ್ತು. ಕಲರ್‌ಫುಲ್ ಕಾರ್ಯಕ್ರಮದಲ್ಲಿ ರ‍್ಯಾಪರ್ ಸಿಂಗರ್ ಮಾರಮ್ಮನ ಡಿಸ್ಕೋ ಹಾಡು ಹಾಡುತ್ತಿದ್ದರು.ALL OK ಜಬರ್ದಸ್ತ್ ಹಾಡಿಗೆ ಸಾವಿರಾರು ಜನರು ಹುಚ್ಚೆದ್ದು ಕುಣಿಯುತ್ತಿದ್ದರು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ವೇದಿಕೆಯಲ್ಲಿ ಹಾಡು ಹಾಡುತ್ತಿದ್ದಾಗ ಆಕಸ್ಮಿಕವಾಗಿ ಅಭಿಮಾನಿಯೊಬ್ಬ ಬಂದು, ವೇದಿಕೆ ಮೇಲೆ ಗಾಯಕ ಅಲೋಕ್ ಬಾಬು ಅವರನ್ನ ತಬ್ಬಿಕೊಂಡಿದ್ದಾನೆ. ಅಲೋಕ್ ಜೊತೆಗೆ ಒಂದೆರಡು ಸ್ಟೆಪ್ಸ್ ಹಾಕಲು ಮುಂದಾಗಿದ್ದಾನೆ. ಈ ಸಂದರ್ಭದಲ್ಲಿ ಆ ಅಭಿಮಾನಿಯನ್ನ ದೂರ ಕಳುಹಿಸಲು ಪೊಲೀಸರು ಸಡನ್ ಆಗಿ ಬಂದಿದ್ದಾರೆ. ಇದನ್ನ ಗಮನಿಸಿದ ಅಭಿಮಾನಿ ಪೊಲೀಸರಿಂದ ತಪ್ಪಿಸಿಕೊಳ್ಳುವ ಭರದಲ್ಲಿ ಗಾಯಕ ಅಲೋಕ್ ಅನ್ನು ಜೋರಾಗಿ ತಳ್ಳಿದ್ದಾನೆ. ಕೆಲಕ್ಕೆ ಬಿದ್ದ ಅಲೋಕ್, ತಕ್ಷಣವೇ ಮೇಲೆದಿದ್ದಾರೆ. ಆದ್ರೆ ಅರೇ ಕ್ಷಣ ಈ ಘಟನೆ ಕಂಡ ಜನ ಮಾತ್ರ ಅಯ್ಯೋ ಇದೇನಾಯ್ತಾಪ್ಪ ಅಂತ ಗಾಬರಿಗೊಂಡಿದ್ದಾರೆ. ಬಿದ್ದರೂ ಮತ್ತೆ ಮೇಲೆದ್ದ ಅಲೋಕ್ ಬಾಬು ನೋ ಪ್ರಾಬ್ಲಂ ಎನ್ನುತ್ತಾ ಮಾರಮ್ಮನ ಡಿಸ್ಕೋ ಹಾಡು ಮುಂದುವರಿಸಿದ್ದಾರೆ.