Friday, January 24, 2025
ಸುದ್ದಿ

ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ಪೆ.26 ಕ್ಕೆ ಮಂಗಳೂರ್ ನಲ್ಲಿ ಹಿಂದುತ್ವದ ಘರ್ಜನೆ – ಕಹಳೆ ನ್ಯೂಸ್

ಮಂಗಳೂರು – ಹಿಂದೂ ಜನಜಾಗೃತಿ ಸಮಿತಿಯ ವತಿಯಿಂದ ದಿನಾಂಕ 26 ಫೆಬ್ರವರಿ ಯಂದು ಕದ್ರಿ ಮೈದಾನದಲ್ಲಿ ನಡೆಯಲಿರುವ ಹಿಂದೂ ರಾಷ್ಟ್ರ ಜಾಗೃತಿ ಸಭೆಯ ಕುರಿತು ಪೂರ್ವಭಾವಿ ಸಭೆಯನ್ನು ನಡೆಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ಸಂದರ್ಭದಲ್ಲಿ ಹಿಂದೂ ಜನ ಜಾಗೃತಿ ಸಮಿತಿಯ ದಕ್ಷಿಣ ಕರ್ನಾಟಕದ ಸಮನ್ವಯಕರಾದ ಶ್ರೀಚಂದ್ರ ಮೊಗೇರ್ ಇವರು ಮಾತಾನಾಡುತ್ತ ಇಂದು ಜಗತ್ತಿನಲ್ಲಿ 157 ಕ್ರೈಸ್ತ, 52 ಮುಸ್ಲಿಂ, 13 ಬೌದ್ಧ ಮತ್ತು 1 ಯಹೂದಿ ರಾಷ್ಟ್ರಗಳಿವೆ. ಆದರೆ ಹಿಂದುಗಳಿಗೆ ಒಂದೇ ಒಂದು ರಾಷ್ಟ್ರವಿಲ್ಲ.ಜಾತ್ಯತೀತ ಭಾರತದ 9 ರಾಜ್ಯಗಳಲ್ಲಿ ಹಿಂದುಗಳು ಅಲ್ಪಸಂಖ್ಯಾತರಾಗಿದ್ದಾರೆ. ಜಾತ್ಯತೀತ ಸರಕಾರವು ದೇವಾಲಯಗಳನ್ನು ಸ್ವಾಧೀನ ಪಡಿಸಿಕೊಳ್ಳುತ್ತವೆ ಮತ್ತು ಹಿಂದುಗಳ ತೀರ್ಥಯಾತ್ರೆಗಳ ಮೇಲೆ ತೆರಿಗೆಯನ್ನು ಹೇರುತ್ತದೆ. ಮತಾಂತರ, ಲವ್ ಜಿಹಾದ್, ಉಗುಳು ಜಿಹಾದ್ ಮುಂತಾದ ಷಡ್ಯಂತ್ರಗಳು ಬಯಲಾಗುತ್ತಿವೆ. ಆದುದರಿಂದ ಇದಕ್ಕೆಲ್ಲ ಒಂದೇ ಪರಿಹಾರ ಭಾರತವನ್ನು ಸವಿಂದಾನ ಬದ್ಧವಾಗಿ ಹಿಂದೂ ರಾಷ್ಟ್ರವೆಂದು ಘೋಷಣೆ ಮಾಡಬೇಕು ಎಂದು ದಿನಾಂಕ 01. ಫೆಬ್ರವರಿ 2023 ರಂದು ಶ್ರೀ ಕೃಷ್ಣ ಮಂದಿರ ವಿ.ಟಿ. ರೋಡ್ ಸಭಾಗ್ರಹದಲ್ಲಿ ನಡೆದ ಪೂರ್ವ ಭಾವಿ ಸಭೆಯಲ್ಲಿ ಮಾತನಾಡಿದರು.

ಈ ಪೂರ್ವಭಾವಿ ಸಭೆಯಲ್ಲಿ ಹಲವಾರು ಸಂಘಟನೆಗಳ ಗಣ್ಯ ವ್ಯಕ್ತಿಗಳು, ಉದ್ಯಮಿಗಳು ಹಾಗೂ ಧರ್ಮ ಪ್ರೇಮಿಗಳು ಉಪಸ್ಥಿತರಿದ್ದರು.

ಮುಂದಕ್ಕೆ ಮಾತನ್ನು ಮುಂದುವರಿಸುತ್ತ ಪೆಬ್ರವರಿ 26 ರಂದು ನಡೆಯಲಿರುವ ಹಿಂದೂ ರಾಷ್ಟ್ರ ಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಧರ್ಮ ಪ್ರೇಮಿಗಳು, ಬಂಧು ಭಗೀನಿಯರು ಬಾಗಿಯಾಗಬೇಕು ಮತ್ತು ಹೆಚ್ಚು ಸಂಖ್ಯೆ ಸೇರಿಸುವಲ್ಲಿ ನಾವೆಲ್ಲರೂ ಕೈ ಜೋಡಿಸಿ ಸಭೆಯನ್ನು ಯಶಸ್ವೀಗೊಳಿಸಿ ರಾಷ್ಟ್ರ ಹಾಗೂ ಧರ್ಮದ ಆ ಭಗವಂತನ ಕಾರ್ಯದಲ್ಲಿ ನಮ್ಮನ್ನು ನಾವು ತೊಡಗಿಸಿಕೊಳ್ಳುವ ಎಂದು ಕರೆ ನೀಡಿದರು.

ದಕ್ಷಿಣ ಕನ್ನಡದ ಸಮಿತಿ ಸಮನ್ವಯಕರಾದ. ಸೌ ಪವಿತ್ರ ಕುಡ್ವರವರು ಕಾರ್ಯಕ್ರಮ ನಿರೂಪಣೆ ಮಾಡಿದರು.