Thursday, January 23, 2025
ಸುದ್ದಿ

ಕೋಡಿಕೆರೆ ಸೆಜ್ ಕಾಲನಿಯಲ್ಲಿ 15.64 ಕೋ. ರೂ. ವೆಚ್ಚದ ತ್ಯಾಜ್ಯ ನಿರ್ವಹಣಾ ಘಟಕಕ್ಕೆ ಭೂಮಿಪೂಜೆ ನೆರವೇರಿಸಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ – ಕಹಳೆ ನ್ಯೂಸ್

ಸುರತ್ಕಲ್: ಕೋಡಿಕೆರೆ ಸೆಜ್ ಕಾಲನಿಯಲ್ಲಿ 15.64 ಕೋಟಿ ರೂ. ಅನುದಾನದಲ್ಲಿ ತ್ಯಾಜ್ಯ ನಿರ್ವಹಣಾ ಘಟಕ ಮತ್ತು ರೇಚಕ ಸ್ಥಾವರಕ್ಕೆ ಭೂಮಿಪೂಜೆ ಕಾರ್ಯಕ್ರಮ ಜರುಗಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಭೂಮಿಪೂಜೆ ನೆರವೇರಿಸಿ ಮಾತಾಡಿದ ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ಭರತ್ ಶೆಟ್ಟಿ ವೈ. ಅವರು, “ಕ್ಷೇತ್ರಕ್ಕೆ 2000 ಕೋಟಿ ರೂ. ಅನುದಾನ ತರುವ ಮೂಲಕ ಜನರ ಸಮಸ್ಯೆಯನ್ನು ಬಗೆಹರಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದೇನೆ. ಇಲ್ಲಿ ತ್ಯಾಜ್ಯ ಘಟಕ ನಿರ್ಮಿಸಲು ಸೆಜ್ ಅಧಿಕಾರಿಗಳು ಹಣವಿಲ್ಲ ಎಂದು ಕೈ ಎತ್ತಿದ್ದರು. ಈ ವೇಳೆ ಅವರೊಂದಿಗೆ ಮಾತುಕತೆ ನಡೆಸಿ ನೀವು ಜಗವನ್ನಾದರೂ ಬಿಟ್ಟಿಕೊಡಿ ಎಂದಿದ್ದಕ್ಕೆ ಅವರು ಜಾಗ ಬಿಟ್ಟುಕೊಟ್ಟಿದ್ದಾರೆ. ಈ ಭಾಗದ ಜನರು ಬಹುಕಾಲದ ಬೇಡಿಕೆಯಾದ ತ್ಯಾಜ್ಯ ನಿರ್ವಹಣಾ ಘಟಕ ಆದಷ್ಟು ಬೇಗ ಲೋಕಾರ್ಪಣೆಗೊಳ್ಳಲಿದೆ” ಎಂದರು.

ಪ್ರಾಸ್ತಾವಿಕ ಮಾತಾಡಿದ ಕಾರ್ಪೋರೇಟರ್ ವರುಣ್ ಚೌಟ ಅವರು, “ಕ್ಷೇತ್ರದಲ್ಲಿ ಇತಿಹಾಸದಲ್ಲೇ ಮೊದಲ ಬಾರಿಗೆ 2000 ಕೋಟಿ ರೂ. ಅನುದಾನವನ್ನು ತಂದು ಪ್ರತಿನಿತ್ಯ ಅಭಿವೃದ್ಧಿ ಕಾರ್ಯಗಳಿಗೆ ಭೂಮಿಪೂಜೆ ನೆರವೇರಿಸುತ್ತಿರುವ ಈ ಭಾಗದ ಶಾಸಕರು ಅಭಿನಂದನಾರ್ಹರು. ಇಂತಹ ನಾಯಕನ ಜೊತೆಗೆ ಕೆಲಸ ಮಾಡಲು ನಾವು ಹೆಮ್ಮೆ ಪಡುತ್ತೇವೆ. ಕ್ಷೇತ್ರದಲ್ಲಿ ಅಭಿವೃದ್ಧಿ ಕಾರ್ಯಗಳಿಗೆ ಅಹರ್ನಿಶಿ ದುಡಿಯುತ್ತಿರುವ ಶಾಸಕರಿಗೆ ನಾವೆಂದೂ ಚಿರಋಣಿ” ಎಂದರು.
ವೇದಿಕೆಯಲ್ಲಿ ಕಾರ್ಪೋರೇಟರ್ ಗಳಾದ ವರುಣ್ ಚೌಟ, ವೇದಾವತಿ, ರಾಘವೇಂದ್ರ ಕುಡ್ವ, ವಿಜಯ್ ಅಮೀನ್, ಭಾಗ್ಯಚಂದ್ರ ಭಟ್ ಮತ್ತಿತರರು ಉಪಸ್ಥಿತರಿದ್ದರು.