Thursday, January 23, 2025
ಸುದ್ದಿ

3ನೇ ಬಾರಿಗೆ ಪ್ರತಿಷ್ಠಿತ ಗ್ರ್ಯಾಮಿ ಅವಾರ್ಡ್‍ನ್ನು ಗೆದ್ದ ಮೊದಲ ಭಾರತೀಯ ಸಂಗೀತ ಸಂಯೋಜಕ ರಿಕ್ಕಿ ಕೇಜ್ – ಕಹಳೆ ನ್ಯೂಸ್

ವಾಷಿಂಗ್ಟನ್: ಭಾರತೀಯ ಸಂಗೀತ ಸಂಯೋಜಕ ರಿಕ್ಕಿ ಕೇಜ್ 65ನೇ ವಾರ್ಷಿಕ ಗ್ರ್ಯಾಮಿ ಅವಾರ್ಡ್ ನಲ್ಲಿ ಪ್ರತಿಷ್ಠಿತ ಗ್ರ್ಯಾಮಿ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

2023 ನೇ ಸಾಲಿನ ಗ್ರ್ಯಾಮಿ ಪ್ರಶಸ್ತಿಯಲ್ಲಿ ರಿಕ್ಕಿ ಮತ್ತು ಸ್ಟೀವರ್ಟ್ ಕೋಪ್‍ಲ್ಯಾಂಡ್ ಅವರ ʼಡಿವೈನ್ ʼಟೈಡ್ಸ್ʼ ಆಲ್ಬಂ ಅತ್ಯುತ್ತಮವಾಗಿ ಗಮನ ಸೆಳೆಯುವ ಆಡಿಯೋ ವಿಭಾಗದಲ್ಲಿ (Best Immersive Audio Album category) ಆಯ್ಕೆಯಾಗಿತ್ತು.

ಸ್ಟೀವರ್ಟ್ ಕೋಪ್‍ಲ್ಯಾಂಡ್ ಅವರೊಂದಿಗೆ ʼಡಿವೈನ್ ಟೈಡ್ಸ್ ಆಲ್ಬಂʼಗಾಗಿ ರಿಕ್ಕಿ ಕೇಜ್ ಗ್ರ್ಯಾಮಿ ಪ್ರಶಸ್ತಿಯನ್ನು ಹಂಚಿಕೊಂಡಿದ್ದಾರೆ. ಇದು ರಿಕ್ಕಿ ಕೇಜ್ ಅವರ ಮೂರನೇ ಗ್ರ್ಯಾಮಿ ಪ್ರಶಸ್ತಿ. ಮೂರು ಬಾರಿ ಗ್ರ್ಯಾಮಿ ಗೆದ್ದ ಏಕೈಕ ಭಾರತೀಯ ಎಂಬ ಹೆಗ್ಗಳಿಕೆಯನ್ನು ರಿಕ್ಕಿ ಕೇಜ್ ಪಡೆದುಕೊಂಡಿದ್ದಾರೆ.

ಇದಕ್ಕೂ ಮುನ್ನ ರಿಕ್ಕಿ ಕೇಜ್ 2015ರಲ್ಲಿ ʼವಿಂಡ್ಸ್ ಆಫ್ ಸಂಸಾರʼ ಹಾಡಿಗೆ ಮೊದಲ ಗ್ರ್ಯಾಮಿ ಅವಾರ್ಡ್ ಪಡೆದುಕೊಂಡಿದ್ದರು. ಗ್ರ್ಯಾಮಿ 2022 ಅವಾರ್ಡ್ ಕಾರ್ಯಕ್ರಮದಲ್ಲಿ ʼಡಿವೈನ್ ಟೈಡ್ಸ್ʼ ಆಲ್ಬಂ ಬೆಸ್ಟ್ ನ್ಯೂ ಏಜ್ ಆಲ್ಬಂ ಕ್ಯಾಟಗರಿಯಲ್ಲಿ ಪ್ರಶಸ್ತಿ ಗೆದ್ದಿತ್ತು.

ʼಡಿವೈನ್ ಟೈಡ್ಸ್ʼ ಆಲ್ಬಮ್‍ನಲ್ಲಿ ವಿಶ್ವದ ಸಹಜತೆ, ಸೊಗಡನ್ನು ಸುಂದರವಾಗಿ ತೋರಿಸಲಾಗಿದೆ. ಈ ಆಲ್ಬಮ್‍ನಲ್ಲಿ 9 ಹಾಡುಗಳು, 8 ಮ್ಯೂಸಿಕ್ ವಿಡಿಯೋಗಳಿವೆ. ಭಾರತದ ಹಿಮಾಲಯದಿಂದ ಸ್ಪೇನ್ ಕಾಡಿನವರೆಗೂ ಈ ಆಲ್ಬಮ್‍ಗಾಗಿ ಚಿತ್ರೀಕರಣ ಮಾಡಲಾಗಿತ್ತು. ಇದರ ದೃಶ್ಯಗಳು ಮನಮೋಹಕವಾಗಿ ಮೋಡಿ ಬಂದಿದೆ.

ಅಮೆರಿಕಾದ ಲಾಸ್ ಎಂಜಲೀಸ್ ನಲ್ಲಿ ಕಾರ್ಯಕ್ರಮ ನಡೆದಿದೆ. ಪ್ರಶಸ್ತಿ ಸ್ವೀಕರಿಸಿದ ಬಳಿಕ ಇದು ನನ್ನ ಮೂರನೇ ಗ್ರ್ಯಾಮಿ ಎಂದು ರಿಕ್ಕಿ ಖುಷಿಯಿಂದ ಬರೆದು ವಿಚಾರವನ್ನು ಹಂಚಿಕೊಂಡಿದ್ದಾರೆ.