Thursday, January 23, 2025
ಸುದ್ದಿ

ಇಸ್ಲಾಮಿಕ್ ದೇಶವಾದ ಇಂಡೋನೇಷ್ಯಾದಲ್ಲಿದೆ ಮನಮೋಹಕ ಹಿಂದೂ ದೇವಾಲಯ : ವಿಷಕಾರಿ ಸರ್ಪಗಳೇ ಇದಕ್ಕೆ ಕಾವಲು…! – ಕಹಳೆ ನ್ಯೂಸ್

ಇಂಡೋನೇಷ್ಯಾ: ಪ್ರಪಂಚದ ಅನೇಕ ಹಿಂದೂ ದೇವಾಲಯಗಳು ತಮ್ಮ ಶಿಲ್ಪಕಲೆ ಸೌಂದರ್ಯ ಮತ್ತು ಅನೇಕ ರಹಸ್ಯಗಳಿಂದ ಕಂಗೊಳಿಸುತ್ತಿವೆ. ಇವುಗಳಲ್ಲಿ ಒಂದು ಇಸ್ಲಾಮಿಕ್ ದೇಶವಾದ ಇಂಡೋನೇಷ್ಯಾದಲ್ಲಿ ಸಮುದ್ರದ ಮಧ್ಯದಲ್ಲಿರುವ ‘ತಾನಾ ಲೋಟ್’ ದೇವಾಲಯ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಈ ದೇವಾಲಯವು ವಿಷಕಾರಿ ಹಾವುಗಳಿಂದ ರಕ್ಷಿಸಲ್ಪಟ್ಟಿದೆ ಎಂದು ಹೇಳಲಾಗುತ್ತದೆ. ಅದ್ರಂತೆ, ದೇವಾಲಯವನ್ನ ಸಮುದ್ರ ತೀರದಲ್ಲಿರುವ ದೊಡ್ಡ ಬಂಡೆಯ ಮೇಲೆ ನಿರ್ಮಿಸಲಾಗಿದ್ದು, ಸುಮಾರು 600 ವರ್ಷಗಳಷ್ಟು ಪುರಾತನವಾದದ್ದು. ಸ್ಥಳೀಯ ಭಾಷೆಯಲ್ಲಿ ‘ತಾನಾ ಲೋಟ್’ ಎಂದರೆ ಸಮುದ್ರ ಭೂಮಿ. ಈ ದೇವಾಲಯದ ವಾಸ್ತುಶಿಲ್ಪ ಅದ್ಭುತವಾಗಿದೆ.

ಇಂಡೋನೇಷ್ಯಾಕ್ಕೆ ಭೇಟಿ ನೀಡುವವರು ಈ ದೇವಾಲಯಕ್ಕೆ ಭೇಟಿ ನೀಡುತ್ತಾರೆ. ಇತಿಹಾಸದ ಪ್ರಕಾರ, 15ನೇ ಶತಮಾನದಲ್ಲಿ, ನೀರತ ಎಂಬ ಪುರೋಹಿತರು ಸಮುದ್ರತೀರದಲ್ಲಿ ನಡೆದುಕೊಂಡು ಈ ಪ್ರದೇಶಕ್ಕೆ ಬಂದರು. ಈ ಸ್ಥಳದ ನೈಸರ್ಗಿಕ ಸೌಂದರ್ಯವು ಅವರನ್ನ ಅಪಾರವಾಗಿ ಆಕರ್ಷಿಸಿದ್ದು, ಅಲ್ಲಿಯೇ ಉಳಿಯಲು ನಿರ್ಧರಿಸಿದರು.

ಆ ಸ್ಥಳದಲ್ಲಿ ದೇವಾಲಯವನ್ನ ನಿರ್ಮಿಸಲು ಅವರು ಮೀನುಗಾರರ ಸಹಾಯವನ್ನ ಪಡೆದರು. ಅದ್ರಂತೆ, ಸಮುದ್ರದಲ್ಲಿ ನಿರ್ಮಿಸಲಾಗಿರುವ ಈ ದೇವಾಲಯದ ಸುರಕ್ಷತೆಯನ್ನ ವಿಷಕಾರಿ ಹಾವುಗಳು ಕಾಪಾಡುತ್ತವೆ ಎಂದು ಹೇಳಲಾಗುತ್ತದೆ. ಈ ಹಾವುಗಳೇ ದೇವಾಲಯವನ್ನ ಒಳನುಗ್ಗುವವರಿಂದ ರಕ್ಷಿಸುತ್ತಿವೆ ಎನ್ನಲಾಗ್ತಿದೆ. ಅರ್ಚಕನು ತನ್ನ ಶಕ್ತಿಯಿಂದ ಬೃಹತ್ ಸಮುದ್ರ ಸರ್ಪವನ್ನ ಸೃಷ್ಟಿಸಿದನು ಎಂದು ಸ್ಥಳೀಯರು ಹೇಳುತ್ತಾರೆ, ಅದು ಇನ್ನೂ ದೇವಾಲಯವನ್ನ ಕಾಪಾಡುತ್ತಿದೆಯಂತೆ.

ಇಂಡೋನೇಷ್ಯಾ: ಪ್ರಪಂಚದ ಅನೇಕ ಹಿಂದೂ ದೇವಾಲಯಗಳು ತಮ್ಮ ಶಿಲ್ಪಕಲೆ ಸೌಂದರ್ಯ ಮತ್ತು ಅನೇಕ ರಹಸ್ಯಗಳಿಂದ ಕಂಗೊಳಿಸುತ್ತಿವೆ. ಇವುಗಳಲ್ಲಿ ಒಂದು ಇಸ್ಲಾಮಿಕ್ ದೇಶವಾದ ಇಂಡೋನೇಷ್ಯಾದಲ್ಲಿ ಸಮುದ್ರದ ಮಧ್ಯದಲ್ಲಿರುವ ‘ತಾನಾ ಲೋಟ್'(Tanah Lot) ದೇವಾಲಯ.