Thursday, January 23, 2025
ಸುದ್ದಿ

‘ನೊಂದ ವಿವಾಹಿತೆಯರೇ ಈತನ ಟಾರ್ಗೆಟ್’ ; ಸಂತ್ರಸ್ತೆ ದೂರು ನೀಡಿದ್ದರು, ಆರೋಪಿ ಸಂಜಯ್ ಮೇಲೆ ಯಾವುದೇ ಕ್ರಮ ಕೈಗೊಳ್ಳದ ಪೊಲೀಸರು –ಕಹಳೆ ನ್ಯೂಸ್

ನೊಂದ ವಿವಾಹಿತೆಯರೇ ಈತನ ಟಾರ್ಗೆಟ್. ಎಲ್ಲಾದರೂ ಮಹಿಳೆ ವೈವಾಹಿಕ ಜೀವನದಲ್ಲಿ ಸಮಸ್ಯೆ ಎದುರಿಸುತ್ತಿದ್ದಾರೆ ಅಂದ ಕೂಡಲೇ ಸಾಂತ್ವನ ಮಾಡುವ ನಾಟಕವಾಡಿ ಕೊನೆಗೆ ತಾನೇ ಒಳ್ಳೆಯ ಗಂಡನಾಗಿ ಇರುವ ಭರವಸೆ ಹುಟ್ಟಿಸಿ ಈಗಾಗಲೇ ಇರುವ ಪತಿರಾಯನಿಗೆ ವಿಚ್ಚೇದನ ಕೊಡಿಸಿ ರಹಸ್ಯವಾಗಿ ಮದುವೆ ಕೂಡ ಆಗ್ತಾನೆ. ಆ ಬಳಿಕ ತಿಂಗಳು ಕಳೆದಂತೆ ತೆರೆಯುತ್ತೆ ಈ ಕಿರಾತಕನ ಅಸಲಿ ಮುಖ..

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಯೆಸ್.. ಈತನ ಹೆಸರು ಸಂಜಯ್ (27). ಕಾರ್ಕಳದ ಖಾಸಗಿ ಬ್ಯಾಂಕ್ ಒಂದರಲ್ಲಿ ಲೋನ್ ರಿಕವರಿ ಏಜೆಂಟ್ ಆಗಿ ಕೆಲಸ. ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ಅಯ್ಯಪ್ಪನಗರ ನಿವಾಸಿ ಈತ. ಅಯ್ಯಪ್ಪ ನಗರದಲ್ಲೇ ಇರುವ ವಿವಾಹಿತೆ ಮೇಘಶ್ರೀ ಶೆಟ್ಟಿ (ಹೆಸರು ಬದಲಾಯಿಸಲಾಗಿದೆ) ಯ ಸ್ನೇಹವನ್ನ ಬೆಳೆಸಿ ವೈವಾಹಿಕ ಜೀವನದಲ್ಲಿ ಆಗಿರುವ ಸಮಸ್ಯೆಗೆ ಮುಲಾಮ್ ಹಚ್ಚುವ ನಾಟಕವಾಡಿ ತಾನೇ ಒಳ್ಳೆ ಬಾಳನ್ನ ಕೊಡುತ್ತೇನೆ. ನೀನು ಗಂಡನಿಗೆ ಡೈವರ್ಸ್ ಕೊಟ್ಟು ಬಾ ಎಂದು ಒತ್ತಾಯ ಮಾಡಿದ್ದಾನೆ.

ಇಷ್ಟೇ ಅಲ್ಲ ಬ್ಲೇಡ್‌ನಿಂದ ಕೈ ಕುಯ್ದಿಕೊಂಡು ಆ ಬಳಿಕ ಕಾರ್ಕಳದ ದೇವಸ್ಥಾನದ ಬಾಗಿಲಲ್ಲೇ ಸಾಯುತ್ತೇನೆ ಎಂಬ ನಾಟಕವಾಡಿ ಆಕೆಯನ್ನ ಒಲಿಸಿಕೊಳ್ಳುವಲ್ಲಿ ಯಶಸ್ಸಾಗುತ್ತಾನೆ. ಯಾರ ಬಳಿಯಾದರೂ ಮಾತನಾಡಿದ್ರೆ ಸಾಕು ಹೊಡೆದು ಕ್ಷಮೆ ಕೇಳುವ ಸೈಕೋ ವರ್ತನೆ ಕೂಡ ಮಾಡ್ತಾನಂತೆ. ಇಷ್ಟೆಲ್ಲ ಆದ ಬಳಿಕ 2021ರ ಆಗಸ್ಟ್ 19 ರಂದು ಕಾರ್ಕಳದ ದೇವಾಲಯವೊಂದರಲ್ಲಿ ರಹಸ್ಯವಾಗಿ ಮದುವೆಯಾಗಿ ಆಕೆಯನ್ನ ದಕ್ಷಿಣ ಕನ್ನಡ ಜಿಲ್ಲೆಯ ಕಿನ್ನಿಗೋಳಿಯಲ್ಲಿ ಬಾಡಿಗೆ ರೂಂ ಮಾಡಿಕೊಂಡು ಆಕೆಯ ಜೊತೆ ಸುಮಾರು ಒಂಬತ್ತು ತಿಂಗಳ ಕಾಲ ಇರುತ್ತಾನೆ.

ಬೆಳಿಗ್ಗೆಯಾಗ್ತ ಇದ್ದಂತೆ ತನ್ನ ಕಾರ್ಕಳದ ಮನೆ , ಕೆಲಸ ಅಂತೆಲ್ಲ ಹೋಗಿ ರಾತ್ರಿ ಈಕೆಯ ಜೊತೆ ಇರುತ್ತಿದ್ದ. ಅದೊಂದು ದಿನ ಬ್ಯಾಂಕ್ ಕೆಲಸ ಮೈಸೂರಿಗೆ ಹೋಗಬೇಕಿದೆ. ಎರಡು ದಿನ ಊರಲ್ಲಿ ಇರಲ್ಲ ಎಂದು ಹೇಳಿ ಹೋದ ಸಂಜಯ್ ಪತ್ತೆ ಇರಲಿಲ್ಲ. ಎರಡು ಮೂರು ದಿನ ಆದರೂ ಪತ್ತೆ ಇಲ್ಲದ ಸಂಜಯ್‌ನಿಗೆ ಕರೆ ಮಾಡಿದರೆ ಸ್ವಿಚ್ ಆಫ್. ಮೈಸೂರು ಬ್ರ‍್ಯಾಂಚ್ ನ ಬ್ಯಾಂಕ್ ಮ್ಯಾನೇಜರ್ ಅವರನ್ನ ಕರೆ ಮೂಲಕ ವಿಚಾರಿಸಿದರೆ ತಾನು ಬರಲು ಹೇಳಿಲ್ಲ ಎನ್ನುವ ಪ್ರತಿಕ್ರಿಯೆ.

ಜೊತೆಗೆ ಈತ ಲೋನ್ ರಿಕವರಿ ಹೆಸರಲ್ಲಿ ಗ್ರಾಹಕರಿಗೆ ಲಕ್ಷ ಲಕ್ಷ ಪಂಗನಾಮ ವಿಚಾರ ಈಕೆಯ ಅರಿವಿಗೆ ಬರುತ್ತೆ. ಆಗಷ್ಟೇ ಗೊತ್ತಾಗಿದ್ದು ಈತ ದೊಡ್ಡ 420 ಅಂತ. ಈತನ ತಾಯಿಗೂ ಕರೆ ಮಾಡಿ ತಾನು ಆಕೆ ಪತ್ನಿ ತನ್ನ ಪತಿ ಸಂಜಯ್ ಎಲ್ಲಿದ್ದಾನೆ ಎಂದು ಆತನ ತಾಯಿ ಬಳಿ ವಿಚಾರಿಸಿದ್ದೇ ತಡ ನಾಪತ್ತೆಯಾದ ಸಂಜಯ್ ಈಕೆ ಬಳಿ ಬಂದು ನಾನು ಅಣ್ಣನಿಗೆ ಹುಡುಗಿ ನೋಡಲು ಹೋಗಿದ್ದೆ ಎಂಬ ಸಬೂಬು ಹೇಳಿ ತಂಗಿ ಹಾಗೂ ಅಣ್ಣನ ಮದುವೆ ಆದ ಮೇಲೆ ಮನೆಯಲ್ಲಿ ನಮ್ಮ ಮದುವೆ ವಿಚಾರ ಹೇಳುತ್ತೇನೆ ಎಂದು ಆ ಕ್ಷಣ ಸಮಾಧಾನ ಮಾಡುತ್ತಾನೆ.

ಕೆಲ ದಿನಗಳ ನಂತರ ಪಡುಬಿದ್ರಿ ಬೀಚ್ ಬಳಿ ಸಂಜಯ್ ಹಾಗೂ ಈಕೆ ಇದ್ದ ವೇಳೆ ಸಂಜಯ್ ತಾಯಿ ಸಂಗಡಿಗರೊAದಿಗೆ ಬಂದು ಈಕೆಯನ್ನ ಬೆದರಿಸಿ ಈಕೆ ಮೇಲೆ ಹಲ್ಲೆಗೆ ಮುಂದಾದಾಗ ಪಡುಬಿದ್ರಿ ಪೊಲೀಸರು ಬಂದು ಠಾಣೆಯಲ್ಲಿ ರಾಜಿ ಪಂಚಾಯತಿ ಮುಂದಾದಾಗ ಈಕೆ ದೂರು ಕೊಟ್ಟ ಬಳಿಕ ಚೆನ್ನಾಗಿ ನೋಡಿ ಕೊಳ್ಳುವ ಭರವಸೆ ನಾಟಕವಾಡಿದ ಸಂಜಯ್ ಕಾರ್ಕಳದ ರಾಮಮಂದಿರ ಬಳಿ ಆಕೆಯನ್ನ ಏಕಾಂಗಿಯಾಗಿ ಬಿಟ್ಟು ಹೋಗುತ್ತಾನೆ.

ಆ ಬಳಿಕ ಆತ ಎಲ್ಲಿದ್ದಾನೆ ಎನ್ನುವ ವಿಚಾರ ಈವರೆಗೆ ತಿಳಿದಿಲ್ಲ ಈಕೆಗೆ.ಈ ಬಗ್ಗೆ ಮಂಗಳೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರನ್ನ ನೀಡುತ್ತಾಳೆ.ದೂರು ಪಡೆದುಕೊಳ್ಳಲು ಮೀನಮೇಷ ಎಣಿಸಿದ ಪೊಲೀಸರಿಗೆ ಈಕೆ ಮಹಿಳಾ ಸಂಘಟನೆಯೊAದರ ಸಹಾಯದೊಂದಿಗೆ ದೂರನ್ನ ನೀಡಿದ್ದಾಳೆ. ಸದ್ಯ ಪೊಲೀಸ್ ಠಾಣೆಯಲ್ಲಿ ಸಂಜಯ್ ವಿರುದ್ದ ಎಫ್ ಐ ಆರ್ ದಾಖಲಾಗಿದೆ. ಈತನ ಮೋಸದಾಟಕ್ಕೆ ರೋಸಿಹೋದ ಈಕೆ ಕಾರ್ಕಳ ನಗರ ಪೊಲೀಸ್ ಠಾಣೆ, ಪಡುಬಿದ್ರಿ ಪೊಲೀಸ್ ಠಾಣೆ, ಮುಲ್ಕಿ ಪೊಲೀಸ್ ಠಾಣೆ ಕೊನೆಗೆ ಪಾಂಡೇಶ್ವರ ಮಹಿಳಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇಷ್ಡಾದರೂ ಸಂಜಯ್ ಮೇಲೆ ಯಾವ ಕ್ರಮನೂ ಆಗಿಲ್ಲ. ಹೀಗೆ ಆದರೆ ಮತ್ತಷ್ಟು ಯುವತಿಯರು, ಮಹಿಳೆಯರ ಜೀವನದಲ್ಲಿ ಈತ ಆಟ ಆಡೋದು ಪಕ್ಕಾ ಅನ್ನೋದು ದೂರು ನೀಡಿರುವ ಮೇಘಶ್ರೀ ಶೆಟ್ಟಿ (ಹೆಸರು ಬದಲಾಯಿಸಲಾಗಿದೆ) ಆರೋಪಿಸಿದ್ದಾಳೆ.

ಈತನನ್ನ ನಂಬಿ ಗಂಡನಿಗೂ ವಿಚ್ಚೇದನ ನೀಡಿ ಈಗ ಸಂಜಯ್ ನಡುನೀರಲ್ಲಿ ಕೈಬಿಟ್ಟು ಮೋಸಮಾಡಿದ್ದಾನೆ. ಜೊತೆಗೆ ಈಕೆಯಿಂದ ಪಡೆದ ಒಡವೆಗಳನ್ನ ಕೂಡ ಹಿಂದಿರುಗಿಸದೆ ಸಂಜಯ್ ಹಾಗೂ ಆತನ ತಾಯಿ ದರ್ಪ ತೋರಿಸುತ್ತಿದ್ದಾರೆ. ಆರಾಮಾಗಿ ತಿರುಗಾಡುತ್ತಿರುವ ಸಂಜಯ್ ಮೇಲೆ ಮಂಗಳೂರು ಪೊಲೀಸರು ಕ್ರಮ ಕೈಗೊಳ್ಳಬೇಕಿದೆ ಅಲ್ಲದೆ ನನ್ನ ಒಡವೆ ಹಿಂದುರಿಗಿಸುವAತೆ ಮಾಡಬೇಕಿದೆ ಎಂದು ಮಾಧ್ಯಮದ ಬಳಿ ನೊಂದ ಯುವತಿ ಅಳಲನ್ನ ತೋಡಿಕೊಂಡಿದ್ದಾಳೆ.