Friday, January 24, 2025
ಸುದ್ದಿ

ಏಣಗುಡ್ಡೆ ಯುವಜನ ಸೇವಾ ಸಂಘ, ರಾ.ಸೇ. ಯೋಜನಾ ಘಟಕ, ತ್ರಿಶಾ ವಿದ್ಯಾ ಕಾಲೇಜು ಕಟಪಾಡಿ, ಉಡುಪಿ ಜಿಲ್ಲಾಸ್ಪತ್ರೆ ರಕ್ತನಿಧಿ ವಿಭಾಗ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸ್ವಯಂ ರಕ್ತದಾನ ಶಿಬಿರ – ಕಹಳೆ ನ್ಯೂಸ್

ಏಣಗುಡ್ಡೆ ಯುವಜನ ಸೇವಾ ಸಂಘ, ರಾ.ಸೇ. ಯೋಜನಾ ಘಟಕ, ತ್ರಿಶಾ ವಿದ್ಯಾ ಕಾಲೇಜು ಕಟಪಾಡಿ, ಉಡುಪಿ ಜಿಲ್ಲಾಸ್ಪತ್ರೆ ರಕ್ತನಿಧಿ ವಿಭಾಗ ಹಾಗೂ ವಿವಿಧ ಸಂಘ ಸಂಸ್ಥೆಗಳ ಆಶ್ರಯದಲ್ಲಿ ಸ್ವಯಂ ರಕ್ತದಾನ ಶಿಬಿರ ಹಾಗೂ ಉಚಿತ ಆಯುಷ್ಮಾನ್ ಕಾರ್ಡ್ ನೋಂದಣಿ ಶಿಬಿರವು ಕಟಪಾಡಿ ತ್ರಿಶಾ ವಿದ್ಯಾ ಕಾಲೇಜ್‌ನಲ್ಲಿ ರವಿವಾರ ನಡೆಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ನೂತನ ಸಂಘವನ್ನು ವೈದ್ಯರಾದ ಡಾ| ಉದಯ ಕುಮಾರ್ ಶೆಟ್ಟಿ ಉದ್ಘಾಟಿಸಿದ್ದು, ಯುವಜನ ಸೇವಾ ಸಂಘದ ಅಧ್ಯಕ್ಷ ಪ್ರಮೋದ್‌ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ತ್ರಿಶಾ ಸಂಧ್ಯಾಕಾಲೇಜ್ ಪ್ರಾಂಶುಪಾಲೆ ಪ್ರೊ| ಇಂದುರೀತಿ, ಆರ್ಕಿಟೆಕ್ಟ್‌ ಪ್ರಮುಖ್ ರೈ, ತ್ರಿಶಾ ಕಾಲೇಜ್ ನ ಆಡಳಿತಾಧಿಕಾರಿ ಎ.ಕೆ. ಉದ್ಯಾವರ,ಕಾಪು ಪೊಲೀಸ್ ಠಾಣೆ ಎಎಸ್‌ಐ

ದಯಾನಂದ, ಜಿಲ್ಲಾಸತ್ರೆಯ ರಕ್ತನಿಧಿ ವಿಭಾಗದ ವೈದ್ಯಾಧಿಕಾರಿ ಡಾ|ವೀಣಾ ಕುಮಾರಿ, ತ್ರಿಶಾ ವಿದ್ಯಾಕಾಲೇಜ್ ರಾ.ಸೇ. ಯೋಜನಾಧಿಕಾರಿ ಸಂತೋಷ್ ಎ. ಶೆಟ್ಟಿ, ಜೈ ತುಲುನಾಡು ಸಂಘಟನೆಯ ರಾಜೇಶ್, ಸತ್ಯದ ತುಳುವೆರ್ ಸಂಘಟನೆಯ ಪ್ರವೀಣ್ ಕುರ್ಕಾಲು, ಜ್ಯೂನಿಯರ್ ಫ್ರೆಂಡ್ಸ್‌ಕೊರಂಗ್ರಪಾಡಿಯ ಚೇತನ್, ಸಂಗಮ್ ಫ್ರೆಂಡ್ಸ್‌ ಕಟಪಾಡಿಯಜಯಕರ್, ಗ್ರಾಮ ಒನ್ ಕೇಂದ್ರದ ಕೋಟೆ ಸಹನಾ ಕುಂದರ್, ರತ್ನಾಕರ್ ಉಡುಪಿ, ಮಹೇಶ್ ಎನ್.ಅಂಚನ್ ಉಪಸ್ಥಿತರಿದ್ದರು.

ಶಿಬಿರದಲ್ಲಿ 82 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಯುವಜನ ಸೇವಾ ಸಂಘದ ಕಾರ್ಯದರ್ಶಿ ಸಂತೋಷ್ ಎನ್.ಎಸ್. ಸ್ವಾಗತಿಸಿದರು. ಕೋಶಾಧಿಕಾರಿ ಸನತ್ ಕೋಟ್ಯಾನ್ ವಂದಿಸಿದರು. ಶ್ರೀನಿಧಿ ನಿರೂಪಿಸಿದರು.