Friday, January 24, 2025
ಸುದ್ದಿ

ಶಿವನಗರ ಪ್ರದೇಶದಲ್ಲಿ ರಾಜ ಕಾಲುವೆ ತಡೆಗೋಡೆ ನಿರ್ಮಾಣ : ಶಾಸಕ ಕಾಮತ್‌ ಅವರಿಂದ ಶಿಲಾನ್ಯಾಸ – ಕಹಳೆ ನ್ಯೂಸ್

ಮಂಗಳೂರು: ಮಹಾನಗರ ಪಾಲಿಕೆಯ 56 ಮಂಗಳಾದೇವಿ ವಾರ್ಡ್‌ ಮತ್ತು 46ನೇ ಕಂಟೋನ್ಮೆಂಟ್‌ ವಾರ್ಡ್‌ ಸೇರುವ ಜಾಗದ ಶಿವನಗರ ಪ್ರದೇಶದಲ್ಲಿ 56ನೇ ಮಂಗಳಾದೇವಿ ವಾರ್ಡಿನ ಪ್ರಮುಖ ರಾಜ ಕಾಲುವೆಯ ತಡೆಗೋಡೆ ನಿರ್ಮಾಣಕ್ಕೆ ಶಿಲಾನ್ಯಾಸವನ್ನು ನೆರವೇರಿಸಲಾಯಿತು.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು

ಮಂಗಳೂರು ದಕ್ಷಿಣ ಶಾಸಕ ಡಿ. ವೇದವ್ಯಾಸ ಕಾಮತ್‌ ಅವರು ಶಿಲಾನ್ಯಾಸ ಕಾರ್ಯ ನೆರವೇರಿಸಿದರು. ಬಳಿಕ ಮಾತನಾಡಿದ ಅವರು, 56ನೇ ವಾರ್ಡಿನ ಕಾರ್ಪೊರೇಟರ್‌ ಹಾಗೂ ಮಾಜಿ ಮೇಯರ್‌ ಪ್ರೇಮಾನಂದ ಶೆಟ್ಟಿ ಮತ್ತು 46ನೇ ವಾರ್ಡಿನ ಕಾರ್ಪೋರೇಟರ್‌ ಹಾಗೂ ಮಾಜಿ ಮೇಯರ್‌ ದಿವಾಕರ್‌ ಅವರ ವಿಶೇಷ ಮುತುವರ್ಜಿಯೊಂದಿಗೆ ಈ ಭಾಗದ ಜನರ ಸಮಸ್ಯೆಯ ನಿವಾರಣೆಗೆ ಕಾಮಗಾರಿಗಳನ್ನು ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.

ತಡೆಗೋಡೆ ನಿರ್ಮಾಣಕ್ಕೆ 1.75 ಕೋಟಿ ರೂ, ರಸ್ತೆಗೆ 25 ಲಕ್ಷ ರೂ- ಒಟ್ಟು 2 ಕೋಟಿ ರೂಗಳ ಕಾಮಗಾರಿಗಳನ್ನು ಇಲ್ಲಿ ನಡೆಸಲಾಗುತ್ತದೆ. ಮಳೆ ನೀರು ಮನೆಗಳಿಗೆ ನುಗ್ಗುವುದನ್ನು ತಡೆಯಲು ತಡೆಗೋಡೆ ಕಾಮಗಾರಿ ನಡೆಸಲಾಗುತ್ತಿದೆ. ಸ್ಥಳೀಯರ ಸಂಕಷ್ಟ ನಿವಾರಣೆಗೆ ಬದ್ಧ. ಮಂಗಳೂರು ನಗರದಲ್ಲಿ ಕೃತಕ ನೆರೆ ಹಾವಳಿ ತಡೆಗಟ್ಟುವ ದೃಷ್ಟಿಯಿಂದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಮತ್ತು ಸಣ್ಣ ನೀರಾವರಿ ಸಚಿವ ಜೆ.ಸಿ ಮಾಧುಸ್ವಾಮಿ ಅವರು ಒಟ್ಟು 100 ಕೋಟಿ ರೂ.ಗಳ ಅನುದಾನ ಒದಗಿಸಿದ್ದಾರೆ. ಈ ಅನುದಾನ ಬಳಸಿಕೊಂಡು ನಗರದಲ್ಲಿ ಮಳೆಗಾಲದ ಸಮಸ್ಯೆಗಳ ನಿವಾರಣೆಗೆ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಶಾಸಕ ಕಾಮತ್‌ ಹೇಳಿದರು.

ಅತಿವೇಗದಲ್ಲಿ ಎಲ್ಲರ ಸಹಕಾರದೊಂದಿಗೆ ಈ ಕಾಮಗಾರಿ ನಡೆಸಲಾಗುತ್ತಿದೆ. ಮುಂದಿನ ಮಳೆಗಾಲದಲ್ಲಿ ಈ ಭಾಗದ ಜನರಿಗೆ ನೆರೆ ನೀರು ನುಗ್ಗುವ ಸಮಸ್ಯೆ ಬಹಳಷ್ಟು ಕಡಿಮೆಯಾಗಲಿದೆ ಎಂದು ಶಾಸಕರು ನುಡಿದರು.

ಮಂಗಳೂರು ಮಹಾನಗರ ಪಾಲಿಕೆಯ ಉಪಮೇಯರ್ ಪೂರ್ಣಿಮಾ, ಸ್ಥಾಯಿ ಸಮಿತಿಯ ಅಧ್ಯಕ್ಷರಾದ ಶಕಿಲಾ ಕಾವಾ, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ, ದಿವಾಕರ್ ಪಾಂಡೇಶ್ವರ, ಮುಖಂಡರಾದ ಪ್ರಕಾಶ್ ಬಿಎನ್ ಶಿವನಗರ, ಪೃಥ್ವಿ, ನವೀನ್ ಕಿಲ್ಲೆ, ಲೋಕೇಶ್ ಅತ್ತಾವರ, ಆನಂದ್ ಶೆಟ್ಟಿ, ಜಯಂತ್ ದೇವಾಡಿಗ, ದಿವಾಕರ್, ಪ್ರದೀಪ್, ರಾಮಣ್ಣ, ಅನಿಲ್ ಹೊಯ್ಗೆಬಜಾರ್, ರಾಜೇಂದ್ರ ಮಂಗಳಾದೇವಿ, ನಾಗರಾಜ್ ಪೂಜಾರಿ, ಯಶವಂತ ಪೂಜಾರಿ, ನಾಗೇಶ್ ಶಿವನಗರ, ನಿತಿನ್ ಕಾಮತ್ ಮುಂತಾದವರು ಉಪಸ್ಥಿತರಿದ್ದರು.