Tuesday, November 26, 2024
ಸುದ್ದಿ

ನವ ಮಂಗಳೂರು ಬಂದರಿಗೆ ಆಗಮಿಸಿದ ‘ಎಂಎಸ್ ನಾಟಿಕಾ’ ಹಡಗು – ಕಹಳೆ ನ್ಯೂಸ್

ಪ್ರಸ್ಕತ ಋತುವಿನ 5ನೇ ಪ್ರಯಾಣಿಕರ ಹಡಗು ‘ಎಂಎಸ್ ನಾಟಿಕಾ’ ನವ ಮಂಗಳೂರು ಬಂದರಿಗೆ ಆಗಮಿಸಿದೆ. 550 ಪ್ರಯಾಣಿಕರು ಹಾಗೂ 400 ಸಿಬ್ಬಂದಿಯನ್ನು ಒಳಗೊಂಡ ಹಡಗು ಬರ್ತ್ ಸಂಖ್ಯೆ 4ರಲ್ಲಿ ಬಂದು ನಿಂತಿದೆ. ಈ ಹಡಗಿನ ಒಟ್ಟು ಉದ್ದ 180.5 ಮೀಟರ್. ಇದು 30,277 ಟನ್ ಭಾರವನ್ನು ಸಾಗಿಸುವ ಸಾಮರ್ಥ್ಯ ಹೊಂದಿದೆ. ಈ ಹಡಗು ಮಸ್ಕತ್‌ನಿಂದ ಮಾಲ್ಡಿವ್ಸ್ ಮೂಲಕ ಭಾರತಕ್ಕೆ ಆಗಮಿಸಿದೆ. ಈ ಹಡಗು ಹಿಂದೆ ಮುಂಬೈ ಹಾಗೂ ಮುರ್ಮುಗೋವಾ ಬಂದರಿನಲ್ಲಿ ನಿಂತಿತ್ತು. ಈ ಹಡಗಿನಲ್ಲಿ ಆಗಮಿಸಿದ ಪ್ರಯಾಣಿಕರನ್ನು ಯಕ್ಷಗಾನ ಹಾಗೂ ಚೆಂಡೆಯ0ತಹ ಸಾಂಪ್ರದಾಯಿಕ ಕಲೆಗಳ ಮೂಲಕ ಸ್ವಾಗತಿಸಲಾಯಿತು. ಈ ದೃಶ್ಯ ನೋಡುಗರ ಕಣ್ಮಣ ಸೆಳೆದಿದೆ. ಬಳಿಕ ಪ್ರಯಾಣಿಕರು 2 ಸೆಟಲ್ ಬಸ್‌ಗಳು ಸೇರಿದಂತೆ 15 ಬಸ್‌ಗಳಲ್ಲಿ ಮಂಗಳೂರಿನ ವಿವಿಧ ಪ್ರವಾಸಿ ಸ್ಥಳ, ದೇವಾಲಯ, ಚರ್ಚ್, ಸ್ಥಳೀಯ ಮಾರುಕಟ್ಟೆ ಹಾಗೂ ಇತರ ಸ್ಥಳಗಳಿಗೆ ಭೇಟಿ ನೀಡಿದ್ದಾರೆ.

ಜಾಹೀರಾತು
ಜಾಹೀರಾತು
ಜಾಹೀರಾತು

ಜಾಹೀರಾತು
ಜಾಹೀರಾತು
ಜಾಹೀರಾತು